ಟಾಪ್ ಧಾರಾವಾಹಿಯಾಗಿರುವಾಗ ಮತ್ತೊಂದು ಎಡವಟ್ಟು ಮಾಡಿಕೊಂಡ ಪುಟ್ಟಕ್ಕನ ಮಕ್ಕಳು. ಅಸಮಾಧಾನ ವ್ಯಕ್ತ ಪಡಿಸಿದ ಅಭಿಮಾನಿಗಳು. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳು ಒಂದಕ್ಕಿಂತ ಒಂದು ಮಿಗಿಲೆನ್ನಿಸುವ ಹಾಗೆ ಪ್ರಸಾರ ಆಗುತ್ತಿವೆ. ಇನ್ನು ರೇಟಿಂಗ್ ವಿಚಾರದಲ್ಲಿ ಪುಟ್ಟಕ್ಕನ ಮಕ್ಕಳು ಹಾಗೂ ಗಟಿಮೇಳ ಧಾರವಾಹಿ ಗಳ ನಡುವೆ ಸ್ಪರ್ಧೆ ಹೆಚ್ಚಾಗಿದೆ. ಪ್ರತಿವಾರ ಪುಟ್ಟಕ್ಕನ ಮಕ್ಕಳು ಧಾರವಾಹಿ ನಂಬರ್ ಒನ್ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಕಳೆದ ಬಾರಿ ಗಟ್ಟಿಮೇಳ ಧಾರಾವಾಹಿ ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇನ್ನು ನಟಿ ಉಮಾಶ್ರೀ ಅವರ ಪರ್ಫಾರ್ಮೆನ್ಸ್ ಕೂಡ ಈ ಧಾರವಾಹಿಯಲ್ಲಿ ನೆಕ್ಸ್ಟ್ ಲೆವೆಲ್ ನಲ್ಲಿ ಕಾಣಿಸಿಕೊಳ್ಳುತ್ತಿದೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸ್ನೇಹ ಹಾಗೂ ಘಂಟಿಯಾನ್ ಪ್ರೀತಿಯ ವಿಚಾರ ಮೊದಲಿನಿಂದಲೂ ಕೂಡ ಪ್ರತಿ ಸಂಚಿಕೆಯಲ್ಲಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನೇಹಾ ತನ್ನ ತಾಯಿ ಹಾಗೂ ಅಕ್ಕನ ಜೊತೆಗೆ ಮಾತು ಬಿಟ್ಟಿದ್ದಳು. ಈಗ ಅವರು ಕೂಡ ಅಮ್ಮನಿಗೆ ನಡೆದಿರುವ ಸನ್ಮಾನದಲ್ಲಿ ಮತ್ತೊಮ್ಮೆ ಒಂದಾಗಿದ್ದಾರೆ ಇದು ಪ್ರೇಕ್ಷಕರ ಕಣ್ಣಂಚಿನಲ್ಲಿ ಭಾವುಕತೆಯ ಕಣ್ಣೀರು ಜಿನುಗುವಂತೆ ಮಾಡಿದೆ. ಆದರೆ ಈ ಸಂಚಿಕೆಯಲ್ಲಿ ಕೆಲ ವಿಚಾರಗಳು ಪ್ರೇಕ್ಷಕರು ಧಾರವಾಹಿ ಕುರಿತಂತೆ ಟ್ರೋಲ್ ಮಾಡುವಂತೆ ಆಗಿದೆ.

puttakkana makkalu | ಟಾಪ್ ಧಾರಾವಾಹಿಯಾಗಿರುವಾಗ ಮತ್ತೊಂದು ಎಡವಟ್ಟು ಮಾಡಿಕೊಂಡ ಪುಟ್ಟಕ್ಕನ ಮಕ್ಕಳು. ಅಸಮಾಧಾನ ವ್ಯಕ್ತ ಪಡಿಸಿದ ಅಭಿಮಾನಿಗಳು. ಯಾಕೆ ಗೊತ್ತೇ??
ಟಾಪ್ ಧಾರಾವಾಹಿಯಾಗಿರುವಾಗ ಮತ್ತೊಂದು ಎಡವಟ್ಟು ಮಾಡಿಕೊಂಡ ಪುಟ್ಟಕ್ಕನ ಮಕ್ಕಳು. ಅಸಮಾಧಾನ ವ್ಯಕ್ತ ಪಡಿಸಿದ ಅಭಿಮಾನಿಗಳು. ಯಾಕೆ ಗೊತ್ತೇ?? 3

ಇಷ್ಟೊಂದು ಚೆನ್ನಾಗಿ ಒಳ್ಳೆಯ ರೇಟಿಂಗ್ ಗಳೊಂದಿಗೆ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿ ಕಳೆದ ನಾಲ್ಕು ದಿನಗಳಿಂದ ಪ್ರೇಕ್ಷಕರಿಂದ ಟೀಕೆಗೆ ಒಳಗಾಗುತ್ತಿರುವುದು ಯಾಕೆ ಎನ್ನುವುದಾಗಿ ನೀವು ಅನುಮಾನವನ್ನು ವ್ಯಕ್ತಪಡಿಸಬಹುದಾಗಿದೆ. ಆದರೆ ಇಲ್ಲೊಂದು ನ್ಯಾಯವಾದ ಕಾರಣವೂ ಕೂಡ ಇದೆ ಅದನ್ನು ನಾವು ಗಮನಿಸಬೇಕಾಗುತ್ತದೆ. ಹೌದು ಕಳೆದ ನಾಲ್ಕು ದಿನಗಳಿಂದ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಬಹುತೇಕ ಎಲ್ಲಾ ದೃಶ್ಯಗಳು ಕೂಡ ಯಜಮಾನ ಸಿನಿಮಾದ ಕಾಪಿ ಎಂದು ಎಲ್ಲರೂ ಹೇಳುತ್ತಿದ್ದಾರೆ. ಯಜಮಾನ ಸಿನಿಮಾದಲ್ಲಿ ವಿಷ್ಣುವರ್ಧನ್ ರವರು ತಮ್ಮ ಸಹೋದರ ರಿಗಾಗಿ ಕಷ್ಟಪಡುವ ದೃಶ್ಯಗಳು ಹಾಗೂ ಕಥೆ ಪ್ರೇಕ್ಷಕರ ಕಣ್ಮನವನ್ನು ಗೆದ್ದು ಎಲ್ಲರೂ ಭಾವುಕರಾಗುವಂತೆ ಮಾಡಿತ್ತು.

ಇದೇ ಸಿನಿಮಾದಲ್ಲಿ ಶಶಿಕುಮಾರ್ ಅವರ ಪದವಿ ಸಮಾರಂಭಕ್ಕೆ ವಿಷ್ಣುವರ್ಧನ್ ರವರು ಬಂದಾಗ ಸೆಕ್ಯೂರಿಟಿ ರವರು ಅವರನ್ನು ಅವಮಾನಗೊಳಿಸಿ ಆಚೆಗೆ ಹಾಕುವ ದೃಶ್ಯಗಳನ್ನು ನೀವು ನೋಡಿರಬಹುದು. ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಕೂಡ ಉಮಾಶ್ರೀ ಅವರಿಗೆ ಇದೇ ರೀತಿಯ ಅವಮಾನಗಳು ಎದುರಾಗುತ್ತವೆ. ಯಜಮಾನ ಚಿತ್ರದಲ್ಲಿ ಇರುವಂತಹ ದೃಶ್ಯವನ್ನು ಇಲ್ಲಿ ಕಾಪಿ ಮಾಡಲಾಗಿದೆ ಎಂಬುದಾಗಿ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಧಾರವಾಹಿ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂತಹ ಕಾಪಿ ದೃಶ್ಯವನ್ನು ತೆಗೆದುಕೊಂಡು ಇಷ್ಟುದ್ದ ಎಳೆಯುವ ಕೆಲಸ ಬೇಕಿತ್ತ ಎನ್ನುವುದಾಗಿ ಧಾರವಾಹಿ ತಂಡಕ್ಕೆ ಪ್ರಶ್ನೆಯನ್ನು ಎಸಗಿದ್ದಾರೆ.

ಅದರಲ್ಲೂ ಕೆಲವರು ಸ್ನೇಹ ಐಎಎಸ್ ತಯಾರಿ ಮಾಡುತ್ತಿದ್ದದ್ದನ್ನು ಸಂಪೂರ್ಣವಾಗಿ ತೋರಿಸಿ ಎನ್ನುವುದಾಗಿ ಕೂಡ ಕಾಮೆಂಟ್ ಹಾಕಿರುವುದು ಇಲ್ಲಿ ಕಂಡು ಬಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಪುಟ್ಟಕ್ಕನ ಮಕ್ಕಳು ಧಾರವಾಹಿಯ ಈ ಸಂಚಿಕೆಗಳಲ್ಲಿ ನೈಜತೆ ಗಿಂತ ದೂರವಾದಂಥ ಹಲವಾರು ದೃಶ್ಯಗಳನ್ನು ಪ್ರಸಾರ ಮಾಡಲಾಗಿದೆ ಎಂಬುದಾಗಿ ಕೂಡ ಪ್ರೇಕ್ಷಕರು ದೂರನ್ನು ನೀಡಿದ್ದಾರೆ. ಪುಟ್ಟಕ್ಕನ ಕ್ಯಾರೆಕ್ಟರ್ ನಲ್ಲಿ ನಟಿಸುತ್ತಿರುವ ಉಮಾಶ್ರೀಯವರು ಉತ್ತಮ ನಟನೆಯನ್ನು ಮಾಡುತ್ತಿದ್ದಾರೆ ಆದರೆ ಆ ಪಾತ್ರ ಅಷ್ಟೊಂದು ನಾಟಕೀಯವಾಗಿ ಇರಬಾರದಿತ್ತು ಅಲ್ಲಿ ನೈಜತೆ ಎದ್ದು ಕಾಣಬೇಕು ಎನ್ನುವುದಾಗಿದೆ ಪ್ರೇಕ್ಷಕರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

kanti puttakkana makkalu | ಟಾಪ್ ಧಾರಾವಾಹಿಯಾಗಿರುವಾಗ ಮತ್ತೊಂದು ಎಡವಟ್ಟು ಮಾಡಿಕೊಂಡ ಪುಟ್ಟಕ್ಕನ ಮಕ್ಕಳು. ಅಸಮಾಧಾನ ವ್ಯಕ್ತ ಪಡಿಸಿದ ಅಭಿಮಾನಿಗಳು. ಯಾಕೆ ಗೊತ್ತೇ??
ಟಾಪ್ ಧಾರಾವಾಹಿಯಾಗಿರುವಾಗ ಮತ್ತೊಂದು ಎಡವಟ್ಟು ಮಾಡಿಕೊಂಡ ಪುಟ್ಟಕ್ಕನ ಮಕ್ಕಳು. ಅಸಮಾಧಾನ ವ್ಯಕ್ತ ಪಡಿಸಿದ ಅಭಿಮಾನಿಗಳು. ಯಾಕೆ ಗೊತ್ತೇ?? 4

ಇಷ್ಟೆಲ್ಲ ಟೀಕೆ ಟ್ರೋಲ್ ಗಳ ನಂತರವೂ ಕೂಡ ಉಮಾಶ್ರೀ ಅವರು ಈ ದೃಶ್ಯದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಅತ್ಯುತ್ತಮವಾದ ನಟನೆಯನ್ನು ನಿರ್ವಹಿಸಿದ್ದರು. ಉಮಾಶ್ರೀಯವರ ನಟನೆಯ ಕುರಿತಂತೆ ಎರಡು ಮಾತಿಲ್ಲ ಎನ್ನುವುದಾಗಿ ಎಲ್ಲಾ ಪ್ರೇಕ್ಷಕರು ಕೂಡ ಅವರನ್ನು ಹಾಡಿ ಹೊಗಳಿದ್ದಾರೆ. ಒಟ್ಟಾರೆಯಾಗಿ ಈ ದೃಶ್ಯದಲ್ಲಿ ಉಮಾಶ್ರೀ ಅವರ ನಟನೆ ಎಲ್ಲರಿಗೂ ಇಷ್ಟವಾಗಿದೆ ಆದರೆ ಈ ದೃಶ್ಯವನ್ನು ಯಜಮಾನ ಚಿತ್ರದಿಂದ ಕದ್ದಿರುವುದು ಎಲ್ಲರಿಗೂ ಅಸಮಾಧಾನಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.