ಎಲ್ಲರಿಗೂ ಅನುಮಾನವಿದ್ದಾಗ ರಾಹುಲ್ ವಿಕೆಟ್ ಪಡೆಯಲು ಡಿ.ಆರ್.ಎಸ್ ತೆಗೆದುಕೊಳ್ಳಿ ಎಂದು ಹೇಳಿದ್ದು ಯಾರು ಗೊತ್ತೇ?? ಭೇಷ್ ಎಂದ ನೆಟ್ಟಿಗರು.

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ಬಹಳಷ್ಟು ರೋಚಕವಾಗಿ ಸಾಗುತ್ತಿದೆ. ಪ್ರತಿ ಪಂದ್ಯದಲ್ಲೂ ಸಹ ಕೊನೆಯ ಎಸೆತದಲ್ಲಿ ಫಲಿತಾಂಶ ನಿರ್ಧಾರವಾಗುತ್ತಿದೆ. ಅಂಕಪಟ್ಟಿಯಲ್ಲಿ ಕೇವಲ ಎರಡು ತಂಡಗಳನ್ನು ಹೊರತುಪಡಿಸಿದರೇ, ಉಳಿದೆಲ್ಲಾ ತಂಡಗಳು ಪ್ಲೇ ಆಫ್ ಗೆ ಅರ್ಹತೆ ಪಡೆಯಲು ತೀವ್ರ ಪೈಪೋಟಿ ನಡೆಸುತ್ತಿವೆ. ಈ ನಡುವೆ ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯಲ್ಲಿ ಬಲಿಷ್ಠ ಅನಿಸಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಹತ್ತೊಂಬತ್ತು ರನ್ ಗಳಿಂದ ಸೋಲಿಸಿತು.

ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡ 20 ಓವರ್ ಗಳಲ್ಲಿ 182 ರನ್ ಗಳಿಸಿತು. ನಾಯಕ ಫಾಪ್ ಡು ಪ್ಲೇಸಿಸ್ ಅವರು ಕೇವಲ 4 ರನ್ ಗಳಿಂದ ಶತಕವಂಚಿತರಾದರು. ಆ ನಂತರ ಬ್ಯಾಟಿಂಗ್ ಗೆ ಇಳಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಉತ್ತಮವಾಗಿ ಚೇಸ್ ಮಾಡುತ್ತಿದ್ದರು, ನಿಯಮಿತವಾಗಿ ವಿಕೇಟ್ ಕಳೆದುಕೊಳ್ಳುತ್ತಾ ಸಾಗಿದ ಕಾರಣ ಸೋಲನ್ನು ಅನುಭವಿಸಬೇಕಾಯಿತು. ಆರ್ಸಿಬಿ ತಂಡದ ಪರ ವೇಗಿ ಜೋಶ್ ಹೇಜಲ್ವುಡ್ 4 ವಿಕೇಟ್ ಗಳಿಸಿ ಗಮನಸೆಳೆದರು.ಈ ನಡುವೆ ಪಂದ್ಯದ ಅತ್ಯಂತ ಮಹತ್ವದ ವಿಕೇಟ್ ಆಗಿದ್ದ ಕೆ.ಎಲ್.ರಾಹುಲ್ ರವರ ವಿಕೇಟ್ ಪತನದ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿತ್ತು.

drs rcb rahul | ಎಲ್ಲರಿಗೂ ಅನುಮಾನವಿದ್ದಾಗ ರಾಹುಲ್ ವಿಕೆಟ್ ಪಡೆಯಲು ಡಿ.ಆರ್.ಎಸ್ ತೆಗೆದುಕೊಳ್ಳಿ ಎಂದು ಹೇಳಿದ್ದು ಯಾರು ಗೊತ್ತೇ?? ಭೇಷ್ ಎಂದ ನೆಟ್ಟಿಗರು.
ಎಲ್ಲರಿಗೂ ಅನುಮಾನವಿದ್ದಾಗ ರಾಹುಲ್ ವಿಕೆಟ್ ಪಡೆಯಲು ಡಿ.ಆರ್.ಎಸ್ ತೆಗೆದುಕೊಳ್ಳಿ ಎಂದು ಹೇಳಿದ್ದು ಯಾರು ಗೊತ್ತೇ?? ಭೇಷ್ ಎಂದ ನೆಟ್ಟಿಗರು. 2

ಹೌದು ರಾಹುಲ್ ವಿಕೇಟ್ ಡಿ.ಆರ್.ಎಸ್ ತೆಗೆದುಕೊಂಡ ಮೇಲೆ ಬಂದಿತು. ಹರ್ಷಲ್ ಪಟೇಲ್ ಬೌಲಿಂಗ್ ನಲ್ಲಿ ರಾಹುಲ್ ಬ್ಯಾಟ್ ಸವರಿದ ಚೆಂಡು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೈ ಸೇರಿತು. ಅಂಪೈರ್ ಮೊದಲು ಔಟ್ ನೀಡಿರಲಿಲ್ಲ. ಆದರೇ ಆರ್ಸಿಬಿ ರಿವೀವ್ ತೆಗೆದುಕೊಂಡ ನಂತರ ಅಂಪೈರ್ ತೀರ್ಪು ಔಟ್ ಎಂದು ಬದಲಾಯಿತು. ಆದರೇ ಈ ಡಿ.ಆರ್.ಎಸ್ ತೆಗೆದುಕೊಳ್ಳಲು ಯಾರು ಕಾರಣ ಎಂಬುದನ್ನು ಈಗ ವಿಕೇಟ್ ಕೀಪರ್ ದಿನೇಶ್ ಕಾರ್ತಿಕ್ ಬಹಿರಂಗಪಡಿಸಿದ್ದಾರೆ. ಹೌದು ಡಿ.ಆರ್.ಎಸ್ ತೆಗೆದುಕೊಳ್ಳಿ ಎಂದು ಹೇಳಿದ್ದು ಕಿಂಗ್ ಕೊಹ್ಲಿ ವಿರಾಟ್ ಕೊಹ್ಲಿಯಂತೆ. ತಂಡದ ಇತರ ಆಟಗಾರರು ಬೇಡ ಎಂದರೂ, ವಿರಾಟ್ ಒತ್ತಾಸೆಯಂತೆ ರಿವೀವ್ ತೆಗೆದುಕೊಂಡ ಕಾರಣ ಕೆ.ಎಲ್.ರಾಹುಲ್ ವಿಕೇಟ್ ಆರ್ಸಿಬಿ ಪಾಲಾಯಿತು. ಆರ್ಸಿಬಿ ಗೆಲುವಿಗೆ ಇದು ಪ್ರಮುಖ ಕಾರಣವಾಯಿತು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Comments are closed.