ಈ ಬಾರಿಯ ಹುಟ್ಟುಹಬ್ಬವನ್ನು ಮೇಘನಾ ರಾಜ್ ರವರು ಹೇಗೆ ಆಚರಿಸಿಕೊಂಡಿದ್ದಾರೆ ಗೊತ್ತೇ?? ಬಿಡುಗಡೆಯಾದ ವಿಡಿಯೋ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಿರುಸರ್ಜ ಅವರನ್ನು ಕಳೆದುಕೊಂಡ ಮೇಲೆ ಮೇಘನಾ ರಾಜ್ ರವರು ಕೊಂಚಮಟ್ಟಿಗೆ ಎಲ್ಲಾ ಕಾರ್ಯಕ್ರಮಗಳಿಂದ ಹಾಗೂ ಸಾರ್ವಜನಿಕ ಸಮಾರಂಭಗಳಿಂದ ದೂರವಿದ್ದರು. ಆದರೆ ಈಗ ಮಗ ಜೂನಿಯರ್ ಚಿರು ಸರ್ಜಾ ರಾಯನ್ ಗಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಹಾಗೂ ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ.

ತಮ್ಮ ಮಗನ ಅದ್ದೂರಿ ನಾಮಕರಣ ಹಾಗೂ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಕೂಡ ಅದ್ದೂರಿಯಾಗಿ ಮಾಡಿದ್ದರು. ಒಬ್ಬ ತಾಯಿಯಾಗಿ ತನ್ನ ಮಗ ಯಾವುದೇ ಕೊರತೆ ಇಲ್ಲದೆ ಬದುಕಬೇಕು ಎನ್ನುವ ನಿಟ್ಟಿನಲ್ಲಿ ಮತ್ತೊಮ್ಮೆ ಕೆಲಸಕ್ಕೆ ಅಂದರೆ ನಟನೆಯ ವೃತ್ತಿಗೆ ಕಂಬ್ಯಾಕ್ ಮಾಡಿದ್ದಾರೆ. ಇನ್ನು ಈಗಾಗಲೇ ಸೃಜನ್ ಲೋಕೇಶ್ ರವರ ಸಿನಿಮಾದಲ್ಲಿ ಮಾತ್ರವಲ್ಲದೆ ಇನ್ನು ಹಲವಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಮೇಘನಾರಾಜ್ ರವರು ಅಲ್ಲಿಯೂ ಕೂಡ ಪ್ರಾಡಕ್ಟ್ ಪ್ರಮೋಷನ್ ಮಾಡುತ್ತಿರುತ್ತಾರೆ. ಒಟ್ಟಾರೆಯಾಗಿ ತಮ್ಮ ಮಗನ ಭವಿಷ್ಯಕ್ಕಾಗಿ ಎಷ್ಟು ಸಾಧ್ಯವೋ ಅಷ್ಟು ದುಡಿಯುತ್ತಿದ್ದಾರೆ.

ಚಿರು ಸರ್ಜಾ ರವರು ಹೋದನಂತರ ಕೇವಲ ತಾಯಿಯಾಗಿ ಮಾತ್ರವಲ್ಲದೆ ತಂದೆಯಾಗಿ ಕೂಡ ಮಗುವಿನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಇನ್ನು ನಿನ್ನೆಯಷ್ಟೇ ಮೇಘನಾ ರಾಜ್ ರವರು ತಮ್ಮ ಜನ್ಮದಿನಾಚರಣೆಯನ್ನು ಸ್ನೇಹಿತರೊಂದಿಗೆ ಆಚರಿಸಿದ್ದರು. ಹೌದು ಗೆಳೆಯರೇ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಚಿರು ಸರ್ಜಾ ಅವರೊಂದಿಗಿರುವ ಫೋಟೋವನ್ನು ಹಂಚಿಕೊಂಡು ಭಾವನಾತ್ಮಕವಾಗಿ ಜನ್ಮದಿನದ ದಿನ ಬರೆದುಕೊಂಡಿದ್ದರು. ಮೇಘನಾ ರಾಜ್ ರವರು ತಮ್ಮ ಸ್ನೇಹಿತರೊಂದಿಗೆ ಸಂಭ್ರಮದಿಂದ ಜನ್ಮದಿನಾಚರಣೆಯನ್ನು ಮಾಡಿಕೊಂಡಿರುವ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿದ್ದು ನೀವು ಕೂಡ ವೀಕ್ಷಿಸಬಹುದಾಗಿದೆ. ವಿಡಿಯೋ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.