ಒಂದು ಕಡೆ ಎಲ್ಲರೂ ಕಣ್ಣೀರು ಹಾಕುತ್ತಿದ್ದರೇ, ಮತ್ತೊಂದು ಕಡೆ ಹಾಸ್ಯ ನಟ ಮೋಹನ್ ಜುನೇಜ ಕುಟುಂಬ ಕೊನೆ ಕ್ಷಣದಲ್ಲಿ ಏನು ಮಾಡಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಜಕ್ಕೂ ಕೂಡ ನಿನ್ನೆಯ ದಿನ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮತ್ತೊಂದು ದುಃಖದಾಯಕ ದಿನವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೆ ಕನ್ನಡ ಚಿತ್ರರಂಗದಲ್ಲಿ ನೂರಾರು ಚಿತ್ರಗಳಲ್ಲಿ ಹಾಸ್ಯ ನಟನಾಗಿ ಕಾಣಿಸಿಕೊಂಡಿದ್ದು ಮೋಹನ್ ಜುನೇಜ ರವರು ನಮ್ಮನ್ನೆಲ್ಲಾ ಅಗಲಿ ಬಾರದ ಲೋಕದತ್ತ ಪಯಣ ಬೆಳೆಸಿದ್ದಾರೆ. ಇತ್ತೀಚಿಗಷ್ಟೇ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಮಾನ್ಸ್ಟರ್ ಡೈಲಾಗ್ ಹೇಳಿ ಎಲ್ಲರ ಮನಗೆದ್ದಿದ್ದ ಈ ನಟ ದಿಡೀರನೆ ನಮ್ಮನ್ನೆಲ್ಲಾ ಆಗಲಿರುವುದು ನಿಜಕ್ಕೂ ಕೂಡ ತಾಳಲಾರದ ಸಂಗತಿ.

ಹೌದು ಗೆಳೆಯರೆ ಮೋಹನ್ ಜುನೇಜ ರವರು ನಿನ್ನೆ ರಾತ್ರಿ ನಮ್ಮನ್ನೆಲ್ಲಾ ಆಗಲಿದ್ದಾರೆ. ಇತ್ತೀಚಿಗಷ್ಟೇ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಹೆಸರಘಟ್ಟದಲ್ಲಿರುವ ಸಪ್ತಗಿರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸರಿಯಾಗಿ ಅವರ ಆರೋಗ್ಯ ಸ್ಪಂದಿಸಿದ ಹಿನ್ನೆಲೆಯಲ್ಲಿ ಅಕಾಲಿಕವಾಗಿ ನಮ್ಮನ್ನೆಲ್ಲ ಅಗಲಿದ್ದಾರೆ ಎಂದು ಹೇಳಬಹುದಾಗಿದೆ. ಇತ್ತೀಚಿಗಷ್ಟೇ ಸಾಲುಸಾಲು ಕನ್ನಡ ನಟರನ್ನು ಹಾಗೂ ಸೆಲೆಬ್ರಿಟಿಗಳನ್ನು ಕಳೆದುಕೊಂಡಿರುವ ಕನ್ನಡ ಚಿತ್ರರಂಗ ಮತ್ತೊಬ್ಬ ಮಹೋನ್ನತ ಕಲಾವಿದನನ್ನು ಕಳೆದುಕೊಂಡಂತಾಗಿದೆ.

mohan juneja 2 | ಒಂದು ಕಡೆ ಎಲ್ಲರೂ ಕಣ್ಣೀರು ಹಾಕುತ್ತಿದ್ದರೇ, ಮತ್ತೊಂದು ಕಡೆ ಹಾಸ್ಯ ನಟ ಮೋಹನ್ ಜುನೇಜ ಕುಟುಂಬ ಕೊನೆ ಕ್ಷಣದಲ್ಲಿ ಏನು ಮಾಡಿದ್ದಾರೆ ಗೊತ್ತೇ??
ಒಂದು ಕಡೆ ಎಲ್ಲರೂ ಕಣ್ಣೀರು ಹಾಕುತ್ತಿದ್ದರೇ, ಮತ್ತೊಂದು ಕಡೆ ಹಾಸ್ಯ ನಟ ಮೋಹನ್ ಜುನೇಜ ಕುಟುಂಬ ಕೊನೆ ಕ್ಷಣದಲ್ಲಿ ಏನು ಮಾಡಿದ್ದಾರೆ ಗೊತ್ತೇ?? 3

ಇನ್ನು ಮೋಹನ್ ಜುನೇಜ ರವರು ಕೊನೆದಾಗಿ ನಟಿಸಿರುವ ಸಿನಿಮಾ ಬಂದರೆ ಅದು ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಕನ್ನಡದ ಹೆಮ್ಮೆಯ ಚಿತ್ರ ಕೆಜಿಎಫ್ ಚಾಪ್ಟರ್ 2. ಚಿಕ್ಕ ಪಾತ್ರವಾಗಿದ್ದರು ಕೂಡ ಅದರ ಇಂಪ್ಯಾಕ್ಟ್ ದೊಡ್ಡದಾಗಿ ಮೂಡಿಬರುವಂತೆ ನಟಿಸಿದ ಮೋಹನ್ ಜುನೇಜ ರವರ ಪಾತ್ರ ಎಲ್ಲರಿಗೂ ಕೂಡ ಇಷ್ಟ ಆಗುವಂತಾಗಿದೆ. ಇದೇ ಹಿನ್ನೆಲೆಯಲ್ಲಿ ಕೆಜಿಎಫ್ ಚಾಪ್ಟರ್ 2 ಚಿತ್ರದ ನಿರ್ಮಾಣ ಸಂಸ್ಥೆಯಾಗಿರುವ ಹೊಂಬಾಳೆ ಫಿಲಂಸ್ ಮೋಹನ್ ಜುನೇಜ ರವರ ಮರಣಕ್ಕೆ ಸಂತಾಪವನ್ನು ಸೂಚಿಸಿದೆ.

ಇನ್ನು ಮೋಹನ್ ಜುನೇಜ ರವರ ಅಂತಿಮ ದರ್ಶನ ಪ್ರಕ್ರಿಯೆನ್ನು ಅವರ ಮನೆಯಲ್ಲಿ ಆಯೋಜಿಸಲಾಗಿದ್ದು ಅವರ ಸಮಾಧಿಯನ್ನು ತಮ್ಮೇನಹಳ್ಳಿ ಯಲ್ಲಿ ಮಾಡಲಾಗುವುದು ಎಂಬುದಾಗಿ ಕುಟುಂಬ ಮೂಲದಿಂದ ತಿಳಿದುಬಂದಿದೆ. ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಕೂಡ ನಟಿಸಿರುವಂತಹ ಅನುಭವ ಮೋಹನ್
ಜುನೇಜ ಅವರಿಗಿದೆ. ಮೋಹನ್ ಜುನೇಜ ರವರ ಮ್ಯಾನರಿಸಂ ನೋಡಲು ಎಲ್ಲರಿಗೂ ಕೂಡ ಇಷ್ಟ ಆಗುತ್ತಿತ್ತು. ನಿಜಕ್ಕೂ ಕೂಡ ಒಬ್ಬ ಅಜಾತಶತ್ರು ವ್ಯಕ್ತಿತ್ವವನ್ನು ಅವರು ಹೊಂದಿದ್ದರು ಎಂದರು ತಪ್ಪಾಗಲಾರದು.

ಇನ್ನು ಮೋಹನ್ ಜುನೇಜ ರವರು ಮರಣದಲ್ಲಿ ಕೂಡ ಕನ್ನಡ ಚಿತ್ರರಂಗದ ಮೇರು ನಟ ರಾಗಿರುವ ಡಾಕ್ಟರ್ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರಂತಹ ನಟರ ದಾರಿಯನ್ನು ಹಿಡಿದಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೆ ನಿಮಗೆಲ್ಲರಿಗೂ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ತಮ್ಮ ತಂದೆಯಾಗಿರುವ ರಾಜಕುಮಾರ್ ಅವರಂತೆ ಮರಣಾನಂತರ ತಮ್ಮ ನೇತ್ರದಾನವನ್ನು ಮಾಡಿದ್ದರು.

mohan juneja 4 | ಒಂದು ಕಡೆ ಎಲ್ಲರೂ ಕಣ್ಣೀರು ಹಾಕುತ್ತಿದ್ದರೇ, ಮತ್ತೊಂದು ಕಡೆ ಹಾಸ್ಯ ನಟ ಮೋಹನ್ ಜುನೇಜ ಕುಟುಂಬ ಕೊನೆ ಕ್ಷಣದಲ್ಲಿ ಏನು ಮಾಡಿದ್ದಾರೆ ಗೊತ್ತೇ??
ಒಂದು ಕಡೆ ಎಲ್ಲರೂ ಕಣ್ಣೀರು ಹಾಕುತ್ತಿದ್ದರೇ, ಮತ್ತೊಂದು ಕಡೆ ಹಾಸ್ಯ ನಟ ಮೋಹನ್ ಜುನೇಜ ಕುಟುಂಬ ಕೊನೆ ಕ್ಷಣದಲ್ಲಿ ಏನು ಮಾಡಿದ್ದಾರೆ ಗೊತ್ತೇ?? 4

ಈಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಂತರ ಮೋಹನ್ ಜುನೇಜ ರವರು ಕೂಡ ತಮ್ಮ ಕಣ್ಣನ್ನು ಮರಣಾನಂತರ ದಾನ ಮಾಡುವ ಮೂಲಕ ಮರಣದಲ್ಲಿ ಕೂಡ ಸಾರ್ಥಕತೆಯನ್ನು ಮೆರೆದಿದ್ದಾರೆ ಎಂದು ಹೇಳಬಹುದಾಗಿದೆ. ನಿಜಕ್ಕೂ ಕೂಡ ಕನ್ನಡ ನಾಡು ಹಾಗೂ ಕನ್ನಡ ಚಿತ್ರರಂಗ ಅವರಿಗೆ ಸದಾ ಚಿರಋಣಿಯಾಗಿರಲಿದೆ ಎಂಬುದಾಗಿ ಹೇಳಬಹುದಾಗಿದೆ. ಇನ್ನು ತಮ್ಮ ಗೆಳೆಯನನ್ನು ಕೊನೆಯ ಬಾರಿಗೆ ನೋಡಲು ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದರಾಗಿರುವ ಹೊನ್ನವಳ್ಳಿ ಕೃಷ್ಣ ಡಿಂಗ್ರೀ ನಾಗರಾಜ್ ಸೇರಿದಂತೆ ಹಲವಾರು ಹಾಸ್ಯ ಕಲಾವಿದರು ಹಾಗೂ ಹಿರಿಯ ನಟರು ಅಂತಿಮ ದರ್ಶನವನ್ನು ಪಡೆದುಕೊಂಡಿದ್ದಾರೆ. ನಟ ಮೋಹನ್ ಜುನೇಜ ರವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.