News from ಕನ್ನಡಿಗರು

ನಿಮಗೆ ದಿನ ಪೂರ್ತಿ ಚೆನ್ನಾಗಿದ್ದು ಲಾಭ ಬರಬೇಕೆ?? ಹಾಗಿದ್ದರೆ ಮುಂಜಾನೆ ಎದ್ದು ಈ ವಸ್ತುಗಳನ್ನು ನೋಡಿ, ಎಲ್ಲವೂ ಒಳ್ಳೆಯದಾಗುತ್ತದೆ.

208

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರು ಕೂಡ ಬೆಳಗ್ಗೆ ಎದ್ದ ತಕ್ಷಣ ಇಂದಿನ ದಿನ ಚೆನ್ನಾಗಿರಲಿ ಎಂದು ಭಾವಿಸಿ ಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ವ್ಯಾಪಾರಿಗಳು ಇಂದು ಚೆನ್ನಾಗಿ ವ್ಯಾಪಾರ ಆಗಲಿ ಎಂದು ಭಾವಿಸಿದರೆ ಕೆಲಸಗಾರರು ತಮ್ಮ ಬಾಸ್ ಇಂದು ನಮಗೆ ಒಳ್ಳೆಯ ರೀತಿ ಮಾತನಾಡಿಸಲಿ ಎಂದು ಬೇಡಿಕೊಳ್ಳುತ್ತಾರೆ.

ಒಂದು ವೇಳೆ ಏನಾದರೂ ಮಾಡ ಹೊರಟಿರುವ ಕೆಲಸದಲ್ಲಿ ಎಡವಟ್ಟಾದರೆ ಇವತ್ತು ಬೆಳಗ್ಗೆ ಯಾರ ಮುಖ ನೋಡಿ ಎದ್ನೋ ಎನ್ನುವ ರೀತಿಯಲ್ಲಿ ಬೇಸರದಿಂದ ಮುಖ ಬಾಡಿ ಹೋಗುವುದಂತೂ ಗ್ಯಾರಂಟಿ. ಹಾಗಿದ್ದರೆ ಬೆಳಗ್ಗೆ ಎದ್ದ ತಕ್ಷಣ ಯಾವ ವಸ್ತುವನ್ನು ನೋಡಿದರೆ ಶುಭವಾಗುತ್ತದೆ ಎಂಬುದರ ಕುರಿತಂತೆ ಹಿಂದಿನ ವಿಚಾರದಲ್ಲಿ ಹೇಳಲಾಗಿದೆ. ಕೆಲವರು ತಮ್ಮ ಅಂಗೈಯನ್ನು ಕರಾಗ್ರಹ ಸತಿ ಎಂಬ ಮಂತ್ರವನ್ನು ಪಠಣೆ ಮಾಡಿ ನೋಡುತ್ತಾರೆ. ಇನ್ನು ಕೆಲವರು ದೇವರ ಫೋಟೋಗಳನ್ನು ನೋಡುತ್ತಾರೆ. ಇಂದು ನಾವು ಹೇಳುವ ವಸ್ತುಗಳನ್ನು ಬೆಳಗ್ಗೆ ಎದ್ದ ತಕ್ಷಣ ನೋಡಿದರೆ ಖಂಡಿತವಾಗಿಯೂ ನಿಮಗೆ ಆ ದಿನ ಎನ್ನುವುದು ಸಾಕಷ್ಟು ಶುಭವಾಗಿರುತ್ತದೆ. ಬೆಳಗ್ಗೆ ಎದ್ದ ತಕ್ಷಣ ತೆಂಗಿನ ಮರ ಅಥವಾ ತೆಂಗಿನಕಾಯಿಯನ್ನು ನೋಡಬೇಕು.

ಈ ವಸ್ತುವಿನಲ್ಲಿ ಶಿವಗಂಗೆ ಹಾಗೂ ಪಾರ್ವತಿ ದೇವರ ಅಂಶವಿರುತ್ತದೆ. ತುಂಬಿದ ಕೊಡವನ್ನು ಅಥವಾ ಪಾತ್ರೆಯಲ್ಲಿರುವ ಹಾಲನ್ನು ಕೂಡ ನೋಡಿದರೆ ನಿಮಗೆ ದಿನ ಎನ್ನುವುದು ಶುಭಕರವಾಗಿರುತ್ತದೆ. ಇನ್ನು ತುಂಬಿದ ಕೊಡವನ್ನು ತರುತ್ತಿರುವ ಹೆಣ್ಣನ್ನು ಅಥವಾ ಗರ್ಭಿಣಿಯರನ್ನು ಮತ್ತು ಮುತ್ತೈದೆಯರನ್ನು ಬೆಳಗ್ಗೆದ್ದು ನೋಡಿದರೆ ಒಳ್ಳೆಯದಾಗುತ್ತದೆ. ಕಾಮಧೇನು ಆಗಿರುವ ಹಸುವನ್ನು ಕೂಡ ನೋಡುವುದು ಒಳ್ಳೆಯದು. ನಾವು ಈ ಮೇಲೆ ಹೇಳಿರುವ ವಸ್ತುಗಳನ್ನು ಅಥವಾ ಮನುಷ್ಯರನ್ನು ನೋಡಿದರೆ ಖಂಡಿತವಾಗಿಯೂ ನಿಮಗೆ ಎಲ್ಲಾ ಸಮಸ್ಯೆಗಳು ಕಳೆದು ನಿಮ್ಮ ಜೀವನದಲ್ಲಿ ಲಾಭದಾಯಕ ದಿನಗಳು ಆಗಮನವಾಗುತ್ತದೆ.

Leave A Reply

Your email address will not be published.