News from ಕನ್ನಡಿಗರು

ಮತ್ತೊಮ್ಮೆ ಸಿಹಿ ಸುದ್ದಿ ನೀಡಿದ ಅಗ್ನಿಶಾಖಿ ವಿಜಯ್, ಮತ್ತೆ ನಿಮ್ಮ ಮುಂದೆ ಬರುವುದು ಪಕ್ಕ. ಯಾವಾಗ ಹೇಗೆ ಗೊತ್ತೇ??

176

ನಮಸ್ಕಾರ ಸ್ನೇಹಿತರೇ ಇತ್ತೀಚೆಗೆ ಕನ್ನಡದ ಅನೇಕ ಯುವ ನಟ-ನಟಿಯರು ಬೆಳ್ಳಿತೆರೆಯತ್ತ ಹೆಜ್ಜೆ ಇಡುತ್ತಿದ್ದಾರೆ. ಇನ್ನೊಂದೆಡೆ ಕನ್ನಡದ ಅನೇಕ ಹಿರಿಯ ಕಲಾವಿದರು ಸಿನಿಮಾಗಳಲ್ಲಿ ಅವಕಾಶ ಕಡಿಮೆ ಆಯ್ತು ಅನ್ನುವುದಕ್ಕಿಂತ ಕೊಂಚ ಬದಲಾವಣೆ ಬಯಸಿ ಕಿರುತೆರೆ ಧಾರಾವಾಹಿಗಳತ್ತ ಮುಖ ಮಾಡಿದ್ದಾರೆ. ಇದೆಲ್ಲದರ ನಡುವೆ ಹೊಸ ಬೆಳವಣಿಗೆ ಅಂದರೆ ಕಿರುತೆರೆ ಧಾರಾವಾಹಿಗಳ ಮೂಲಟ ಜನಪ್ರಿಯತೆ ಗಳಿಸಿ ಬೆಳ್ಳಿ ತೆರೆ ಸಿನಿಮಾಗಳಲ್ಲಿ ಮಿಂಚಿ ಇದೀಗ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಅಂತಹ ನಟರ ಪೈಕಿ ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟ ವಿಜಯ್ ಸೂರ್ಯ ಕೂಡ ಒಬ್ಬರು.

ಹೌದು ಕಲರ್ಸ್ ಕನ್ನಡ ವಾಹಿನಿಯ ಅಪಾರ ಜನಪ್ರಿಯತೆ ಪಡೆದಿದ್ದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸಿದ್ದಾರ್ಥ್ ಪಾತ್ರಧಾರಿಯಾಗಿ ನಟಿಸುತ್ತಿದ್ದ ನಟ ವಿಜಯ್ ಸೂರ್ಯ ನಾಡಿನ ಮನೆ ಮಾತಾಗಿದ್ದರು. ಸಿದ್ದಾರ್ಥ್ ಮತ್ತು ಸನ್ನಿಧಿ ಪಾತ್ರಗಳು ಅಪಾರ ಜನ ಮೆಚ್ಚುಗೆ ಪಡೆದಿದ್ದವು. ಸಿದ್ದಾರ್ಥ್ ಪಾತ್ರದಲ್ಲಿ ನಟಿಸಿದ್ದ ವಿಜಯ್ ಸೂರ್ಯ ಮತ್ತು ಸನ್ನಿಧಿ ಪಾತ್ರದಲ್ಲಿ ನಟಿಸಿದ್ದ ನಟಿ ವೈಷ್ಣವಿ ಇವರಿಬ್ಬರ ಜೋಡಿ ವೀಕ್ಷಕರಿಗೆ ಭಾರಿ ಮೋಡಿ ಮಾಡಿತ್ತು. ಅದರಲ್ಲೂ ನಟ ವಿಜಯ್ ಸೂರ್ಯ ಅವರು ಹೆಂಗಳೆಯರ ಮನ ಗೆದ್ದು ಭಾರಿ ಜನಪ್ರಿಯತೆ ಗಳಿಸಿದ್ದರು.

ಬರೋಬ್ಬರಿ ಆರು ವರ್ಷಗಳ ಯಶಸ್ವಿ ಪ್ರದರ್ಶನ ಕಂಡ ಈ ಅಗ್ನಿಸಾಕ್ಷಿ ಧಾರಾವಾಹಿ ಮುಗಿದ ನಂತರ ನಟ ವಿಜಯ್ ಸೂರ್ಯ ಕೊಂಚ ಕಿರುತೆರೆಯಿಂದ ಅಂತರ ಕಾಯ್ದುಕೊಂಡರು. ಇದರ ನಡುವೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರ ಶೇಖರ್ ಅವರ ಇಷ್ಟಕಾಮ್ಯ ಚಿತ್ರದಲ್ಲಿ ನಾಯಕ ನಟರಾಗಿ ನಟಿಸಿದರು.ಇದಕ್ಕೂ ಮುಂಚೆ ರವಿಚಂದ್ರನ್ ಅವರ ಕ್ರೇಜಿ಼ಲೋಕ ಎಂಬ ಸಿನಿಮಾದಲ್ಲಿ ರವಿಚಂದ್ರನ್ ಅವರ ಪುತ್ರನಾಗಿ ಕಾಣಿಸಿಕೊಂಡಿದ್ದರು.

ಇದಾದ ಬಳಿಕ ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿದ್ದ ಪ್ರೇಮಲೋಕ ಎಂಬ ಸೀರಿಯಲ್ ನಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಕಾರಣಾಂತರಗಳಿಂದ ಈ ಪ್ರೇಮ ಲೋಕ ಸೀರಿಯಲ್ ಬಹುಬೇಗ ಅಂತ್ಯ ಕಂಡಿತು. ತದ ನಂತರ ಜೀ಼ ಕನ್ನಡದ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಕೊಂಡರು. ಇದೀಗ ಪೂರ್ಣ ಪ್ರಮಾಣದ ನಾಯಕ ನಟರಾಗಿ ಮತ್ತೆ ಹೊಸ ಧಾರಾವಾಹಿಯ ಮೂಲಕ ಕಿರುತೆರೆಗೆ ರೀ ಎಂಟ್ರಿ ಕೊಡುತ್ತಿದ್ದಾರೆ ನಟ ವಿಜಯ್ ಸೂರ್ಯ.

ಹೌದು ಜೀ಼ ಕನ್ನಡದಲ್ಲಿ ಡಾಕ್ಟರ್ ಕರ್ಣ ಎಂಬ ಹೊಸದೊಂದು ಧಾರಾವಾಹಿ ಪ್ರಸಾರವಾಗಲು ಸಿದ್ದವಾಗುತ್ತಿದೆ. ಈ ಧಾರಾವಾಹಿಯಲ್ಲಿ ನಟ ವಿಜಯ್ ಸೂರ್ಯ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಡಾಕ್ಟರ್ ಕರ್ಣ ಹೊಸ ಧಾರಾವಾಹಿಗೆ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟಾರೆಯಾಗಿ ನಟ ವಿಜಯ್ ಸೂರ್ಯ ಅವರು ಪುನಃ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಆಗಿದೆ.

Leave A Reply

Your email address will not be published.