ಅಪ್ಪು ಹುಟ್ಟುಹಬ್ಬದ ದಿನ ಯಾರಿಗೂ ತಿಳಿಯದಂತೆ ನಾಗಿಣಿ 2 ನಟಿ ನಮ್ರತಾ ಗೌಡ ಏನು ಮಾಡುತ್ತಿದ್ದಾರೆ ಗೊತ್ತೇ?? ನಮ್ರತಾ ರವರ ಅಭಿಮಾನ ಎಂತದ್ದು ಗೊತ್ತೇ??

ನಮಸ್ಕಾರ ಸ್ನೇಹತರೇ, ಅಪ್ಪು ಅಂದ್ರೆ ಜನರಿಗೆ ಎಷ್ಟು ಕ್ರೇಜ್ ಇತ್ತು ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪುನೀತ್ ರಾಜಕುಮಾರ್ ನಮ್ಮೊಂದಿಗೆ ಇಲ್ಲವಾದರೂ ಅವರನ್ನ ನೆನಪಿಸಿಕೊಂಡು ಅವರ ಅಭಿಮಾನಿಗಳು ಹಲವಾರು ಕೆಲಸಗಳನ್ನ ಮಾಡಿದ್ದಾರೆ. ಕೆಲವರು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ್ದಾರೆ. ಇನ್ಯಾರೋ ಅವರ ಫೋಟೋವನ್ನು ಮನೆಯಲ್ಲಿಟ್ಟು ಪೂಜೆ ಮಾಡ್ತಾರೆ. ಹೀಗೆ ಬೇರೆ ಬೇರೆ ರೀತಿಯಲ್ಲಿ ಅಪ್ಪು ಮೇಲಿರುವ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಈ ಬಾರಿ ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಅವರ ಕೊನೆಯ ಚಿತ್ರ ಜೇಮ್ಸ್ ಕೂಡ ರಿಲೀಸ್ ಆಗಿತ್ತು. ಅಪ್ಪು ಬರ್ತಡೆ ಈ ಸಲ ಅತ್ಯಂತ ಭಾವನಾತ್ಮಕವಾಗಿ ಇತ್ತು. ಜೇಮ್ಸ್ ಚಿತ್ರ ನೋಡ್ತಾ ನೋಡ್ತಾ ಅಭಿಮಾನಿಗಳು ಭಾವುಕರಾದರು. ಅಪ್ಪು ಅಂದ್ರೆ ಇಷ್ಟಪಡದೆ ಇರೋರು ಯಾರೂ ಇಲ್ಲ. ಸಿನಿಮಾ ರಂಗದಲ್ಲಿಯೂ ಎಲ್ಲಾ ಕಲಾವಿದರೂ ಅಪ್ಪುವಿನ ಫ್ಯಾನ್ಸ್. ಅಂಥ ಫ್ಯಾನ್ಸ್ ನಲ್ಲಿ ನಟಿ ನಮ್ರತಾ ಗೌಡ ಕೂಡ ಒಬ್ಬರು. ಇವರು ತಮ್ಮ ಅಪ್ಪು ಬಗೆಗಿನ ಅಭಿಮಾನವನ್ನು ವ್ಯಕ್ತಪಡಿಸಿದ್ದು ಹೇಗೆ ಗೊತ್ತಾ ?

namratha gowda puneeth 1 | ಅಪ್ಪು ಹುಟ್ಟುಹಬ್ಬದ ದಿನ ಯಾರಿಗೂ ತಿಳಿಯದಂತೆ ನಾಗಿಣಿ 2 ನಟಿ ನಮ್ರತಾ ಗೌಡ ಏನು ಮಾಡುತ್ತಿದ್ದಾರೆ ಗೊತ್ತೇ?? ನಮ್ರತಾ ರವರ ಅಭಿಮಾನ ಎಂತದ್ದು ಗೊತ್ತೇ??
ಅಪ್ಪು ಹುಟ್ಟುಹಬ್ಬದ ದಿನ ಯಾರಿಗೂ ತಿಳಿಯದಂತೆ ನಾಗಿಣಿ 2 ನಟಿ ನಮ್ರತಾ ಗೌಡ ಏನು ಮಾಡುತ್ತಿದ್ದಾರೆ ಗೊತ್ತೇ?? ನಮ್ರತಾ ರವರ ಅಭಿಮಾನ ಎಂತದ್ದು ಗೊತ್ತೇ?? 2

ನಟಿ ನಮ್ರತಾ ಗೌಡ, ನಾಗಿಣಿ 2 ಧಾರಾವಾಹಿಯಲ್ಲಿ ತಮ್ಮ ಉತ್ತಮ ಅಭಿನಯದ ಮೂಲಕ ಮನೆ ಮಾತಾಗಿದ್ದಾರೆ. ಇದಕ್ಕೂ ಮೊದಲು ಮುತ್ತ ಗೌರಿ ಮದುವೆಯಲ್ಲಿ ನಮ್ರತಾ ಅಭಿನಯಿಸಿದ್ದರು. ಇನ್ನು ಪುನೀತ್ ರಾಜಕುಮಾರ್ ಅವರ ಬಿಗ್ ಫ್ಯಾನ್ ಆಗಿರುವ ನಮ್ರತಾ ಗೌಡ ಅವರ ಹುಟ್ಟುಹಬ್ಬದ ದಿನವೇ, ಈ ಕೆಲಸವನ್ನು ಮಾಡಿದ್ದಾರೆ. ಹೌದು, ನಟಿ ನಮ್ರತಾ ಗೌಡ ಅವರು ಅಪ್ಪು ಅವರ ಹುಟ್ಟಿದ ಹಬ್ಬದ ದಿನವೇ ಕೈಮೇಲೆ ವಿಭಿನ್ನ ಫಾಂಟ್ ನಲ್ಲಿ ಪುನೀತ್ ರಾಜಕುಮಾರ್ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದನ್ನು ನೋಡಿ ಪುನೀತ್ ಅಭಿಮಾನಿಗಳೂ ಕೂಡ ನಮ್ರತಾ ಗೌಡ ಅವರ ಅಭಿಮಾನಿ ಲಿಸ್ಟ್ ಗೆ ಸೇರಿದ್ದಾರೆ. 2007 ರಲ್ಲಿ ಪುನೀತ್ ರಾಜಕುಮರ್ ಅಭಿನಯದ ಮಿಲನ ಚಿತ್ರದಲ್ಲಿ ನಮ್ರತಾ ಗೌಡ ಬಾಲನಟಿಯಾಗಿ ಅಭಿನಯಿಸಿದ್ದರು.

Comments are closed.