Naresh: ಇದ್ದಕ್ಕಿದ್ದ ಹಾಗೆ ಪವಿತ್ರ ರವರ ಮೇಲೆ ಪ್ರೀತಿ ಹೆಚ್ಚಾದ್ರೆ, ನರೇಶ್ ರವರು ಏನೆಂದು ಕರೆಯುತ್ತಾರೆ ಗೊತ್ತೆ?? ಆ ಬೆಣ್ಣೆಯಂತಹ ಹೆಸರು ಏನು ಗೊತ್ತೇ??
Naresh: ತೆಲುಗು ಚಿತ್ರರಂಗದ ನಟ ನರೇಶ್ ಹಾಗೂ ಕನ್ನಡದ ನಟಿ ಪವಿತ್ರಾ ಲೋಕೇಶ್ ಇಬ್ಬರು ಮತ್ತೊಮ್ಮೆ ಚರ್ಚೆಯಾಲಿದ್ದಾರೆ. ಇವರಿಬ್ಬರು ಈಗ ಸುದ್ದಿಯಾಗುತ್ತಿರುವುದು ತಮ್ಮ ಹೊಸ ಸಿನಿಮಾ ಮಳ್ಳಿ ಪೆಲ್ಲಿ ಇಂದಾಗಿ. ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ತಮ್ಮ ರಿಯಲ್ ಲೈಫ್ ನಲ್ಲಿ ನಡೆದ ಘಟನೆಗಳನ್ನೇ ನರೇಶ್ ಹಾಗೂ ಪವಿತ್ರಾ ಅವರು ಈ ಸಿನಿಮಾ ಮೂಲಕ ತೋರಿಸಿದ್ದಾರೆ. ಟ್ರೈಲರ್ ನಲ್ಲಿ ಮೈಸೂರಿನ ಹೋಟೆಲ್ ನಲ್ಲಿ ನಡೆದ ಘಟನೆ ನೋಡಬಹುದು.
ನರೇಶ್ ಪವಿತ್ರಾ ಇಬ್ಬರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಮೇ 26ರಂದು ತೆರೆಕಾಣಲಿದೆ. ಟ್ರೈಲರ್ ಮೂಲಕವೇ ಭಾರಿ ಸದ್ದು ಮಾಡುತ್ತಿದೆ. ಎಂ.ಎಸ್.ರಾಜು ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದು, ನರೇಶ್ ಅವರೇ ಸಿನಿಮಾ ಪ್ರೊಡ್ಯುಸ್ ಮಾಡಿದ್ದಾರೆ. ಇವ ನರೇಶ್ ಹಾಗೂ ಪವಿತ್ರಾ ಇಬ್ಬರು ಕೂಡ ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ. ಇದನ್ನು ಓದಿ..Rashmika Mandanna: ವಿಜಯ್ ದೇವರಕೊಂಡಾಗೆ ಕೈ ಕೊಟ್ಟ ರಶ್ಮಿಕಾ- ಆ ಹೀರೋ ಜೊತೆ ಡೇಟ್ ಗೆ ಹೋಗುವ ಆಸೆಯನ್ನು ಹೊರಹಾಕಿಯೇ ಬಿಟ್ಟ ರಶ್ಮಿಕಾ. ದೇವ್ರೇ ಇವನ??
ಪ್ರೊಮೋಷನ್ ನ ಭಾಗವಾಗಿ ಇವರಿಬ್ಬರು ತೆಲುಗಿನ ಸಿಕ್ಸ್ತ್ ಸೆನ್ಸ್ ರಿಯಾಲಿಟಿ ಶೋಗೆ ಬಂದಿದ್ದರು. ಅದರ ಪ್ರೊಮೋ ಬಿಡುಗಡೆಯಾಗಿದ್ದು ಈಗ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಇದರಲ್ಲಿ ನಿರೂಪಕರು ಪವಿತ್ರಾ ಅವರ ಮೇಲೆ ಪ್ರೀತಿ ಹೆಚ್ಚಾದರೆ ಏನೆಂದು ಕರೆಯುತ್ತೀರಿ ಎಂದು ನರೇಶ್ ಅವರಿಗೆ ಕೇಳಿದ್ದಾರೆ. “ಮುದ್ದಾಗಿ ಅವರನ್ನು ಅಮ್ಮುಲು ಎಂದು ಕರೆಯುತ್ತೇನೆ. ಪ್ರೀತಿ ಜಾಸ್ತಿಯಾದರೆ ಅಮ್ಮ ಎಂದು ಕರೆಯುತ್ತೇನೆ.. ಪ್ರೀತಿ ಇನ್ನು ಜಾಸ್ತಿಯಾದರೆ, ಬೇಡ ಬಿಡಿ..” ಎಂದು ಹೇಳಿದ್ದಾರೆ ನಟ ನರೇಶ್.
ಇನ್ನು ಇಬ್ಬರು ಕೂಡ ಶೋನಲ್ಲಿ ಬಹಳ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವುದು ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಇವರಿಬ್ಬರು ತಮ್ಮ ಲೈಫ್ ಅನ್ನೇ ಸಿನಿಮಾ ಮಾಡಿರುವುದು ನೆಟ್ಟಿಗರ ವಲಯದಲ್ಲಿ ಹೆಚ್ಚು ಚರ್ಚೆ ಹಾಗೂ ಟ್ರೋಲ್ ಗೆ ಒಳಗಾಗಿದ್ದು, ಸಿನಿಮಾ ಬಿಡುಗಡೆ ಆದಮೇಲೆ ರೆಸ್ಪಾನ್ಸ್ ಹೇಗಿರುತ್ತದೆ, ಸಿನಿಮಾ ಸೋಲುತ್ತೋ ಗೆಲ್ಲುತ್ತೋ ಎನ್ನುವುದನ್ನು ಕಾದು ನೋಡಬೇಕಿದೆ.. ಇದನ್ನು ಓದಿ..Power Bill: ನಿಮ್ಮ ಮನೆಯ ಕರೆಂಟ್ ಬಿಲ್ ಜಾಸ್ತಿ ಆಗಿದೆಯೇ?? ಈ ಚಿಕ್ಕ ಕೆಲಸ ಮಾಡಿ ಸಾಕು ಅರ್ಧದಷ್ಟು ಕಡಿಮೆ ಆಗುತ್ತದೆ. ಏನು ಮಾಡಬೇಕು ಗೊತ್ತೇ??
Comments are closed.