ಮದುವೆ ಆದಮೇಲೆ ನಟನೆ ಮಾಡುತ್ತಿರುವ ಮೊದಲ ಸಿನೆಮಾಗೆ ನಯನತಾರ ಪಡೆಯುತ್ತಿರುವ ಸಂಭಾವನೆ ಕೇಳಿ ತಲೆ ತಿರುಗುತ್ತದೆ. ಎಷ್ಟು ಗೊತ್ತೆ?

ನಮಸ್ಕಾರ ಸ್ನೇಹಿತರೆ ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ನಯನತಾರ ರವರು ಇತ್ತೀಚಿಗಷ್ಟೇ ನಿರ್ದೇಶಕ ವಿಘ್ನೇಶ್ ರವರನ್ನು ಮದುವೆಯಾಗುವ ಮೂಲಕ ದೊಡ್ಡ ಮಟ್ಟದಲ್ಲಿ ತಮ್ಮ ಅಭಿಮಾನಿಗಳಿಗೆ ಸಂತೋಷದ ಸುಧೆಯನ್ನು ಹರಿಸಿದ್ದರು. ಹಲವಾರು ವರ್ಷಗಳಿಂದ ಜೊತೆಯಾಗಿದ್ದ ಈ ಜೋಡಿ ಕೊನೆಗೂ ಕೂಡ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ವಿವಾಹ ಸಮಾರಂಭದಲ್ಲಿ ಆರ್ ರೆಹಮಾನ್ ಕಮಲಹಾಸನ್ ರಜನಿಕಾಂತ್ ಶಾರುಖ್ ಖಾನ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಆಗಮಿಸಿ ನವ ವಧುವರರಿಗೆ ಆಶೀರ್ವಾದವನ್ನು ನೀಡಿದರು.

ಮದುವೆಯಾದ ನಂತರ ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಲ್ಲಿ ಊಟೋಪಚಾರಗಳನ್ನು ವಿತರಿಸಿ ನಂತರ ಥಾಯ್ಲ್ಯಾಂಡ್ ಗೆ ಇಬ್ಬರು ಜೋಡಿಗಳು ಹನಿಮೂನ್ ಪ್ರಯುಕ್ತ ಹೋಗಿದ್ದರು. ಹನಿಮೂನ್ ಗೆ ಹೋಗಿರುವ ಪ್ರವಾಸಿ ಸ್ಥಾನಗಳ ವಿಹಂಗಮ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದನ್ನು ನೀವು ನೋಡಿರುತ್ತೀರಿ. ಆದರೆ ಹನಿಮೂನ್ ಮುಗಿಸಿಕೊಂಡು ಬೇಗನೆ ಬಂದಿರುವ ನಯನತಾರಾ ರವರು ಈಗಾಗಲೇ ನೇರವಾಗಿ ಮುಂಬೈಗೆ ತೆರಳಿದ್ದಾರೆ. ಹೌದು ಗೆಳೆಯರು ತಮಿಳು ನಿರ್ದೇಶಕ ಆಟ್ಲೀ ಹಾಗೂ ಶಾರುಖ್ ಖಾನ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಜವಾನ್ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿರುವ ನಯನತಾರಾ ಅವರವರು ನೇರವಾಗಿ ಹನಿಮೂನ್ ಮುಗಿಸಿಕೊಂಡು ಚಿತ್ರೀಕರಣಕ್ಕೆ ತೆರಳಿದ್ದಾರೆ.

nayan 5 | ಮದುವೆ ಆದಮೇಲೆ ನಟನೆ ಮಾಡುತ್ತಿರುವ ಮೊದಲ ಸಿನೆಮಾಗೆ ನಯನತಾರ ಪಡೆಯುತ್ತಿರುವ ಸಂಭಾವನೆ ಕೇಳಿ ತಲೆ ತಿರುಗುತ್ತದೆ. ಎಷ್ಟು ಗೊತ್ತೆ?
ಮದುವೆ ಆದಮೇಲೆ ನಟನೆ ಮಾಡುತ್ತಿರುವ ಮೊದಲ ಸಿನೆಮಾಗೆ ನಯನತಾರ ಪಡೆಯುತ್ತಿರುವ ಸಂಭಾವನೆ ಕೇಳಿ ತಲೆ ತಿರುಗುತ್ತದೆ. ಎಷ್ಟು ಗೊತ್ತೆ? 2

ಇನ್ನು ಈ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿರುವ ನಯನತಾರಾ ರವರು ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಎಂಬುದನ್ನು ಕೇಳಿದರೆ ಖಂಡಿತವಾಗಿ ನೀವು ಕೂಡ ನಿಬ್ಬೆರಗಾಗುತ್ತೀರಿ. ಹೌದು ಗೆಳೆಯರೇ ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ನಯನತಾರಾ ರವರು ಬಾಲಿವುಡ್ ಚಿತ್ರರಂಗದಲ್ಲಿ ಮೋಡಿ ಮಾಡಲು ಬರೋಬ್ಬರಿ ಜವಾನ್ ಸಿನಿಮಾಗೆ ಎಂಟು ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ಈಗಾಗಲೇ ಈ ಸುದ್ದಿ ಬಿ ಟೌನ್ ನಲ್ಲಿ ದೊಡ್ಡಮಟ್ಟದಲ್ಲಿ ಹರಿದಾಡುತ್ತಿದ್ದು ಈ ಸಿನಿಮಾ ಸೂಪರ್ ಹಿಟ್ ಆದರೆ ಮುಂದಿನ ದಿನಗಳಲ್ಲಿ ನಯನತಾರಾ ಬಾಲಿವುಡ್ಡನ್ನು ಆಳಿದರು ಕೂಡ ಆಶ್ಚರ್ಯ ಇಲ್ಲ.

Comments are closed.