ಬಹುಭಾಷಾ ನಟಿ, ಮಲಯಾಳಂ ಮುದ್ದು ಮುಖದ ಚೆಲುವೆಗೆ ಆಯ್ತು ಕಹಿ ಅನುಭವ: ವಿಮಾನದಲ್ಲಿ ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪುಷ್ಪ ಹಾಗೂ ವಿಕ್ರಂ ಚಿತ್ರಗಳ ಮೂಲಕ ಇತ್ತೀಚಿನ ದಿನಗಳಲ್ಲಿ ಭಾರತ ಚಿತ್ರರಂಗದಾದ್ಯಂತ ಸದ್ದು ಮಾಡುತ್ತಿರುವ ಪ್ರತಿಭಾನ್ವಿತ ನಟ ಫಹಾದ್ ಫಾಸಿಲ್ ಅವರ ಕುರಿತಂತೆ ನಿಮಗೆಲ್ಲರಿಗೆ ತಿಳಿದೇ ಇದೆ. ಅವರ ಪತ್ನಿ ಆಗಿರುವ ನಜ್ರಿಯಾ ಫಹಾದ್ ಅವರ ಬಗ್ಗೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ತಮ್ಮ ನಟನೆಗೆ ಫೇಮಸ್ ಆಗಿರುವ ನಜ್ರಿಯ ಮಲಯಾಳಂ ಹಾಗೂ ತೆಲುಗು ಚಿತ್ರರಂಗಗಳಲ್ಲಿ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹೆಚ್ಚಾಗಿ ಬೇರೆ ದೇಶಗಳಿಗೆ ಹಾಗೂ ಡೊಮೆಸ್ಟಿಕ್ ಪ್ರವಾಸದಲ್ಲಿ ಕೂಡ ವಿಮಾನಗಳನ್ನು ಬಳಸುತ್ತಾರೆ. ಹೌದು ವಿಮಾನಗಳನ್ನು ಬಳಸುವಾಗ ಕೆಲವೊಮ್ಮೆ ಅಲ್ಲಿ ಉಂಟಾಗುವಂತಹ ಕೆಲವೊಂದು ಅಹಿತಕರ ಘಟನೆಗಳನ್ನು ಕೂಡ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾರೆ. ಇದೇ ರೀತಿ ನಜ್ರಿಯಾ ಅವರಿಗೂ ಕೂಡ ಒಂದು ವಿಮಾನದಲ್ಲಿ ಹೋಗುವಾಗ ಉಂಟಾದ ಅಹಿತಕರ ಘಟನೆಯ ಕುರಿತಂತೆ ಅವರ ಖುದ್ದಾಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬೇರೆ ಸಾಮಾನ್ಯ ವಿಚಾರಗಳ ರೀತಿಯಲ್ಲಿ ಶೇರ್ ಮಾಡಿಕೊಂಡು ಆ ಏರ್ಲೈನ್ ಕಂಪನಿಯ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

nazriya | ಬಹುಭಾಷಾ ನಟಿ, ಮಲಯಾಳಂ ಮುದ್ದು ಮುಖದ ಚೆಲುವೆಗೆ ಆಯ್ತು ಕಹಿ ಅನುಭವ: ವಿಮಾನದಲ್ಲಿ ಏನಾಗಿದೆ ಗೊತ್ತೇ??
ಬಹುಭಾಷಾ ನಟಿ, ಮಲಯಾಳಂ ಮುದ್ದು ಮುಖದ ಚೆಲುವೆಗೆ ಆಯ್ತು ಕಹಿ ಅನುಭವ: ವಿಮಾನದಲ್ಲಿ ಏನಾಗಿದೆ ಗೊತ್ತೇ?? 2

ಥಾಯ್ ಏರ್ವೇಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ನಜ್ರಿಯ ಅವರ ಬ್ಯಾಗ್ ಕಳೆದುಹೋಗಿತ್ತು. ಇದರ ವಿರುದ್ಧವಾಗಿ ದೂರು ನೀಡಿದಾಗ ಥಾಯ್ ಏರ್ವೇಸ್ ಇದುವರೆಗೂ ಕೂಡ ಅದಕ್ಕೆ ಸರಿಯಾದ ಪ್ರತಿಕ್ರಿಯೆಯನ್ನು ಅಥವಾ ಸಹಾಯವನ್ನು ಮಾಡಿಲ್ಲ ಇದೊಂದು ಅತ್ಯಂತ ಕೆಟ್ಟ ಅನುಭವ ಎಂಬುದಾಗಿ ನಜ್ರಿಯ ಹೇಳಿಕೊಂಡಿದ್ದು ಇನ್ನೂ ಜೀವನದಲ್ಲಿ ಯಾವತ್ತೂ ಕೂಡ ಈ ಸಂಸ್ಥೆಯ ವಿಮಾನಗಳಲ್ಲಿ ನಾನು ಪ್ರಯಾಣ ಮಾಡುವುದಿಲ್ಲ ಎಂಬುದಾಗಿ ಖಡಾ ಖಂಡಿತವಾಗಿ ಹೇಳಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಈ ವಿಚಾರವನ್ನು ಆ ಏರ್ಲೈನ್ ಸಂಸ್ಥೆಗೆ ಟ್ಯಾಗ್ ಮಾಡಿಯೇ ಹೇಳಿರುವ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಪ್ರತಿಕ್ರಿಯೆ ಬಂದರೂ ಕೂಡ ಬರಬಹುದು ಎಂಬುದಾಗಿ ನಿರೀಕ್ಷಿಸಲಾಗಿದೆ.

Comments are closed.