ಏನೇ ಮಾಡಿದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ?? ಕಷ್ಟ ಪಟ್ಟು ದುಡಿದರೂ ಹಣ ಉಳಿಯುತ್ತಿಲ್ಲವೇ?? ಹೀಗೆ ಮಾಡಿ ಸಾಕು. ನಿಮ್ಮನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ.

ನಮಸ್ಕಾರ ಸ್ನೇಹಿತರೇ ನಿಮ್ಮನ್ನು ಸೇರಿದಂತೆ ಈ ಪ್ರಪಂಚದಲ್ಲಿ ಸಾಕಷ್ಟು ಜನರಿಗೆ ಹಣವನ್ನು ಗಳಿಸಬೇಕು ಹಣವನ್ನು ಉಳಿಸಬೇಕು ಹಾಗೂ ಐಷಾರಾಮಿ ಜೀವನವನ್ನು ನಡೆಸಬೇಕು ಎನ್ನುವ ಕನಸು ಆಸೆಗಳು ಇರುತ್ತವೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ವಿಚಾರಗಳು ಎಡವಟ್ಟಾಗಿ ನಿಮ್ಮ ಜೀವನದಲ್ಲಿ ಹಣದ ಹರಿವು ನಿಂತು ಬಿಡುತ್ತದೆ. ಇದಕ್ಕೆ ವಾಸ್ತು ಶಾಸ್ತ್ರದ ಪರಿಹಾರಗಳೇನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನಿಮ್ಮ ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿಗೆ ಸನಾತನ ಧರ್ಮದಿಂದಲೂ ಕೂಡ ಪವಿತ್ರ ಎಂದು ಭಾವಿಸಲಾಗುವ ತುಳಸಿ ಗಿಡವನ್ನು ನೆಡಬೇಕು. ಇದರಿಂದಾಗಿ ನಿಮ್ಮ ಮನೆಯ ನಕಾರಾತ್ಮಕ ಶಕ್ತಿಗಳು ದೂರವಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಒಂದು ವೇಳೆ ನಿಮ್ಮ ಜಾತಕದಲ್ಲಿ ಶುಭಕಾರಕ ಗುರು ಬಲಹೀನನಾಗಿದ್ದರೆ ಮ್ಯಾಪ್ ನೀರಿನಲ್ಲಿ ಒಂದು ಚಿಟಿಕೆ ಅರಿಶಿನವನ್ನು ಸೇರಿಸಿ ಕ್ಲೀನ್ ಮಾಡಿದರೆ ಒಳ್ಳೆಯದು ಹಾಗೂ ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸದೃಢವಾಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

lakshmi horoscope | ಏನೇ ಮಾಡಿದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ?? ಕಷ್ಟ ಪಟ್ಟು ದುಡಿದರೂ ಹಣ ಉಳಿಯುತ್ತಿಲ್ಲವೇ?? ಹೀಗೆ ಮಾಡಿ ಸಾಕು. ನಿಮ್ಮನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ.
ಏನೇ ಮಾಡಿದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ?? ಕಷ್ಟ ಪಟ್ಟು ದುಡಿದರೂ ಹಣ ಉಳಿಯುತ್ತಿಲ್ಲವೇ?? ಹೀಗೆ ಮಾಡಿ ಸಾಕು. ನಿಮ್ಮನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ. 2

ವಾಸ್ತುಶಾಸ್ತ್ರದಲ್ಲಿ ಪ್ರಮುಖವಾಗಿ ನಿಮ್ಮ ಮನೆಯ ಈಶಾನ್ಯ ಕೋನ ಎನ್ನುವುದು ಸಾಕಷ್ಟು ಪ್ರಮುಖವಾಗಿರುತ್ತದೆ. ಒಂದು ವೇಳೆ ನಿಮ್ಮ ಜೀವನದಲ್ಲಿ ಆರ್ಥಿಕ ಹೀನತೆ ಕಂಡು ಬರುತ್ತಿದೆ ಎಂದರೆ ಅದಕ್ಕೆ ಈಶಾನ್ಯ ದಿಕ್ಕೇ ಕಾರಣವಾಗಿರುತ್ತದೆ. ಹೀಗಾಗಿ ನಿಮ್ಮ ಮನೆಯ ಈ ಭಾಗವನ್ನು ಶುಚಿಯಾಗಿ ಹಾಗೂ ಪಾವತ್ರ್ಯತೆಯಿಂದ ಕಾಪಾಡಿಕೊಂಡರೆ ನಿಮ್ಮ ಜೀವನದಲ್ಲಿ ಏರುಗತಿ ಕಾಣಬಹುದಾಗಿದೆ. ಒಂದು ವೇಳೆ ಮನೆಯಲ್ಲಿ ಮುಳ್ಳಿನ ಅಥವಾ ಹಾಲಿನ ಸಸ್ಯಗಳು ಬೆಳೆದರೆ ಅವುಗಳನ್ನು ಕೂಡಲೇ ತೆಗೆದು ಹಾಕಬೇಕು. ನೀವು ಹೀಗೆ ಮಾಡುವ ಕಾರಣದಿಂದಾಗಿ ನಿಮ್ಮ ಮನೆಯಲ್ಲಿ ನಿಮ್ಮ ಜೀವನವನ್ನು ಸರಿಪಡಿಸುವ ಧನಾತ್ಮಕ ಶಕ್ತಿಗಳು ಉಳಿದುಕೊಳ್ಳುತ್ತವೆ.

ಒಂದು ವೇಳೆ ನಿಮ್ಮ ಮನೆಯ ಟ್ಯಾಂಕ್ ನಳ್ಳಿ ಅಥವಾ ಟ್ಯಾಪ್ ಗಳಲ್ಲಿ ಸದಾ ಕಾಲ ನೀರು ಜಿನುಗುತ್ತಲೆ ಇದ್ದರೆ ಅದನ್ನು ಕಂಡುಹಿಡಿದು ಸರಿಪಡಿಸುವಂತಹ ಕಾರ್ಯವನ್ನು ಮಾಡಬೇಕು. ನೀರು ಈ ರೀತಿ ವ್ಯರ್ಥ ಆಗುವುದು ಅಶುಭ ಎಂಬುದಾಗಿ ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಈ ಎಲ್ಲಾ ವಿಚಾರಗಳಿಗೆ ತಕ್ಕಂತೆ ನೀವು ನಡೆದುಕೊಂಡರೆ ನಿಮ್ಮ ಜೀವನದಲ್ಲಿ ಆರ್ಥಿಕ ಪರಿಸ್ಥಿತಿ ಸೇರಿದಂತೆ ಎಲ್ಲಾ ಕಷ್ಟಗಳು ಕೂಡ ಪರಿಹಾರವಾಗುತ್ತದೆ.

Comments are closed.