ಸಮಂತಾ ಅದೊಂದು ಕಾರಣಕ್ಕೆ ಭಯ ಬಿದ್ದರೇ, ಹುಡುಗರ ಮನಸಿನ ರಾಣಿಗೆ ಕಾಡುತ್ತಿದೆ ಅದೊಂದು ಭಯ: ಬೇಸರದಲ್ಲಿ ಅಭಿಮಾನಿಗಳು.
ನಮಸ್ಕಾರ ಸ್ನೇಹಿತರೇ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ನಾಲ್ಕು ವರ್ಷಗಳ ದಾಂಪತ್ಯ ಜೀವನದ ನಂತರ ತಾನು ಪ್ರೀತಿಸಿ ಮದುವೆಯಾಗಿದ್ದ ನಾಗಚೈತನ್ಯ ಅವರಿಗೆ ವಿವಾಹ ವಿಚ್ಛೇದನ ನೀಡಿ ಬೇರೆ ಆದ ದಿನದಿಂದಲೂ ಕೂಡ ನಟಿ ಸಮಂತ ಅವರು ಸ್ವಲ್ಪ ಹೆಚ್ಚಿಗೆಯೇ ಪ್ರಚಾರದಲ್ಲಿದ್ದಾರೆ ಎಂದು ಹೇಳಬಹುದು. ಕೆಲವರು ಅವರ ಪರವಾಗಿ ವಾದ ಮಾಡಿದರೆ ಇನ್ನೂ ಕೆಲವರು ಅವರ ವಿರುದ್ಧ ಟ್ರೊಲ್ ಮಾಡುತ್ತಾರೆ. ಅದರಲ್ಲೂ ಇದೆಲ್ಲಾ ಆದ ನಂತರ ಪುಷ್ಪ ಚಿತ್ರದ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡ ನಂತರ ಭಾರತೀಯ ಚಿತ್ರರಂಗದಲ್ಲಿ ನಟಿ ಸಮಂತ ಅವರ ಬೇಡಿಕೆ ಇನ್ನಷ್ಟು ಹೆಚ್ಚಾಗುತ್ತದೆ.
ಇತ್ತೀಚಿಗಂತೂ ಬಹುತೇಕ ಎಲ್ಲಾ ಭಾಷೆಗಳಿಂದಲೂ ಕೂಡ ಬೇರೆ ಬೇರೆ ಪಾತ್ರಗಳಲ್ಲಿ ನಟಿಸುವಂತೆ ಸಮಂತ ಅವರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ಸಮಂತ ಅವರಿಗೆ ಸಿನಿಮಾಗಳ ಸಂಖ್ಯೆ ಹೆಚ್ಚಾಗಿ ಬರುತ್ತಿದೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಅಭಿಮಾನಿಗಳು ಕೂಡ ಇತ್ತೀಚಿನ ದಿನಗಳಲ್ಲಿ ಸಮಂತ ಅವರ ತಮ್ಮ ಸಿನಿಮಾ ಆಯ್ಕೆಯ ಕುರಿತಂತೆ ತೆಗೆದುಕೊಳ್ಳುತ್ತಿರುವ ನಿರ್ಧಾರದ ಕುರಿತಂತೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇತ್ತೀಚಿಗಷ್ಟೇ ಸಮಂತ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಅವರ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಹೌದು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ವಿವಾಹ ವಿಷಯದ ನಂತರ ಸಮಂತ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಸಮಂತ ತಮ್ಮ ವೈಯಕ್ತಿಕ ಜೀವನ ಹಾಗೂ ಸಿನಿಮಾದ ಕುರಿತಂತೆ ಹೆಚ್ಚಿನ ಮಾಹಿತಿಗಳನ್ನು ಸೋಶಿಯಲ್ ಮೀಡಿಯಾದ ಮೂಲಕವೇ ಅಭಿಮಾನಿಗಳು ಹಾಗೂ ಅವರನ್ನು ಫಾಲೋ ಮಾಡುವ ಜನರಿಗೆ ತಿಳಿಸಲು ಇಷ್ಟಪಡುತ್ತಾರೆ.
ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಗಳು ಹೆಚ್ಚಾಗಿದ್ದು ನಟಿ ಸಮಂತಾ ರವರು ಮೂರು ತಿಂಗಳ ಕಾಲ ಸೋಶಿಯಲ್ ಮೀಡಿಯಾದಿಂದ ದೂರ ಇರಬೇಕು ಎನ್ನುವ ನಿರ್ಧಾರವನ್ನು ಮಾಡಿದ್ದಾರಂತೆ. ಇದು ಅವರ ಅಭಿಮಾನಿಗಳಿಗೆ ಬೇಸರವನ್ನು ತರಿಸಿದ್ದು ಹೀಗೆ ಮಾಡಬಾರದಿತ್ತು ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಸಮಂತ ರವರ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ವ್ಯಕ್ತಪಡಿಸಿ.
Comments are closed.