News from ಕನ್ನಡಿಗರು

ಯಶ್ ರವರ ಡಿಪಿ ನಲ್ಲಿ ಅವರ ಕೈಗೆ ಹಾಕಿಕೊಂಡಿರುವ ವಾಚ್ ಬೆಲೆ ಎಷ್ಟು ಗೊತ್ತಾ? ನಿಮ್ಮ ನೆಚ್ಚಿನ ನಟರ ಸಂಭಾವನೆಗಿಂತ ಹೆಚ್ಚು. ಎಷ್ಟು ಕೋತಿ ಗೊತ್ತೇ??

15

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಈಗ ಸಾಕಷ್ಟು ಪ್ರವರ್ಧಮಾನದಲ್ಲಿರುವ ನಟ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್ ರವರು. ಕೆಜಿಎಫ್ ಚಾಪ್ಟರ್ 1 ಹಾಗೂ 2 ಚಿತ್ರಗಳ ನಂತರ ರಾಕಿಂಗ್ ಸ್ಟಾರ್ ಯಶ್ ರವರ ಬೇಡಿಕೆ ಎನ್ನುವುದು ಪರಭಾಷೆಗಳಲ್ಲಿ ಕೂಡ ಹೆಚ್ಚಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ ಎರಡು ಚಿತ್ರ ಈಗಾಗಲೇ ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 1250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಹೀಗಾಗಿ ಅವರ ಮುಂದಿನ ಚಿತ್ರ ಅದ್ದೂರಿಯಾಗಿ ನಿರ್ಮಾಣಗೊಳ್ಳಲಿದೆ ಎಂಬ ಮಾತುಕತೆಗಳು ಸಿನಿಮಾ ವಲಯದಲ್ಲಿ ಜೋರಾಗಿ ನಡೆಯುತ್ತಿದೆ. ಇನ್ನು ಇಡೀ ಭಾರತೀಯ ಚಿತ್ರರಂಗದಲ್ಲಿ ಹೆಚ್ಚಿನ ಸಂಭಾವನೆಯನ್ನು ಪಡೆದುಕೊಳ್ಳುವ ನಟರ ಸಾಲಿನಲ್ಲಿ ಕೂಡ ಯಶ್ ಕಾಣಿಸಿಕೊಳ್ಳುತ್ತಾರೆ. ಇನ್ನು ಅವರು ಮುಂದಿನ ಸಿನಿಮಾ ಯಾರು ಜೊತೆ ಮಾಡುತ್ತಾರೆ ಎಂಬ ಚರ್ಚೆಗಳು ಕೇವಲ ಕನ್ನಡ ಸಿನಿಮಾದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಹೆಚ್ಚಾಗಿ ಚರ್ಚೆಯಲ್ಲಿದೆ.

ಆದರೆ ಸದ್ಯದ ಮಟ್ಟಿಗೆ ನಡೆಯುತ್ತಿರುವ ಟ್ರೆಂಡಿಂಗ್ ಚರ್ಚೆ ಎಂದರೆ ರಾಕಿಂಗ್ ಸ್ಟಾರ್ ಯಶ್ ರವರ ಡಿಪಿಯಲ್ಲಿ ಅವರು ಕೈಗೆ ಧರಿಸಿರುವ ವಾಚ್ ನ ಬೆಲೆ. ಈ ವಾಚ್ ಬೆಲೆ ಕೇಳಿದರೆ ಕನ್ನಡ ಚಿತ್ರರಂಗದ ಕೆಲವೊಂದು ನಟರ ಸಂಭಾವನೆ ಕೂಡ ಇಷ್ಟೊಂದು ಇರಲಿಕ್ಕಿಲ್ಲ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಹೌದು ಸ್ನೇಹಿತರೆ ರಾಕಿಂಗ್ ಸ್ಟಾರ್ ಯಶ್ ರವರ ಡಿಪಿಯಲ್ಲಿ ಅವರು ಧರಿಸಿರುವ ವಾಚಿನ ಹೆಸರು ನಾಟಿಲಸ್ 5 9 8 0/ 1 ಆರ್ ಫುಲ್ ಗೋಲ್ಡ್ ಕ್ರೊನೋಗ್ರಾಫ್ ವಾಚ್. ಇದರ ಬೆಲೆ ಬರೋಬ್ಬರಿ 3.4 ಕೋಟಿ ರೂಪಾಯಿ. ಇದು ವಿಶ್ವದ ಅತ್ಯಂತ ದುಬಾರಿ ವಾಚ್‌ಗಳಲ್ಲಿ ಒಂದಾಗಿದೆ ಎಂಬುದಾಗಿ ತಿಳಿದು ಬಂದಿದ್ದು ನಮ್ಮ ಕನ್ನಡದ ನಟರು ಕೂಡ ನೋಡಲು ಸಿಂಪಲ್ ಆಗಿದ್ದರೂ ಕೂಡ ಯಾವ ಹಾಲಿವುಡ್ ಸೆಲೆಬ್ರಿಟಿಗಳಿಗೂ ಕೂಡ ಕಡಿಮೆ ಇಲ್ಲ ಎಂಬುದನ್ನು ಈ ಮೂಲಕ ನಾವು ಹೇಳಬಹುದು.

Leave A Reply

Your email address will not be published.