ಭೇಷ್ ರೋಹಿತ್ ಶರ್ಮ: ಮತ್ತೊಮ್ಮೆ ಸೋಲಿನ ಕುರಿತು ಮಾತನಾಡಿ ರೋಹಿತ್ ಶರ್ಮ ಹೇಳಿದ್ದೇನು ಗೊತ್ತೇ?? ನೆಟ್ಟಿಗರಂತೂ ಫುಲ್ ಗರಂ.

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ತಂಡ ಬಹುತೇಕ ಈ ಬಾರಿಯ ಏಷ್ಯಾ ಕಪ್ ಟೂರ್ನಮೆಂಟ್ ನಿಂದ ಹೊರಬಿದ್ದಿದೆ ಎಂದು ಹೇಳಬಹುದಾಗಿದೆ. ಈಗಾಗಲೇ ಪಾಕಿಸ್ತಾನ ವಿರುದ್ಧದ ಐದು ವಿಕೆಟ್ಗಳ ಸೋಲು ಹಾಗೂ ಶ್ರೀಲಂಕಾ ವಿರುದ್ಧದ ಆರು ವಿಕೆಟ್ಗಳ ಸೋಲು ಭಾರತೀಯ ಕ್ರಿಕೆಟ್ ತಂಡವನ್ನು ಏಷ್ಯಾ ಕಪ್ ನಂತಹ ಟೂರ್ನಮೆಂಟ್ ನಲ್ಲಿ ಮುಖಭಂಗ ಅನುಭವಿಸುವಂತೆ ಮಾಡಿದೆ. ಪಂದ್ಯವನ್ನು ಸೋತ ನಂತರ ರೋಹಿತ್ ಶರ್ಮಾ ಅವರು ನೀಡಿರುವ ಪ್ರತಿಕ್ರಿಯೆಗೆ ನೆಟ್ಟಿಗರು ಈಗಾಗಲೇ ಗರಂ ಆಗಿದ್ದಾರೆ.

ಅಷ್ಟಕ್ಕೂ ಪಂದ್ಯ ಸೋತ ನಂತರ ಪ್ರೆಸ್ ಮೀಟ್ ನಲ್ಲಿ ರೋಹಿತ್ ಶರ್ಮ ಏನನ್ನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ. ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಅವರು ದೀರ್ಘಕಾಲಿಕ ಪ್ರಕ್ರಿಯೆಯಲ್ಲಿ ಯಾವುದೇ ಚಿಂತೆ ಇಲ್ಲ ನಾವು ಮೂವರು ವೇದಿಗಳನ್ನು ಟಿ-20 ವಿಶ್ವಕಪ್ ಗೂ ಮುನ್ನ ಪ್ರಯೋಗಿಸಬೇಕು ಎನ್ನುವ ನಿಟ್ಟಿನಲ್ಲಿ ಈ ಪ್ರಯತ್ನವನ್ನು ಮಾಡಿದ್ದೇವೆ ಇದರಿಂದ ನಮಗೆ ಯಾವುದೇ ನಿರಾಸೆ ಇಲ್ಲ ಎಂಬುದಾಗಿ ಕೂಡ ಹೇಳಿದ್ದಾರೆ. ಕಳೆದ ಟಿ20 ವಿಶ್ವಕಪ್ ಮುಗಿದ ನಂತರ ಕೇವಲ ನಾವು ಮೊದಲ ಬಾರಿಗೆ ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳನ್ನು ಸೋತಿದ್ದೇವೆ ಹೀಗಾಗಿ ತಂಡವಾಗಿ ನಾವು ಚಿಂತೆ ಪಡುವ ಅಗತ್ಯವಿಲ್ಲ ಇದಕ್ಕಾಗಿ ಉತ್ತರವನ್ನು ಹುಡುಕುತ್ತಿದ್ದೇವೆ ಅಷ್ಟೇ ಎಂಬುದಾಗಿ ಹೇಳಿದ್ದಾರೆ.

netizens abt rohit | ಭೇಷ್ ರೋಹಿತ್ ಶರ್ಮ: ಮತ್ತೊಮ್ಮೆ ಸೋಲಿನ ಕುರಿತು ಮಾತನಾಡಿ ರೋಹಿತ್ ಶರ್ಮ ಹೇಳಿದ್ದೇನು ಗೊತ್ತೇ?? ನೆಟ್ಟಿಗರಂತೂ ಫುಲ್ ಗರಂ.
ಭೇಷ್ ರೋಹಿತ್ ಶರ್ಮ: ಮತ್ತೊಮ್ಮೆ ಸೋಲಿನ ಕುರಿತು ಮಾತನಾಡಿ ರೋಹಿತ್ ಶರ್ಮ ಹೇಳಿದ್ದೇನು ಗೊತ್ತೇ?? ನೆಟ್ಟಿಗರಂತೂ ಫುಲ್ ಗರಂ. 2

ತಂಡದ ಅತ್ಯಂತ ಯುವ ವೇಗಿ ಆಗಿರುವ ಅರ್ಷದೀಪ್ ಸಿಂಗ್ ಕೊನೆಯ ಓವರ್ ಗಳಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದನ್ನು ಕೂಡ ಪ್ರಶಂಸಿಸಿದ್ದಾರೆ. ನಮ್ಮ ದ್ವಿತೀಯಾರ್ದದ ಬ್ಯಾಟಿಂಗ್ ನಲ್ಲಿ ಹತ್ತರಿಂದ ಹದಿನೈದು ರನ್ನುಗಳ ಕೊರತೆ ಕಾಣುತ್ತಿತ್ತು. ಇದನ್ನು ಶ್ರೀಲಂಕಾ ತಂಡ ಕ್ಯಾಪಿಟಲೈಸ್ ಮಾಡಿಕೊಂಡಿದೆ ಎಂಬುದಾಗಿ ಹೇಳಿ ಈ ಬಗ್ಗೆ ನಾವು ತಂಡವಾಗಿ ಅರಿತು ಕೆಲಸ ಮಾಡಬೇಕು ಎಂಬುದಾಗಿ ರೋಹಿತ್ ಶರ್ಮ ಹೇಳಿದ್ದಾರೆ. ಆದರೆ ನಟ್ಟಿಗರು ರೋಹಿತ್ ಶರ್ಮ ಅವರ ನಾಯಕತ್ವದ ವಿರುದ್ಧವಾಗಿ ದೊಡ್ಡಮಟ್ಟದಲ್ಲಿ ಪ್ರಶ್ನೆಯನ್ನು ಎತ್ತಿದ್ದಾರೆ ಎನ್ನುವುದಂತು ಸುಳ್ಳಲ್ಲ.

Comments are closed.