ಯಾರಿಗೂ ತಿಳಿಯದ ದರ್ಶನ್ ರವರ ಮತ್ತೊಂದು ಮುಖದ ಬಗ್ಗೆ ವಿವರಿಸಿದ ವಿನೋದ್ : ಸುದ್ದಿ ಕೇಳಿ ನಂಬಲಾಗಲಿಲ್ಲ ಎಂದ ಜನರು.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾದ ಚಿತ್ರೀಕರಣ ಮುಗಿದಿದ್ದು ಇದೇ ನವೆಂಬರ್ ತಿಂಗಳಿನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಸಿನಿಮಾ ರಂಗದ ಮೂಲಗಳು ತಿಳಿಸಿವೆ. ಆದರೆ ಮಾಧ್ಯಮಗಳು ಮಾತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ಅಥವಾ ಅವರ ಸಿನಿಮಾಗಳ ಬಗ್ಗೆ ಸುದ್ದಿಯನ್ನು ಬಿತ್ತರಿಸುವುದಕ್ಕೆ ಆಕ್ಷೇಪವನ್ನು ಎತ್ತಿ ನಿಷೇಧವನ್ನು ಹೇರಿವೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಆಡಿಯೋ ದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದು ಎನ್ನರಾದ ವಾಯ್ಸ್ ಮಾಧ್ಯಮ ಮೂಲದ ವ್ಯಕ್ತಿಗೆ ಆಕ್ಷೇಪಾರ್ಹ ಮಾತುಗಳಲ್ಲಿ ಬೈದಿದೆ ಎಂಬುದಾಗಿ ತಿಳಿದು ಬಂದಿದ್ದು ಇದಕ್ಕಾಗಿ ದರ್ಶನ್ ಅವರ ವಿರುದ್ಧ ಮಾಧ್ಯಮಗಳೆಲ್ಲವೂ ಕೂಡ ಬ್ಯಾನ್ ಹೇರಿವೆ ಎಂಬುದಾಗಿ ತಿಳಿದುಬಂತು. ಇದರಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ನಮ್ಮ ನೆಚ್ಚಿನ ನಟನ ಸಿನಿಮಾ ವನ್ನು ಪ್ರಮೋಷನ್ ಮಾಡಲು ಮಾಧ್ಯಮಗಳ ಅಗತ್ಯವಿಲ್ಲ ನಾವೇ ಪ್ರಮೋಷನ್ ಮಾಡುತ್ತೇವೆ ಎಂಬುದಾಗಿ ಸ್ವಯಂ ಅವರೇ ಕ್ರಾಂತಿ ಸಿನಿಮಾದ ಪ್ರಮೋಷನ್ ಮಾಡಲು ಪ್ರಾರಂಭಿಸಿದ್ದರು. ಇನ್ನು ಇದೇ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಅಭಿಮಾನಿಗಳು ಪ್ರೋತ್ಸಾಹಿಸುತ್ತಿದ್ದ ಪೋಸ್ಟ್ ಅನ್ನು ಶೇರ್ ಮಾಡಿಕೊಂಡು ಭಾವನಾತ್ಮಕವಾಗಿ ತಮ್ಮ ಸಿನಿಮಾ ಜೀವನದಲ್ಲಿ ಅಭಿಮಾನಿಗಳ ಪಾತ್ರದ ಬಗ್ಗೆ ಬರೆದುಕೊಂಡಿದ್ದರು.

vinod abt darshan | ಯಾರಿಗೂ ತಿಳಿಯದ ದರ್ಶನ್ ರವರ ಮತ್ತೊಂದು ಮುಖದ ಬಗ್ಗೆ ವಿವರಿಸಿದ ವಿನೋದ್ : ಸುದ್ದಿ ಕೇಳಿ ನಂಬಲಾಗಲಿಲ್ಲ ಎಂದ ಜನರು.
ಯಾರಿಗೂ ತಿಳಿಯದ ದರ್ಶನ್ ರವರ ಮತ್ತೊಂದು ಮುಖದ ಬಗ್ಗೆ ವಿವರಿಸಿದ ವಿನೋದ್ : ಸುದ್ದಿ ಕೇಳಿ ನಂಬಲಾಗಲಿಲ್ಲ ಎಂದ ಜನರು. 2

ಹೌದು ಇದೇ ಹಿನ್ನೆಲೆಯಲ್ಲಿ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟ ಆಗಿರುವ ವಿನೋದ್ ಪ್ರಭಾಕರ್ ಅವರು ಕೂಡ ದರ್ಶನ್ ಅವರ ಬಗ್ಗೆ, ” ನೀವು ಅತ್ಯಂತ ಒಳ್ಳೆಯ ಮನಸ್ಸಿನ ವ್ಯಕ್ತಿ ನಿಮಗೆ ಖಂಡಿತವಾಗಿ ದೇವರು ಒಳ್ಳೆಯದೇ ಮಾಡುತ್ತಾನೆ. ಕ್ರಾಂತಿ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣಲಿ” ಎಂಬುದಾಗಿ ಶುಭ ಹಾರೈಸುವ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನಸ್ಸು ಎಷ್ಟು ಒಳ್ಳೆಯದು ಎಂಬುದನ್ನು ಅಭಿಮಾನಿಗಳಿಗೆ ಒತ್ತಿ ಹೇಳಿದ್ದಾರೆ.

Comments are closed.