ಸೋತಿದ್ದು ಮುಂಬೈ ಗೆದ್ದಿದ್ದು ನೈಟ್ ರೈಡರ್ಸ್, ಆದರೆ ಶಿಕ್ಷೆಗೆ ಒಳಗಾಗಿದ್ದು ನಿತೀಶ್ ರಾಣ ಹಾಗೂ ಜಸ್ಪ್ರೀತ್ ಬುಮ್ರಾ. ಯಾಕೆ ಗೊತ್ತೇ?? ಬಿಸಿಸಿಐ ನಿಂದ ಖಡಕ್ ಶಿಕ್ಷೆ.

ನಮಸ್ಕಾರ ಸ್ನೇಹಿತರೇ ನಿನ್ನೆ ಐಪಿಎಲ್ ಪಂದ್ಯಾಟ ನಿಜಕ್ಕೂ ಕೂಡ ಪ್ರತಿಯೊಬ್ಬರಿಗೆ ರೋಮಾಂಚನವನ್ನು ನೀಡಿತ್ತು. ಈ ಬಾರಿಯ ಐಪಿಎಲ್ ನಲ್ಲಿ ಮೊದಲ ಗೆಲುವನ್ನು ಹುಡುಕುತ್ತಿದ್ದ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮತ್ತೊಂದು ಸೋಲನ್ನು ಉಣಬಡಿಸಿತು. ಹೌದು ರೋಹಿತ್ ಶರ್ಮಾ ನೇತೃತ್ವದ ಐದು ಬಾರಿಯ ಚಾಂಪಿಯನ್ ತಂಡವಾಗಿರುವ ಮುಂಬೈ ಇಂಡಿಯನ್ಸ್ ತಂಡ ಟೂರ್ನಿ ಆರಂಭದಲ್ಲಿ 3ಕ್ಕೆ ಮೂರು ಪಂದ್ಯಗಳನ್ನು ಕೂಡ ಸೋತು ಸುಣ್ಣವಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಾಲ್ಕು ವಿಕೆಟ್ ಗಳ ನಷ್ಟಕ್ಕೆ 20 ಓವರ್ಗಳಲ್ಲಿ ಬರೋಬ್ಬರಿ 161 ರನ್ನುಗಳನ್ನು ಗಳಿಸಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ನೀಡಿತು. ಆದ್ರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ತಂಡವನ್ನು ಬೆನ್ನತ್ತಿ ಕೇವಲ 16 ಓವರುಗಳಲ್ಲಿ ಪಂದ್ಯವನ್ನು ಗೆದ್ದಿತ್ತು. ಹೌದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಪ್ಯಾಟ್ ಕಮಿನ್ಸ್ ಬೌಲರ್ ಆಗಿ ದುಬಾರಿಯಾಗಿ ಕಂಡರೂ ಕೂಡ ಬ್ಯಾಟ್ಸ್ಮನ್ ಆಗಿ ಕೇವಲ 15 ಎಸೆತಗಳಲ್ಲಿ ಬರೋಬ್ಬರಿ 56 ರನ್ನುಗಳನ್ನು ಬಾರಿಸಿದರು. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು. ಈ ಮೂಲಕ ಈ ಬಾರಿಯ ಐಪಿಎಲ್ ನಲ್ಲಿ ನಾಲ್ಕು ಪಂದ್ಯಗಳಲ್ಲಿ ಮೂರನೇ ಗೆಲುವನ್ನು ಸಾಧಿಸಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಪಾಯಿಂಟ್ಸ್ ಟೇಬಲ್ ನಲ್ಲಿ ಆರು ಅಂಕಗಳನ್ನು ಪಡೆಯುವ ಮೂಲಕ ಪಾಯಿಂಟ್ಸ್ ಟೇಬಲ್ ನಲ್ಲಿ ಟಾಪ್ ಸ್ಥಾನವನ್ನು ಪಡೆದುಕೊಂಡಿದೆ.

nitish rana bumrah | ಸೋತಿದ್ದು ಮುಂಬೈ ಗೆದ್ದಿದ್ದು ನೈಟ್ ರೈಡರ್ಸ್, ಆದರೆ ಶಿಕ್ಷೆಗೆ ಒಳಗಾಗಿದ್ದು ನಿತೀಶ್ ರಾಣ ಹಾಗೂ ಜಸ್ಪ್ರೀತ್ ಬುಮ್ರಾ. ಯಾಕೆ ಗೊತ್ತೇ?? ಬಿಸಿಸಿಐ ನಿಂದ ಖಡಕ್ ಶಿಕ್ಷೆ.
ಸೋತಿದ್ದು ಮುಂಬೈ ಗೆದ್ದಿದ್ದು ನೈಟ್ ರೈಡರ್ಸ್, ಆದರೆ ಶಿಕ್ಷೆಗೆ ಒಳಗಾಗಿದ್ದು ನಿತೀಶ್ ರಾಣ ಹಾಗೂ ಜಸ್ಪ್ರೀತ್ ಬುಮ್ರಾ. ಯಾಕೆ ಗೊತ್ತೇ?? ಬಿಸಿಸಿಐ ನಿಂದ ಖಡಕ್ ಶಿಕ್ಷೆ. 2

ಆದರೆ ಇದರ ನಡುವೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್ಮನ್ ನಿತೀಶ್ ರಾಣ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ಇಬ್ಬರೂ ಕೂಡ ಪೇಚಿಗೆ ಸಿಲುಕಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹೌದು ನಿನ್ನೆ ನಡೆದಿರುವ ಪಂದ್ಯಾಟದಲ್ಲಿ ಗೆದ್ದಿದ್ದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡ ಆದರೆ ಸಂಕಷ್ಟಕ್ಕೆ ಸಿಲುಕಿದ್ದು ಮಾತ್ರ ನಿತೀಶ್ ರಾಣ ಹಾಗೂ ಜಸ್ಪ್ರೀತ್ ಬುಮ್ರಾ. ಐಪಿಎಲ್ ನೀತಿ ಸಂಹಿತೆಯ ಉಲ್ಲಂಘನೆ ಕಾರಣದಿಂದಾಗಿ ಜಸ್ಪ್ರೀತ್ ಬುಮ್ರಾ ಹಾಗೂ ನಿತೀಶ್ ರಾಣ ರವರಿಗೆ ಪಂದ್ಯದ ಸಂಭಾವನೆಯ 10% ಫೈನ್ ಕಟ್ಟುವಂತೆ ಆದೇಶಿಸಿದೆ. ಇಬ್ಬರೂ ಕೂಡ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು ಶಿಕ್ಷೆಗೆ ಇಬ್ಬರೂ ಕೂಡ ಒಳಪಟ್ಟಿದ್ದಾರೆ ಎಂಬುದಾಗಿ ಕೇಳಿಬಂದಿದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವೇನು ಎನ್ನುವುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.