ಪಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ ರವರು ಬಾಲಿವುಡ್ ಗೆ ಹೋಗೊಡುವುದಿಲ್ಲ ಎಂದದ್ದು ಯಾಕೆ ಗೊತ್ತೇ?? ಭೇಷ್ ಎಂದ ನೆಟ್ಟಿಗರು.

ನಮಸ್ಕಾರ ಸ್ನೇಹಿತರೇ ಯಾರಿಗೂ ಕೂಡ ಕೆಜಿಎಫ್ ಚಾಪ್ಟರ್ 1 ಕನ್ನಡ ಚಿತ್ರರಂಗದ ಭವಿಷ್ಯವನ್ನೇ ಬದಲಾಯಿಸುತ್ತದೆ ಎಂದು ತಿಳಿದಿರಲಿಲ್ಲ. ಇಂದು ಪ್ರಶಾಂತ್ ನೀಲ್ ರಾಕಿಂಗ್ ಸ್ಟಾರ್ ಯಶ್ ಹಾಗೂ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದುರ್ ಅವರಿಂದಾಗಿ ಕನ್ನಡ ಚಿತ್ರ ಕೆಜಿಎಫ್ ಚಾಪ್ಟರ್ 2 ರ ಮೂಲಕ ಇಡೀ ಭಾರತ ದೇಶದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಕನ್ನಡ ಚಿತ್ರದ ಕಂಪನ್ನು ಪಸರಿಸಲು ಸಜ್ಜಾಗಿದೆ.

ಈಗಾಗಲೇ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಟ್ರೈಲರ್ ಹಾಗೂ ಎರಡು ಹಾಡುಗಳು ಕೂಡ ಬಿಡುಗಡೆಯಾಗಿದ್ದು ಚಿತ್ರದ ಜನಪ್ರಿಯತೆ ದಿನೇ ದಿನೇ ಸಾಗರದಂತೆ ಹೆಚ್ಚಾಗುತ್ತಿದೆ. ಇನ್ನು ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಆಗಲು ಕೇವಲ ಒಂದು ವಾರ ಬಾಕಿ ಉಳಿದಿದೆ ಅಷ್ಟೇ. ಬುಕ್ ಮೈ ಶೋ ನಲ್ಲಿ ಬರೋಬ್ಬರಿ ಒಂದು ಮಿಲಿಯನ್ ಗೂ ಅಧಿಕ ಇಂಟರೆಸ್ಟ್ ಬಟನ್ ನ್ನು ಸಿನಿಮಾ ಪ್ರೇಕ್ಷಕರು ಒತ್ತಿದ್ದಾರೆ. ಈಗಾಗಲೇ ರಾಕಿಂಗ್ ಸ್ಟಾರ್ ಯಶ್ ರವರು ಭಾರತದ ಮೂಲೆಮೂಲೆಯಲ್ಲೂ ಕೂಡ ರಾಕಿ ಭಾಯ್ ಹೆಸರಿನಲ್ಲಿ ಪರಿಚಿತರಾಗಿದ್ದಾರೆ. ಕೆಜಿಎಫ್ ಚಾಪ್ಟರ್ 2 ಚಿತ್ರತಂಡ ಈಗಾಗಲೇ ಮುಂಬೈ ಹಾಗೂ ದೆಹಲಿಯಲ್ಲಿ ಪ್ರಚಾರವನ್ನು ಮಾಡಲು ಆರಂಭಿಸಿದೆ.

yash | ಪಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ ರವರು ಬಾಲಿವುಡ್ ಗೆ ಹೋಗೊಡುವುದಿಲ್ಲ ಎಂದದ್ದು ಯಾಕೆ ಗೊತ್ತೇ?? ಭೇಷ್ ಎಂದ ನೆಟ್ಟಿಗರು.
ಪಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ ರವರು ಬಾಲಿವುಡ್ ಗೆ ಹೋಗೊಡುವುದಿಲ್ಲ ಎಂದದ್ದು ಯಾಕೆ ಗೊತ್ತೇ?? ಭೇಷ್ ಎಂದ ನೆಟ್ಟಿಗರು. 2

ಚಿತ್ರದ ಬಿಡುಗಡೆಗೂ ಮುನ್ನ ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಚಿತ್ರದ ಕುರಿತಂತೆ ಸಂಪೂರ್ಣ ಚಿತ್ರದ ಪ್ರಮೋಷನ್ ಮಾಡಲಿದೆ. ಇದೀಗ ಚಿತ್ರತಂಡ ಮುಂಬೈನಲ್ಲಿ ಚಿತ್ರದ ಪ್ರಮೋಷನ್ ಮಾಡುತ್ತಿದ್ದು ಈ ಸಂದರ್ಭದಲ್ಲಿ ಯಾಕೆ ಬಾಲಿವುಡ್ ಗೆ ಬರಬಾರದು ಎನ್ನುವುದಾಗಿ ನಿರೂಪಕಿ ಒಬ್ಬರು ಯಶ್ ರವರಿಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸುತ್ತಾ ರಾಕಿಂಗ್ ಸ್ಟಾರ್ ಯಶ್ ರವರು ಇನ್ಯಾವುದೋ ಚಿತ್ರರಂಗಕ್ಕೆ ಹೋಗಿ ಅಲ್ಲಿ ನಟಿಸಿ ಸಾಧನೆ ಮಾಡಿದರೆ ಸಾಧನೆ ಎಂದು ನಾನು ಅಂದುಕೊಳ್ಳುವುದಿಲ್ಲ. ನಾವು ನಮ್ಮ ಚಿತ್ರರಂಗದಲ್ಲಿ ಇದ್ದುಕೊಂಡು ನಮ್ಮ ಕಂಟೆಂಟ್ ಮೂಲಕ ಜಾಗತಿಕವಾಗಿ ಹರಡುವುದು ನಿಜವಾದ ಸಾಧನೆಯಾಗಿದೆ. ನೀವು ಎಲ್ಲೇ ಇದ್ದರೂ ಇಂದಿನ ಮುಂದುವರಿದ ಜಗತ್ತಿನಲ್ಲಿ ನಿಮ್ಮ ಸಿನಿಮಾ ಹಾಗೂ ಕಂಟೆಂಟ್ ಅನ್ನು ಜಗತ್ತಿನ ಯಾವುದೇ ಭಾಷೆಯ ಪ್ರೇಕ್ಷಕನಿಗೂ ಕೂಡ ತಲುಪಿಸಬಹುದಾಗಿದೆ ಇದಕ್ಕಾಗಿ ನೀವು ಬೇರೆ ಚಿತ್ರರಂಗಕ್ಕೆ ಹೋಗುವ ಅಗತ್ಯವಿಲ್ಲ ಎಂಬುದಾಗಿ ಪ್ರಶ್ನೆ ಕೇಳಿದ ನಿರೂಪಕಿಯ ಪ್ರಶ್ನೆಯನ್ನು ಪರಿಹರಿಸಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Comments are closed.