ಕನ್ನಡದಲ್ಲಿ ಬೇರೆ ಪ್ರತಿಭೆಗಳಿದ್ದರು ಕೂಡ ಓವರ್ ಹೈಪ್ ಕೊಡಲಾಗುತ್ತಿರುವ ನಟ ನಟಿಯರು ಯಾರ್ಯಾರು ಗೊತ್ತೇ?? ಲಿಸ್ಟಿನಲ್ಲಿ ಅಚ್ಚರಿಯ ಹೆಸರುಗಳು, ಯಾರ್ಯಾರಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗ ಎನ್ನುವುದು ಹಲವಾರು ಪ್ರತಿಭೆಗಳಿಗೆ ಆಶ್ರಯವನ್ನು ನೀಡಿರುವ ಸೂರು ಎಂದರೆ ತಪ್ಪಾಗಲಾರದು. ಈ ಹಿಂದೆ ಇಲ್ಲಿಯವರೆಗೆ ಹಲವಾರು ಪ್ರತಿಭೆಗಳು ಬಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಕನ್ನಡ ಪ್ರೇಕ್ಷಕರನ್ನು ರಂಜಿಸಿ ಹೋಗಿದ್ದಾರೆ. ಇನ್ನು ಮುಂದೆ ಕೂಡ ಬರಲಿದ್ದಾರೆ. ಆದರೆ ನಾವು ಇಂದು ಮಾತನಾಡಲು ಹೊರಟಿರುವುದು ಬೇರೆಯದೇ ವಿಚಾರದ ಕುರಿತಂತೆ. ನಮ್ಮ ಕನ್ನಡ ಚಿತ್ರರಂಗದಲ್ಲಿ ಕೆಲ ಕಲಾವಿದರಿಗೆ ಅವರ ಪ್ರತಿಭೆಗಿಂತ ಹೆಚ್ಚಾಗಿ ಅವರನ್ನು ವಿಜ್ರಂಭಿಸಲಾಗಿದೆ. ಆದರೆ ನಿಜವಾಗಿ ಕೂಡ ಅಷ್ಟೊಂದು ಹೊಗಳುವ ಅಗತ್ಯತೆ ಇಲ್ಲ.ಅಂತಹ ಓವರ್ ರೇಟೆಡ್ ಕಲಾವಿದರು ಯಾರು ಎನ್ನುವ ಕುರಿತಂತೆ ನಿಮಗೆ ಹೇಳಲು ಹೊರಟಿದ್ದೇವೆ.

ಓವರ್ ರೇಟೆಡ್ ಎಂದು ಹೇಳಿದ ಕ್ಷಣ ಅವರನ್ನು ನಾವು ಟೀಕೆ ಮಾಡುತ್ತಿದ್ದೇವೆ ಎಂದಲ್ಲ. ಬದಲಾಗಿ ಜನರು ಅಥವಾ ಅವರನ್ನು ಮಾಧ್ಯಮಗಳು ಪ್ರತಿಬಿಂಬಿಸುವ ರೀತಿ ಅಗತ್ಯಕ್ಕಿಂತ ಹೆಚ್ಚಾಗಿದೆ ಹಾಗೂ ಖಂಡಿತಾ ಇವರಷ್ಟೇ ಅದ್ಭುತವಾಗಿ ಕಾರ್ಯ ನಿರ್ವಹಣೆ ಮಾಡಬಲ್ಲ ಪ್ರತಿಭೆಗಳು ಸಾಕಷ್ಟು ಜನ ಇದ್ದಾರೆ ಎಂದು ಹೇಳಬಹುದಾಗಿದೆ. ಹಾಗಿದ್ದರೆ ಈ ಸಾಲಿನಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

chikkanna | ಕನ್ನಡದಲ್ಲಿ ಬೇರೆ ಪ್ರತಿಭೆಗಳಿದ್ದರು ಕೂಡ ಓವರ್ ಹೈಪ್ ಕೊಡಲಾಗುತ್ತಿರುವ ನಟ ನಟಿಯರು ಯಾರ್ಯಾರು ಗೊತ್ತೇ?? ಲಿಸ್ಟಿನಲ್ಲಿ ಅಚ್ಚರಿಯ ಹೆಸರುಗಳು, ಯಾರ್ಯಾರಿದ್ದಾರೆ ಗೊತ್ತೇ??
ಕನ್ನಡದಲ್ಲಿ ಬೇರೆ ಪ್ರತಿಭೆಗಳಿದ್ದರು ಕೂಡ ಓವರ್ ಹೈಪ್ ಕೊಡಲಾಗುತ್ತಿರುವ ನಟ ನಟಿಯರು ಯಾರ್ಯಾರು ಗೊತ್ತೇ?? ಲಿಸ್ಟಿನಲ್ಲಿ ಅಚ್ಚರಿಯ ಹೆಸರುಗಳು, ಯಾರ್ಯಾರಿದ್ದಾರೆ ಗೊತ್ತೇ?? 3

ಚಿಕ್ಕಣ್ಣ; ಚಿಕ್ಕಣ್ಣನವರು ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಕಿರಾತಕ ಚಿತ್ರದ ಮೂಲಕ ಜನಪ್ರಿಯತೆಗೆ ಬರುತ್ತಾರೆ. ಆದರೆ ನಿಜವಾಗಿ ಹೇಳಬೇಕೆಂದರೆ ಕಿರಾತಕ ಚಿತ್ರದ ನಂತರ ಆ ಮಟ್ಟದ ಕಾಮಿಡಿ ಪರ್ಫಾರ್ಮೆನ್ಸ್ ಅನ್ನು ಬೇರೆ ಯಾವುದೇ ಚಿತ್ರಗಳಲ್ಲಿ ಇದುವರೆಗೂ ಕೂಡ ಅವರು ನೀಡಿಲ್ಲ. ಕೇವಲ ಯುವ ಜನತೆಗೆ ಅವರು ಇಷ್ಟವಾಗುತ್ತಾರೆ ಹೊರತು ತಮ್ಮ ಡಬಲ್ ಮೀನಿಂಗ್ ಡೈಲಾಗ್ ಗಳಿಂದಾಗಿ ಫ್ಯಾಮಿಲಿ ಆಡಿಯನ್ಸ್ ಗೆ ಅವರು ಇಷ್ಟವಾಗುವುದು ಕಷ್ಟವೇ ಸರಿ. ಒಂದು ವೇಳೆ ಅವರು ಕಾಮಿಡಿ ಸ್ಟೈಲ್ ಅನ್ನು ಸರಿಮಾಡಿಕೊಂಡು ತಮ್ಮ ನಟನೆ ಹಾಗೂ ಹಾವಭಾವಗಳಲ್ಲಿ ಇನ್ನಷ್ಟು ಸಹಜತೆಯನ್ನು ತಂದರೆ ಖಂಡಿತವಾಗಿ ಎಲ್ಲಾ ಮಾದರಿಯ ಆಡಿಯನ್ಸ್ ಗೆ ಇವರು ಇಷ್ಟವಾಗುವುದು ಖಂಡಿತ.

ಅನುಶ್ರೀ; ಕನ್ನಡ ಚಿತ್ರರಂಗದ ನಿರೂಪಕಿಯಾಗಿ ಅನುಶ್ರೀ ಅವರು ಈಗಾಗಲೇ ಸರಿಗಮಪ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೇರಿದಂತೆ ಹಲವಾರು ಕಿರುತೆರೆಯ ಕಾರ್ಯಕ್ರಮಗಳ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಪ್ರತಿಯೊಂದು ಸಿನಿಮಾ ಕಾರ್ಯಕ್ರಮಕ್ಕೆ ಅನುಶ್ರೀ ಅವರ ನಿರೂಪಣೆ ಬೇಕೇ ಬೇಕು. ಆದರೆ ಇಲ್ಲಿ ಎದ್ದೇಳುವ ಮೊದಲ ಪ್ರಶ್ನೆಯೆಂದರೆ ಎಲ್ಲಾ ಕಾರ್ಯಕ್ರಮಗಳಲ್ಲಿ ಕೂಡ ಅನುಶ್ರೀ ಅವರೇ ನಿರ್ವಹಣೆ ಮಾಡಬೇಕು ಎನ್ನುವುದು ತಪ್ಪು. ಅವರಷ್ಟೇ ಅಥವಾ ಅವರಿಗಿಂತ ಹೆಚ್ಚು ಪ್ರತಿಭಾನ್ವಿತ ನಿರೂಪಕರು ಕೂಡ ನಮ್ಮ ಚಿತ್ರರಂಗದಲ್ಲಿ ಇದ್ದಾರೆ. ಹೀಗಾಗಿ ಈ ಮಟ್ಟದಲ್ಲಿ ಅನುಶ್ರೀ ಅವರನ್ನು ಓವರ್ ರೇಟೆಡ್ ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಇದನ್ನು ಹೊರತುಪಡಿಸಿ ಅವರ ನಿರೂಪಣೆಯಲ್ಲಿ ತಪ್ಪಿದೆ ಎಂದು ನಾವು ಹೇಳುತ್ತಿಲ್ಲ.

rashmika 22 | ಕನ್ನಡದಲ್ಲಿ ಬೇರೆ ಪ್ರತಿಭೆಗಳಿದ್ದರು ಕೂಡ ಓವರ್ ಹೈಪ್ ಕೊಡಲಾಗುತ್ತಿರುವ ನಟ ನಟಿಯರು ಯಾರ್ಯಾರು ಗೊತ್ತೇ?? ಲಿಸ್ಟಿನಲ್ಲಿ ಅಚ್ಚರಿಯ ಹೆಸರುಗಳು, ಯಾರ್ಯಾರಿದ್ದಾರೆ ಗೊತ್ತೇ??
ಕನ್ನಡದಲ್ಲಿ ಬೇರೆ ಪ್ರತಿಭೆಗಳಿದ್ದರು ಕೂಡ ಓವರ್ ಹೈಪ್ ಕೊಡಲಾಗುತ್ತಿರುವ ನಟ ನಟಿಯರು ಯಾರ್ಯಾರು ಗೊತ್ತೇ?? ಲಿಸ್ಟಿನಲ್ಲಿ ಅಚ್ಚರಿಯ ಹೆಸರುಗಳು, ಯಾರ್ಯಾರಿದ್ದಾರೆ ಗೊತ್ತೇ?? 4

ರಶ್ಮಿಕಾ ಮಂದಣ್ಣ; ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರ ಜಗತ್ತಿಗೆ ಪರಿಚಯವಾಗಿರುವಂತಹ ರಶ್ಮಿಕ ಮಂದಣ್ಣ ಈಗಾಗಲೇ ಕನ್ನಡ ಭಾಷೆಗಳಿಗಿಂತ ಹೆಚ್ಚಾಗಿ ಪರಭಾಷೆಗಳಲ್ಲಿ ಜಾಸ್ತಿ ನಟಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಹಾಗೂ ಕನ್ನಡತನದ ಕುರಿತಂತೆ ಅವರು ತೋರಿಸುವ ಅಸಡ್ಡೆ ಎನ್ನುವುದು ಕನ್ನಡಿಗರಲ್ಲಿ ಅಸಮಧಾನಕ್ಕೆ ಕಾರಣವಾಗಿದ್ದು ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಗಳು ಆಗಿರುವುದು ಕೂಡ ನೀವು ನೋಡಿರಬಹುದು. ಆದರೆ ನಟನೆಯ ವಿಚಾರದಲ್ಲೇ ಆಗಲಿ ಅಥವಾ ಸೌಂದರ್ಯದ ವಿಚಾರದಲ್ಲೇ ಆಗಲಿ ಅವರನ್ನು ನ್ಯಾಷನಲ್ ಕೃಷ್ ಎಂದು ಹೇಳುವಷ್ಟರ ಮಟ್ಟಿಗೆ ಯಾವ ಅಂಶಗಳು ಕೂಡ ಕಾಣುತ್ತಿಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾದ ಸತ್ಯವಾಗಿದೆ.

ನಿಖಿಲ್ ಕುಮಾರ್; ಇವರ ಮೊದಲ ಚಿತ್ರವನ್ನು ನೂರು ಕೋಟಿ ಬಜೆಟ್ ಚಿತ್ರ ರಾಜಮೌಳಿ ಅವರ ತಂದೆ ಕಥೆಯನ್ನು ಸಿದ್ಧಪಡಿಸಿದ್ದು ಹಾಗೆ ಹೀಗೆ ಎಂದು ಹೇಳಿ ಬಿಡುಗಡೆ ಮಾಡಲಾಗಿತ್ತು ಆದರೆ ಚಿತ್ರಮಂದಿರಗಳಲ್ಲಿ ಇದು ಸಂಪೂರ್ಣವಾಗಿ ಸೋತಿತ್ತು. ಸೀತಾರಾಮ ಕಲ್ಯಾಣ ಚಿತ್ರವನ್ನು ಕೂಡ ಸೂಪರ್ ಹಿಟ್ ಚಿತ್ರ ಎಂಬುದಾಗಿದೆ ಬಿಂಬಿಸಲಾಗಿತ್ತು ಆದರೆ ಇದು ಕೂಡ ಚಿತ್ರಮಂದಿರಗಳಿಗೆ ಜನರನ್ನು ಸೆಳೆಯುವಲ್ಲಿ ವಿಫಲವಾಗಿದೆ, ಇನ್ನು ರೈಡರ್ ಮೂವಿ ಬಂದಷ್ಟೇ ವೇಗವಾಗಿ ಹೋಗಿ ಬಿಟ್ಟಿತು ಇದರಲ್ಲೂ ಕೂಡ ಯಶಸ್ಸು ಕಾಣಲಿಲ್ಲ. ಇನ್ನು ಇವರನ್ನು ಕನ್ನಡದ ಟಾಪ್ ನಟರ ಜೊತೆಗೆ ಗುರುತಿಸುವಾಗಲು ಕೂಡ ಇದು ಓವರ್ ರೇಟೆಡ್ ಅಂಶ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.