ಪವನ್ ಶೆರಾವತ್ ಬೆಂಗಳೂರು ಬುಲ್ಸ್ ತಂಡವನ್ನು ಬಿಟ್ಟಿದ್ದು ಯಾಕೆ ಅಂತೇ ಗೊತ್ತೇ?? ಬುಲ್ಸ್ ಬಗ್ಗೆ ಮಾತನಾಡಿ ನಿನ್ನೆ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ಐಪಿಎಲ್ ಮೂಲಕ ಕ್ರಿಕೆಟ್ನಷ್ಟೇ ಈಗ ಪ್ರೊ ಕಬಡ್ಡಿ ಲೀಗ್ ಮೂಲಕ ಕಬ್ಬಡಿ ಕ್ರೀಡೆಯು ಕೂಡ ಭಾರತದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಯಾಗಿ ಮಾರ್ಪಟ್ಟಿದೆ. ಪ್ರತಿಯೊಬ್ಬ ಸ್ಟಾರ್ ಕಬಡ್ಡಿ ಕ್ರೀಡಾಪಟುವನ್ನು ಜನರು ನೆನಪಿಟ್ಟುಕೊಳ್ಳುವಷ್ಟರ ಮಟ್ಟಿಗೆ ಪ್ರೊ ಕಬ್ಬಡಿ ಲೀಗ್ ಬೆಳೆದು ನಿಂತಿದೆ. ಅದರಲ್ಲೂ ವಿಶೇಷವಾಗಿ ನಮ್ಮ ರಾಜ್ಯದ ಜನತೆಗೆ ಬೆಂಗಳೂರು ಬುಲ್ಸ್ ತಂಡದ ಮೇಲೆ ವಿಶೇಷ ಪ್ರೀತಿ ಎಂದು ಹೇಳಬಹುದಾಗಿದೆ. ಇನ್ನು ಹಲವಾರು ಸಮಯಗಳಿಂದ ಬೆಂಗಳೂರು ಬುಲ್ಸ್ ತಂಡದ ನಾಯಕನಾಗಿ ಯುವ ಪ್ರತಿಭಾನ್ವಿತ ಆಟಗಾರ ಪವನ್ ಶೆಹ್ರಾವತ್ ರವರು ಕಾಣಿಸಿಕೊಳ್ಳುತ್ತಿದ್ದರು.

ಇಡೀ ಪ್ರೊ ಕಬಡ್ಡಿ ಲೀಗ್ ನಲ್ಲಿ ಅವರಷ್ಟು ಪ್ರತಿಭಾನ್ವಿತ ಆಟಗಾರ ಇನ್ನೊಬ್ಬ ಇಲ್ಲ ಎಂದು ಹೇಳಬಹುದಾಗಿತ್ತು ಅಷ್ಟರಮಟ್ಟಿಗೆ ಚೆನ್ನಾಗಿ ಆಡುತ್ತಿದ್ದರು. ಒನ್ ಮ್ಯಾನ್ ಆರ್ಮಿ ಹಾಗೆ ತಂಡವನ್ನು ಸೋಲಿನಿಂದ ಗೆಲುವಿನ ದಡಕ್ಕೆ ಸಾಗಿಸುತ್ತಿದ್ದರು. ಆದರೆ ಈ ಬಾರಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪವನ್ ಅವರನ್ನು ತಮಿಳು ತಲೈವಾಸ್ ತಂಡ ಹರಾಜಿನಲ್ಲಿ ಅತ್ಯಂತ ಹೆಚ್ಚಿನ ಬೆಲೆಗೆ ಖರೀದಿಸುವ ಮೂಲಕ ಬೆಂಗಳೂರು ಬುಲ್ಸ್ ತಂಡದಿಂದ ಪವನ್ ಅವರು ಹೊರ ನಡೆಯಬೇಕಾಗಿ ಬಂದಿತು. ಇದು ಕೇವಲ ತಂಡಕ್ಕೆ ಮಾತ್ರವಲ್ಲದೆ ಬೆಂಗಳೂರು ಬುಲ್ಸ್ ತಂಡವನ್ನು ಸಪೋರ್ಟ್ ಮಾಡುತ್ತಿದ್ದ ಅಭಿಮಾನಿಗಳಿಗೂ ಕೂಡ ಸಾಕಷ್ಟು ಬೇಸರವನ್ನು ತಂದಿತ್ತು. ಪವನ್ ಅವರನ್ನು ಮರಳಿ ಖರೀದಿಸಲು ಸಾಧ್ಯವಾಗಲಿಲ್ಲ ಎಂಬುದಾಗಿ ತಿಳಿದು ತಂಡದ ಕೋಚ್ ಕೂಡ ಅತ್ತಿದ್ದರು ಎಂಬುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

pavan abt bengaluru bulls | ಪವನ್ ಶೆರಾವತ್ ಬೆಂಗಳೂರು ಬುಲ್ಸ್ ತಂಡವನ್ನು ಬಿಟ್ಟಿದ್ದು ಯಾಕೆ ಅಂತೇ ಗೊತ್ತೇ?? ಬುಲ್ಸ್ ಬಗ್ಗೆ ಮಾತನಾಡಿ ನಿನ್ನೆ ಹೇಳಿದ್ದೇನು ಗೊತ್ತೇ??
ಪವನ್ ಶೆರಾವತ್ ಬೆಂಗಳೂರು ಬುಲ್ಸ್ ತಂಡವನ್ನು ಬಿಟ್ಟಿದ್ದು ಯಾಕೆ ಅಂತೇ ಗೊತ್ತೇ?? ಬುಲ್ಸ್ ಬಗ್ಗೆ ಮಾತನಾಡಿ ನಿನ್ನೆ ಹೇಳಿದ್ದೇನು ಗೊತ್ತೇ?? 2

ಇನ್ನು ಪ್ರೊ ಕಬಡ್ಡಿ ಲೀಗ್ ನ ಈ ಬಾರಿಯ ಸೀಸನ್ ನ ಓಪನಿಂಗ್ ಸೆರೆಮನೆ ನಡೆದಿರೋ ಸಂದರ್ಭದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಬಿಟ್ಟಿರುವ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಎಂಬುದಾಗಿ ನಿರೂಪಕಿ ಕೇಳಿದಾಗ ಪವನ್ ಶೆಹ್ರಾವತ್ ರವರು, ನಾನು ಕೂಡ ಪ್ರತಿ ಬಾರಿಯಂತೆ ಈ ಬಾರಿ ಕೂಡ ಬೆಂಗಳೂರು ಬುಲ್ಸ್ ತಂಡದಲ್ಲಿ ಆಟವಾಡಬೇಕು ಎಂಬುದಾಗಿ ಭಾವಿಸಿದ್ದೆ ಹಾಗೂ ತಂಡಕ್ಕೆ ಕೂಡ ನನ್ನನ್ನು ಖರೀದಿಸಿ ಎಂಬುದಾಗಿ ಸೂಚನೆ ನೀಡಿದ್ದೆ ಆದರೆ ತಮಿಳು ತಲೈವಾಸ್ ತಂಡ ನನ್ನನ್ನು ಖರೀದಿಸಿದೆ ಹೀಗಾಗಿ ನಿಯಮಗಳ ಪ್ರಕಾರ ನಾನು ಅಲ್ಲಿ ಆಡಲೇಬೇಕಾಗಿದೆ. ಹೇಗಿದ್ರೂ ಕೂಡ ಬೆಂಗಳೂರು ಬುಲ್ಸ್ ತಂಡದ ಅಭಿಮಾನಿಗಳಿಗೆ ಎಷ್ಟು ವರ್ಷ ನನ್ನನ್ನು ಸಪೋರ್ಟ್ ಮಾಡಿದ್ದಕ್ಕಾಗಿ ಧನ್ಯವಾದಗಳು ಹಾಗೂ ತಮಿಳು ತಲೈವಾಸ್ ತಂಡದಲ್ಲಿ ಕೂಡ ನನ್ನನ್ನು ಸಪೋರ್ಟ್ ಮಾಡಿ ಎಂಬುದಾಗಿ ಕೇಳಿಕೊಂಡಿದ್ದಾರೆ.

Comments are closed.