ಸಂಪತ್ತು ಹುಡುಕಿಕೊಂಡು ಬರಬೇಕು ಎಂದರೆ, ದೀಪಾವಳಿ ವರೆಗೂ ತುಳಸಿ ಗಿಡಕ್ಕೆ ಈ ಚಿಕ್ಕ ಕೆಲಸ ಮಾಡಿ ಸಾಕು.

ನಮಸ್ಕಾರ ಸ್ನೇಹಿತರೇ ಕಾರ್ತಿಕ ಮಾಸದಲ್ಲಿ ನಾವು ದೀಪಾವಳಿ ಹಬ್ಬವನ್ನು ಆಚರಿಸುತ್ತೇವೆ. ಇನ್ನೂ ಈ ಮಾಸದಲ್ಲಿ ವಿಶೇಷವಾಗಿ ನಾವು ಶ್ರೀ ಭಗವಾನ್ ಮಹಾವಿಷ್ಣು ಹಾಗೂ ಶ್ರೀ ಲಕ್ಷ್ಮಿ ದೇವಿಯನ್ನು ಪೂಜಿಸುತ್ತೇವೆ. ಈ ಮಾಸದಲ್ಲಿ ಮಹಾವಿಷ್ಣು ಹಾಗೂ ಮಹಾಲಕ್ಷ್ಮಿಯನ್ನು ಪೂಜಿಸುವ ಕಾರಣದಿಂದ ನಾವು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇವರ ಕೃಪೆಗೆ ಪಾತ್ರರಾಗಬಹುದಾಗಿದೆ. ಇನ್ನು ಈ ಕಾರ್ತಿಕ ಮಾಸದಲ್ಲಿ ಪವಿತ್ರ ತುಳಸಿ ಗಿಡವನ್ನು ಕೆಲವೊಂದು ವಿಧದಲ್ಲಿ ಪೂಜಿಸಿದರೆ ತಾಯಿ ಲಕ್ಷ್ಮಿಯ ಕೃಪೆಗೆ ಪಾತ್ರರಾಗುತ್ತಾರೆ ಎಂಬುದಾಗಿ ತಿಳಿದು. ಹಾಗಿದ್ದರೆ ಆ ವಿಧಾನಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ತುಳಸಿ ಗಿಡಕ್ಕೆ ಜಲಾಭಿಷೇಕ ಮಾಡಬೇಕು. ಕಾರ್ತಿಕ ಮಾಸದಲ್ಲಿ ಒಂದು ದಿನ ತಪ್ಪದೇ ನಿಯಮಿತವಾಗಿ ಜಲಾಭಿಷೇಕ ಮಾಡುವುದರಿಂದ ಮಹಾಲಕ್ಷ್ಮಿ ಹಾಗೂ ಮಹಾ ವಿಷ್ಣುವಿನ ಕೃಪೆಗೆ ಪಾತ್ರರಾಗಬಹುದಾಗಿದೆ. ಇನ್ನು ಇದಕ್ಕೂ ಮುನ್ನ ಸ್ನಾನ ಮಾಡಿ ಶುದ್ದಿಯಾಗಿ ಸೂರ್ಯನಿಗೆ ಅರ್ಗ್ಯವನ್ನು ಅರ್ಪಿಸಿ ಇಷ್ಟ ದೇವನನ್ನು ಪೂಜಿಸಿದ ನಂತರ ತುಳಸಿ ಗಿಡಕ್ಕೆ ನೀರನ್ನು ಹಾಕಬೇಕು. ಇನ್ನು ಈ ಕಾರ್ತಿಕ ಮಾಸದಲ್ಲಿ ತುಳಸಿ ಗಿಡಕ್ಕೆ ಕುಂಕುಮ ಹಾಗೂ ಅರಿಶಿನವನ್ನು ಅರ್ಪಿಸಿ ತುಳಸಿ ಗಿಡದ ಸುತ್ತ ಏಳು ಪ್ರದಕ್ಷಿಣೆಯನ್ನು ಹಾಕುವ ಮೂಲಕ ತುಳಸಿ ಮಾತೆಯ ಕೃಪೆಗೂ ಕೂಡ ಪಾತ್ರರಾಗಬಹುದಾಗಿದೆ.

deepavali tulasi | ಸಂಪತ್ತು ಹುಡುಕಿಕೊಂಡು ಬರಬೇಕು ಎಂದರೆ, ದೀಪಾವಳಿ ವರೆಗೂ ತುಳಸಿ ಗಿಡಕ್ಕೆ ಈ ಚಿಕ್ಕ ಕೆಲಸ ಮಾಡಿ ಸಾಕು.
ಸಂಪತ್ತು ಹುಡುಕಿಕೊಂಡು ಬರಬೇಕು ಎಂದರೆ, ದೀಪಾವಳಿ ವರೆಗೂ ತುಳಸಿ ಗಿಡಕ್ಕೆ ಈ ಚಿಕ್ಕ ಕೆಲಸ ಮಾಡಿ ಸಾಕು. 2

ಇನ್ನು ಈ ಕಾರ್ತಿಕ ಮಾಸದ ಸಂದರ್ಭದಲ್ಲಿ ತುಳಸಿ ಮಾತೆಯ ಮಹಾತ್ಮೆಯನ್ನು ಸಾರುವಂತಹ ಕಥೆಯನ್ನು ಓದುವುದು ಮತ್ತು ತುಳಸಿ ಮಾತೆಯ ಮಹತ್ವವನ್ನು ಸಾರುವಂತಹ ಮಂತ್ರಗಳ ಪಠಣೆ ಮಾಡುವುದು ಆಕೆಯ ಆಶೀರ್ವಾದ ಪಡೆಯಲು ನಿಮ್ಮನ್ನು ಇನ್ನಷ್ಟು ಅರ್ಹರನ್ನಾಗಿ ಮಾಡುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಕಷ್ಟ ಅಥವಾ ನಿಮ್ಮ ಪ್ರಾರ್ಥನೆಗಳನ್ನು ತುಳಸಿ ಮಾತೆಯ ಬಳಿ ಹೇಳಿಕೊಂಡರೆ ಆಕೆ ನೇರವಾಗಿ ನಿಮ್ಮ ಎಲ್ಲಾ ಕಷ್ಟ ಹಾಗೂ ಸಂಕಷ್ಟಗಳನ್ನು ಪರಿಹಾರ ಮಾಡಿ ನಿಮ್ಮ ಮೇಲೆ ತನ್ನ ಕರುಣೆಯ ಅನುಗ್ರಹವನ್ನು ದಯಪಾಲಿಸುತ್ತಾಳೆ ಎಂಬ ನಂಬಿಕೆ ಇದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಬಹುದಾಗಿದೆ.

Comments are closed.