ವಿವಾದದಿಂದ ಹೆಚ್ಚು ಸುದ್ದಿಯಲ್ಲಿದ್ದ ಪವಿತ್ರ ರವರು ಕೆಲವೇ ದಿನಗಳ ಬಳಿಕ ಏರಿಸಿಕೊಂಡಿರುವ ಸಂಭಾವನೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ವರ್ಷ ಅತ್ಯಂತ ಚರ್ಚೆಗೆ ಒಳಗಾದ ಸುದ್ದಿಯಲ್ಲಿ ತೆಲುಗು ನಟ ನರೇಶ್ ಹಾಗೂ ಕನ್ನಡ ಮೂಲದ ನಟಿ ಆಗಿರುವ ಪವಿತ್ರ ಲೋಕೇಶ್ ರವರ ವಿಚಾರವೂ ಕೂಡ ಒಂದಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಎಲ್ಲದಕ್ಕಿಂತ ಪ್ರಮುಖವಾಗಿ ಒಂದು ಕಾಲದಲ್ಲಿ ನಟಿ ಪವಿತ್ರ ಲೋಕೇಶ್ ಅವರ ಮೇಲೆ ಎಲ್ಲರಿಗೂ ಕೂಡ ಗೌರವ ಭಾವನೆ ಇತ್ತು ಆದರೆ ಈ ವಿಚಾರ ಕೇಳಿ ಬಂದ ನಂತರ ಅದರಲ್ಲೂ ಕೂಡ ನರೇಶ್ ರವರ ಜೊತೆಗೆ ಮೈಸೂರು ಹೋಟೆಲ್ ನಲ್ಲಿ ಕಾಣಿಸಿಕೊಂಡ ನಂತರ ಅವರ ಕುರಿತಂತೆ ಜನರ ದೃಷ್ಟಿಕೋನ ಎನ್ನುವುದು ಬದಲಾಗಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ಪವಿತ್ರ ಲೋಕೇಶ್ ರವರ ಬೇಡಿಕೆ ಕೂಡ ಕೊಂಚಮಟ್ಟಿಗೆ ಕಡಿಮೆಯಾಗುತ್ತಿದೆ ಎಂಬುದಾಗಿ ಕೇಳಿ ಬರುತ್ತಿದೆ ಇದು ಎಷ್ಟರ ಮಟ್ಟಿಗೆ ನಿಜ ಎನ್ನುವುದು ತಿಳಿದಿಲ್ಲ. ಆದರೆ ಪವಿತ್ರ ಲೋಕೇಶ್ ರವರು ಈ ಸಂದರ್ಭದಲ್ಲಿಯೂ ಕೂಡ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಅವರ ಸಿನಿಮಾ ಕರಿಯರ್ ಗೆ ನರೇಶ್ ರವರು ಕೂಡ ತೆರೆಮರೆಯಲ್ಲಿ ಸಪೋರ್ಟ್ ಮಾಡುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

pavithra 6 | ವಿವಾದದಿಂದ ಹೆಚ್ಚು ಸುದ್ದಿಯಲ್ಲಿದ್ದ ಪವಿತ್ರ ರವರು ಕೆಲವೇ ದಿನಗಳ ಬಳಿಕ ಏರಿಸಿಕೊಂಡಿರುವ ಸಂಭಾವನೆ ಎಷ್ಟು ಗೊತ್ತೇ??
ವಿವಾದದಿಂದ ಹೆಚ್ಚು ಸುದ್ದಿಯಲ್ಲಿದ್ದ ಪವಿತ್ರ ರವರು ಕೆಲವೇ ದಿನಗಳ ಬಳಿಕ ಏರಿಸಿಕೊಂಡಿರುವ ಸಂಭಾವನೆ ಎಷ್ಟು ಗೊತ್ತೇ?? 2

ಕೇವಲ ಕನ್ನಡದಲ್ಲಿ ಮಾತ್ರವಲ್ಲದ ದಕ್ಷಿಣ ಭಾರತ ಚಿತ್ರರಂಗದ ಕೆಲವು ಭಾಷೆಗಳಲ್ಲಿ ಕೂಡ ಪೋಷಕ ನಟಿಯಾಗಿ ಪವಿತ್ರ ಲೋಕೇಶ್ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಪ್ರತಿ ಸಿನಿಮಾಗೆ 60 ಸಾವಿರ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಿದ್ದರು ಆದರೆ ಸದ್ಯದ ಮಟ್ಟಿಗೆ ಅವರು ಪ್ರತಿ ಸಿನಿಮಾಗೆ ಒಂದು ಲಕ್ಷ ರೂಪಾಯಿ ಸಂಭಾವನೆಯನ್ನು ಏರಿಸಿಕೊಳ್ಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಇದು ಮುಂದಿನ ದಿನಗಳಲ್ಲಿ ಅವರಿಗೆ ವರ್ಕೌಟ್ ಆಗುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.