ತೆಲುಗಿನಲ್ಲಿ ಟಾಪ್ ನಟಿಯಾಗಿ ಮೆರೆಯುತ್ತಿರುವ ಪೂಜಾ ಹೆಗ್ಡೆ ಕಾಂತಾರ ನೋಡಿ ಹೇಳಿದ್ದೇನು ಗೊತ್ತೇ?? ಮಂಗಳೂರಿನ ಹುಡುಗಿಯಾದ್ರು ಹೀಗೆ ಹೇಳಿದ್ದೆ ಬೇರೆ.
ಕಾಂತಾರ ಈಗಾಗಲೇ ದೊಡ್ಡ ಮಟ್ಟದ ಯಶಸ್ಸು ಗಳಿಸಿದೆ. ಬಿಡುಗಡೆಗೊಂಡ ಎಲ್ಲಾ ಐದು ಭಾಷೆಗಳಲ್ಲಿ ಜನರು ಚಿತ್ರವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಕೇವಲ ಸಿನಿ ಪ್ರೇಮಿಗಳು ಮಾತ್ರವಲ್ಲದೆ ದೊಡ್ಡ ದೊಡ್ಡ ಸ್ಟಾರ್ ನಟರು, ನಿರ್ದೇಶಕರು ಸಿನಿಮಾವನ್ನು ಹೊಗಳಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡದ ಕಥೆ ಕಾಂತಾರವು ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎಲ್ಲಾ ಭಾಷೆಗಳಲ್ಲೂ ಎಲ್ಲಾ ಮನಸ್ಥಿತಿಯ ಜನರನ್ನು ಮನಸೂರೆ ಗೊಳ್ಳುತ್ತಿದೆ. ಕಳೆದ ಸೆಪ್ಟೆಂಬರ್ 30ರಂದು ಬಿಡುಗಡೆಗೊಂಡ ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರಕ್ಕೆ ಇಂದಿಗೂ ಕೂಡ ಹೌಸ್ ಫುಲ್ ಪ್ರದರ್ಶನ ಸಿಗುತ್ತಿದೆ. ಎಲ್ಲಾ ಜನರು ಚಿತ್ರವನ್ನು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ.
ದೊಡ್ಡ ದೊಡ್ಡ ಸ್ಟಾರ್ ನಟರು ಕೂಡ ಈ ಚಿತ್ರದ ಬಗ್ಗೆ ಇನ್ಸ್ಟಾಗ್ರಾಮ್, ಟ್ವಿಟರ್ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ನೋಡಿ ಪ್ರಶಂಸೆಯ ಬರಹಗಳನ್ನು ಬರೆದುಕೊಂಡಿದ್ದಾರೆ. ತೆಲುಗು ಅವತರಣಿಕೆ ಕಾಂತಾರ ಚಿತ್ರವನ್ನು ನೋಡಿ ನಟಿ ಪೂಜಾ ಹೆಗ್ಡೆ ತಮ್ಮ instagram ಖಾತೆಯಲ್ಲಿ ಚಿತ್ರವನ್ನು ಮೆಚ್ಚಿ ಪೋಸ್ಟ್ ಒಂದು ಮಾಡಿದ್ದಾರೆ. “ನಿಮಗೆ ಏನು ಗೊತ್ತು ಅದನ್ನು ಬರೆಯಿರಿ. ನಿಮ್ಮ ಹೃದಯದಿಂದ ನೀವು ಪ್ರೀತಿಸುವ ಹೃದಯಕ್ಕೆ ಕಥೆ ಹೇಳಿ. ಚಿತ್ರದ ಕೊನೆಯ 20 ನಿಮಿಷ ಅದ್ಬುತವಾಗಿದೆ. ನಾನಂತೂ ಆ ದೃಶ್ಯವನ್ನು ನೋಡುವಾಗ ಚಕಿತಳಾದೆ. ರೋಮಾಂಚನಗೊಂಡೆ. ರಿಷಭ್ ನಟನೆ ನನ್ನನ್ನು ಮೂಕ ವಿಸ್ಮಯವನ್ನಾಗಿಸಿತ್ತು. ರಿಷಭ್ ಅವರೇ ಈ ಚಿತ್ರ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಅದಕ್ಕಾಗಿ ನಿಮಗೆ ಅಭಿನಂದನೆಗಳು” ಎಂದು ಅವರು ಮೆಚ್ಚಿಕೊಂಡಿದ್ದಾರೆ.
“ನನಗೆ ನನ್ನ ಬಾಲ್ಯ ಮತ್ತೆ ನೆನಪಾಯಿತು. ಕೋಲಾ, ಭೂತ, ದೈವ ಇವುಗಳೆಲ್ಲ ಮತ್ತೆ ನನ್ನನ್ನು ನನ್ನ ಬಾಲ್ಯಕ್ಕೆ ಕರೆದುಕೊಂಡು ಹೋಯಿತು” ಎಂದು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನಟಿ ಪೂಜಾ ಹೆಗ್ಡೆ ಉಡುಪಿಯ ಕಾರ್ಕಳ ಮೂಲದವರು. ಮಹಾರಾಷ್ಟ್ರದಲ್ಲಿಯೇ ಹುಟ್ಟಿ ಬೆಳೆದರು ಅವರ ತವರೂರಾದ ಉಡುಪಿಗೆ ಸಾಕಷ್ಟು ಬಾರಿ ಬರುತ್ತಿರುತ್ತಾರೆ. ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುತ್ತಾರೆ. ಇದೀಗ ಅವರು ಮತ್ತೆ ತನ್ನ ಬಾಲ್ಯ, ತನ್ನ ತವರು ನೆನಪಾಯಿತು ಎಂದು ಬರೆದುಕೊಂಡಿದ್ದಾರೆ. ಕಾಂತರಾ ಈಗಾಗಲೇ ನೂರು ಕೋಟಿ ಕಲೆಕ್ಷನ್ ಮಾಡಿದೆ. ಐಎಂಡಿಬಿ ಯಲ್ಲಿ 9.3 ರೇಟಿಂಗ್ ಪಡೆದುಕೊಂಡಿರುವ ಚಿತ್ರವು ಬುಕ್ ಮೈ ಶೋನಲ್ಲಿ ಬರೋಬ್ಬರಿ 9.9 ರೇಟಿಂಗ್ ಪಡೆದುಕೊಂಡಿದೆ.
Thank you, @hegdepooja.#Kantara @shetty_rishab @VKiragandur @hombalefilms @gowda_sapthami @HombaleGroup @AJANEESHB #ArvindKashyap @actorkishore @KantaraFilm pic.twitter.com/qIhaOsvOzE
— Kantara – A Legend (@KantaraFilm) October 24, 2022
Comments are closed.