ರಿಷಬ್ ಶೆಟ್ಟಿ ದೈವದ ಕಡೆಯಿಂದಾನೆ ಸಿಕ್ಕಿತು ಸೂಚನೆ: ದೈವ ಮೆಚ್ಚಿದ ಕಾಂತಾರ. ದೈವ ಹೇಳಿದ್ದನು ಕೇಳಿದರೆ ಶಾಕ್ ಆಗಿ ಬಿಡ್ತೀರಾ.

ಕಾಂತಾರ ಸಿನಿಮಾ ಇದೀಗ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡವೂ ಸೇರಿದಂತೆ ಬಹುತೇಕ ಕಡೆ ಬಾಕ್ಸ್ ಆಫೀಸ್ ಕಲೆಕ್ಷನ್ ಜೋರಾಗಿದೆ. ಕೇವಲ ಸ್ಯಾಂಡಲ್ ವುಡ್ ಗೆ ಮಾತ್ರ ಸೀಮಿತ ಆಗಿದ್ದ ರಿಷಬ್, ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬದಲಾಗಿದ್ದಾರೆ. ಕಾಂತಾರ ಚಿತ್ರ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದೆ. ಕನ್ನಡ ನಾಡಿನ ಕಲೆಯನ್ನು ಬೆಳ್ಳಿ ಪರದೆಯ ಮೇಲೆ ತರುವಲ್ಲಿ ಚಿತ್ರತಂಡ ಗೆದ್ದಿದೆ. ಇಂತಹ ಚಿತ್ರಗಳಿಗೂ ಜನರಿದ್ದಾರೆ ಎಂಬುದನ್ನು ಕಾಂತಾರ ಸಾಬೀತುಪಡಿಸಿದೆ. ಚಿತ್ರದ ಕೊನೆಯ 20 ನಿಮಿಷದ ಕ್ಲೈಮ್ಯಾಕ್ಸ್ ದೃಶ್ಯಾವಳಿ ಚಿತ್ರ ನೋಡಿದ ನಂತರವೂ ವೀಕ್ಷಕರ ತಲೆಯಲ್ಲಿ ಗಿರ್ ಎನ್ನುವಂತೆ ಕುಳಿತುಬಿಡುತ್ತದೆ. ಅಷ್ಟರಮಟ್ಟಿಗೆ ದೈವವನ್ನು ಆವಾಹಿಸಿಕೊಂಡವರಂತೆ ರಿಷಭ್ ಅಭಿನಯಿಸಿದ್ದಾರೆ.

ಇದೆಲ್ಲದರ ನಡುವೆ ನಿಜವಾಗಲೂ ಶೂಟಿಂಗ್ ವೇಳೆ ಅವರ ದೇಹಕ್ಕೆ ದೈವ ಆವಾಹಿಸಿ ಅವರು ಕುಸಿದು ಬಿದ್ದಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗೆ ಜನರಿಗೆ ಅನಿಸಲು ಮುಖ್ಯ ಕಾರಣ ರಿಷಬ್ ನಿಜವಾಗಿಯೂ ದೈವ ಬಂದಂತೆ ಚಿತ್ರದಲ್ಲಿ ಕಾಣುತ್ತಾರೆ. ನಿಜವೋ ನಟನೆಯ ತಿಳಿಯುವುದೇ ಇಲ್ಲ. ಹೀಗಾಗಿ ಅವರಿಗೆ ನಿಜವಾಗಿಯೂ ದೈವ ಆವಾಹನೆ ಆಗಿತ್ತ? ಅವರು ಚಿತ್ರೀಕರಣದ ಮೇಲೆ ಕುಸಿದು ಬಿದ್ದಿದ್ದರೆ? ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಚಿತ್ರದ ಚಿತ್ರೀಕರಣಕ್ಕೂ ಮೊದಲೇ ರಿಷಬ್ ಶೆಟ್ಟಿ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರನ್ನು ಅವರ ದರ್ಶನ ಮಾಡಿದ್ದರು. ಈ ಸಮಯದಲ್ಲಿ ಇಂತಹದೊಂದು ಚಿತ್ರ ಮಾಡುತ್ತಿರುವುದಾಗಿ ಹೇಳಿ ಸಲಹೆ ಕೇಳಿದರು, ಆಗ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಆಶೀರ್ವದಿಸಿ ಕಳುಹಿಸಿದ್ದರಂತೆ.

rishab daiva | ರಿಷಬ್ ಶೆಟ್ಟಿ ದೈವದ ಕಡೆಯಿಂದಾನೆ ಸಿಕ್ಕಿತು ಸೂಚನೆ: ದೈವ ಮೆಚ್ಚಿದ ಕಾಂತಾರ. ದೈವ ಹೇಳಿದ್ದನು ಕೇಳಿದರೆ ಶಾಕ್ ಆಗಿ ಬಿಡ್ತೀರಾ.
ರಿಷಬ್ ಶೆಟ್ಟಿ ದೈವದ ಕಡೆಯಿಂದಾನೆ ಸಿಕ್ಕಿತು ಸೂಚನೆ: ದೈವ ಮೆಚ್ಚಿದ ಕಾಂತಾರ. ದೈವ ಹೇಳಿದ್ದನು ಕೇಳಿದರೆ ಶಾಕ್ ಆಗಿ ಬಿಡ್ತೀರಾ. 2

ಇಂತಹದೊಂದು ಚಿತ್ರ ಮಾಡುತ್ತಿರುವದಾಗಿ ರಿಷಭ್ ಅವರು ದೈವದ ಬಳಿಗೆ ತಿಳಿಸಿದಾಗ ದೈವವೂ ತನ್ನ ಮುಖದ ಮೇಲಿದ್ದ ಬಣ್ಣವನ್ನು ರಿಷಭ್ ಅವರ ಮುಖದ ಮೇಲೆ ಹಾಕಿ ಆಶೀರ್ವಾದ ಮಾಡಿದ್ದರಂತೆ. ರಿಷಭ್ ಅವರ ಕೊನೆಯ 20 ನಿಮಿಷದ ನಟನೆಯನ್ನು ನೋಡಿದ ದೈವ ನರ್ತಕರು ಅದು ನಟನೆಯಲ್ಲ, ನಿಜವಾಗಿಯೂ ಅವರ ಮೈ ಮೇಲೆ ದೈವ ಬಂದಿದೆ. ನಟನೆಯಾದರೆ ಯಾರು ಅಷ್ಟು ಸುದೀರ್ಘವಾಗಿ ಯಾವ ಅಂತರವು ಇಲ್ಲದೆ ಹಾಗೆ ನಟಿಸಲಾರರು. ನಿಜವಾಗಿಯೂ ರಿಷಬ್ ಅವರ ಮೈ ಮೇಲೆ ದೈವ ಆವಾಹನೆ ಆಗಿತ್ತು ಎಂದು ಹೇಳಿದ್ದಾರೆ. ಕಾಂತಾರ ಚಿತ್ರವು ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಚಿತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ.

Comments are closed.