ತೆಲುಗಿನ ರಾಣಿಯಂತೆ ಮೆರೆಯುತ್ತಿದ್ದ ಪೂಜಾ ಹೆಗ್ಡೆ ರವರಿಗೆ ಯಾವ ಸ್ಥಿತಿ ಬಂದಿದೆ ಗೊತ್ತೇ?? ಈಗ್ಯಾಕಾಯ್ತು ಎಂದು ಕಣ್ಣೀರು ಹಾಕಿದ ಫ್ಯಾನ್ಸ್
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಂಗಳೂರು ಮೂಲದ ನಟಿ ಆಗಿರುವ ಪೂಜಾ ಹೆಗ್ಡೆ ಮೊಹೆಂಜೋದಾರೋ ಸಿನಿಮಾದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಡುತ್ತಾರೆ. ಆದರೆ ಅವರು ದೊಡ್ಡಮಟ್ಟದಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದು ತೆಲುಗು ಚಿತ್ರರಂಗದಲ್ಲಿ ಎಂದರೆ ತಪ್ಪಾಗಲಾರದು.ತೆಲುಗು ಚಿತ್ರರಂಗಕ್ಕೆ ಪೂಜಾ ನಾಗಚೈತನ್ಯ ಅಕ್ಕಿನೇನಿ ನಟನೆಯ ಓಕ ಲೈಲಾ ಪಾರೋ ಸಿನಿಮಾದ ಮೂಲಕ ಎಂಟ್ರಿ ನೀಡುತ್ತಾರೆ.
ಒಮ್ಮೆ ಕಾಲಿಟ್ಟ ಮೇಲೆ ಪೂಜಾ ಹಿಂದಿರುಗಿ ನೋಡಿದ್ದೇ ಇಲ್ಲ. ತೆಲುಗು ಚಿತ್ರರಂಗದಲ್ಲಿ ಒಂದಾದಮೇಲೊಂದರಂತೆ ಪೂಜಾ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಲೇ ಹೋಗುತ್ತಾರೆ. ಅದರಲ್ಲೂ ಅಲ್ಲು ಅರ್ಜುನ ನಟನೆಯ ಅಲಾ ವೈಕುಂಠಪುರಮುಲೋ ಸಿನಿಮಾ ಅವರ ಕರಿಯರ್ ನ ದೊಡ್ಡ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು ಎಂದು ಹೇಳಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಪೂಜಾ ಅವರ ಅದೃಷ್ಟವೇ ಸರಿ ಇಲ್ಲ ಎಂದರೆ ತಪ್ಪಾಗಲಾರದು ಯಾಕೆಂದರೆ ಅವರ ನಟನೆಯ ರೆಬೆಲ್ ಸ್ಟಾರ್ ನಾಯಕನಾಗಿ ನಟಿಸಿರುವ ರಾಧೇಶ್ಯಾಮ್ ಸಿನಿಮಾ ನೆಲಕಚ್ಚಿದ್ದು ನಿಮಗೆಲ್ಲ ತಿಳಿದಿದೆ. ಅದಾದನಂತರ ತಲಪತಿ ವಿಜಯ್ ನಟನೆಯ ಬೀಸ್ಟ್ ಸಿನಿಮಾದಲ್ಲಿ ಕೂಡ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದರೂ ಆದರೆ ಆ ಸಿನಿಮಾವು ಕೂಡ ಕೆಜಿಎಫ್ ಚಾಪ್ಟರ್ 2 ಚಿತ್ರದ ಎದುರುಗಡೆ ಸೋತು ನೆಲಕಚ್ಚಿದೆ.
ಸದ್ಯಕ್ಕೆ ಪವನ್ ಕಲ್ಯಾಣ್ ನಟನೆಯ ಸಿನಿಮಾದಲ್ಲಿ ನಟಿಸಲು ಪೂಜಾ ಸಿದ್ಧತೆಯನ್ನು ನಡೆಸಿಕೊಳ್ಳುತ್ತಿದ್ದಾರೆ. ಅಂದರೆ ಈ ಸಿನಿಮಾಗಾಗಿ ಪೂರ್ಣ ಆಗಸ್ಟ್ ತಿಂಗಳನ್ನು ಮೀಸಲಿಟ್ಟಿದ್ದಾರೆ. ಅಂದರೆ ಆಚಾರ್ಯ ಸಿನಿಮಾದಿಂದ ಅಲ್ಲಿಯವರೆಗೆ ಮೂರು ತಿಂಗಳು ಖಾಲಿಯಾಗಿ ಯಾವುದೇ ಸಿನಿಮಾ ಗಳಿಲ್ಲದೆ ಪೂಜಾ ಹೆಗ್ಡೆ ಕುಳಿತುಕೊಳ್ಳಲಿದ್ದಾರೆ ಸದ್ಯಕ್ಕೆ ಪೂಜಾ ಲಂಡನ್ ಪ್ರವಾಸದಲ್ಲಿದ್ದಾರೆ ಎಂಬುದು ಅವರ ಫೋಟೋಗಳ ಮೂಲಕ ತಿಳಿದುಬಂದಿದೆ. ಟಾಪ್ ನಟಿಯೊಬ್ಬರು ಮೂರು ತಿಂಗಳು ಯಾವುದೇ ಸಿನಿಮಾ ಅಥವಾ ಗಳಿಕೆ ಇಲ್ಲದೆ ಸುಮ್ಮನೆ ಕುಳಿತಿರುವುದು ಅವರ ಅಭಿಮಾನಿಗಳಿಗೆ ನಿಜಕ್ಕೂ ಬೇಸರವನ್ನು ತರಿಸಿದೆ ಎಂದರೆ ತಪ್ಪಾಗಲಾರದು.
Comments are closed.