ಆ ಸ್ಟಾರ್ ನಟನ ಸಿನಿಮಾ ಗೆಲ್ಲಿಸಲು ಪ್ರಭಾಕರ್ ಅವರೇ ಬೇಕಿತ್ತು. ಟೈಗರ್ ಪ್ರಭಾಕರ್ ಇವರಿಗೆ ಲಕ್ಕಿ ವಿಲ್ಲನ್. ಯಾರು ಆ ಸ್ಟಾರ್ ನಟ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರಂಗದಲ್ಲಿ ಅದೆಷ್ಟೋ ಮೇರು ನಟರು ಆಗಿಹೋಗಿದ್ದಾರೆ. ಕೇವಲ ನಾಯಕನಟನಾಗಿ ಅಭಿನಯಿಸಿದ ವರನ ಮಾತ್ರವಲ್ಲ ಅದೆಷ್ಟೋ ಖಳನಾಯಕನ ಪಾತ್ರಗಳನ್ನು ಕೂಡ ಈಗ ಕನ್ನಡ ಚಿತ್ರರಂಗ ನೆನಪಿಸಿಕೊಳ್ಳುತ್ತೆ. ವರ ನಟ ಡಾ. ರಾಜಕುಮಾರ್, ಡಾ.ವಿಷ್ಣುವರ್ಧನ್, ಶಂಕರ್ ನಾಗ್ ಸುನಿಲ್ ಮೊದಲಾದ ನಾಯಕನಟರು ಮಾತ್ರವಲ್ಲದೆ, ವಜ್ರಮುನಿ, ಎಂಪಿ ಶಂಕರ್, ಮುಸುರಿ ಕೃಷ್ಣಮೂರ್ತಿ, ಧೀರೇಂದ್ರ ಗೋಪಾಲ್ ಮೊದಲಾದ ಖಳನಾಯಕ ಪಾತ್ರಧಾರಿಗಳನ್ನು ಕೂಡ ನಾವು ಇಂದು ಮಿಸ್ ಮಾಡಿಕೊಳ್ಳುತ್ತಿದ್ದೇವೆ.

ಅಂದಹಾಗೆ ಒಂದು ಫುಲ್ ಪ್ಯಾಕೇಜ್ ನಂತಿದ್ದ, ನಟನೆ ನಿರ್ಮಾಣ ನಿರ್ದೇಶನ ಎಲ್ಲದಕ್ಕೂ ಸೈ ಎನಿಸಿಕೊಂಡಿದ್ದ ಏಕೈಕ ನಟ ಅಂದರೆ ಅದು ಪ್ರಭಾಕರ್ ಅವರು. ಇವರು ಬಹುಭಾಷಾ ನಟ ಕೂಡ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಹೀಗೆ ಎಲ್ಲಾ ಭಾಷೆಗಳನ್ನು ಎನಿಸಿಕೊಂಡವರು ಪ್ರಭಾಕರ್. ನಟ ಪ್ರಭಾಕರ್ ಅವರು ಕನ್ನಡದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡು, ಬರಬರುತ್ತ ನಾಯಕನಟನಾಗಿ ಕನ್ನಡ ಚಿತ್ರರಂಗಕ್ಕೆ ಯಶಸ್ವಿ ಚಿತ್ರಗಳನ್ನು ಕೊಟ್ಟ ಮಹಾನ್ ನಟ ಪ್ರಭಾಕರ್. ಇನ್ನು ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಚಿತ್ರರಂಗದಲ್ಲಿ ಪ್ರಭಾಕರ್ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಈ ಒಬ್ಬ ನಟನ ಚಿತ್ರದಲ್ಲಿ ಖಳನಾಯಕನಾಗಿ ಪ್ರಭಾಕರ್ ಇದ್ದೇ ಇರುತ್ತಿದ್ದರು.

ಹೌದು, ಕೆಲವು ಇನ ಮೆಗಾಸ್ಟಾರ್ ಚಿರಂಜೀವಿ ಅವರ ನಟನೆಯ ಯಾವುದೇ ಚಿತ್ರ ತೆರೆಕಾಣುತ್ತದೆ ಅಂತ ಆದರೆ ಆ ಚಿತ್ರದಲ್ಲಿ ಪ್ರಭಾಕರ್ ಅವರಿಗೆ ಒಂದು ಪಾತ್ರ ಫಿಕ್ಸ್. ನಟ ಪ್ರಭಾಕರ್ ಅವರು ಚಿರಂಜೀವಿ ಅವರಿಗೆ ಲಕ್ಕಿ ಚಾರ್ಮ್ ಎಂದು ಕರೆಸಿಕೊಂಡಿದ್ದರು. ಯಾಕಂದ್ರೆ ಚಿರಂಜೀವಿ ಅವರ ಎಲ್ಲಾ ಚಿತ್ರಗಳು ಗೆಲ್ಲುತ್ತಿರುವುದುಕ್ಕೆ ಅಲ್ಲಿ ಪ್ರಭಾಕರ್ ಕೂಡ ಕಾರಣ ಕಾರಣವಾಗಿದ್ದು ನಿಜ. ಯಾಕಂದ್ರೆ ಚಿರಂಜೀವಿ ಹಾಗೂ ಪ್ರಭಾಕರ್ ಅವರ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ತೆಲುಗು ಚಿತ್ರರಂಗದಲ್ಲಿ ಕನ್ನಡ ಪ್ರಭಾಕರ ಎಂದೇ ಖ್ಯಾತಿಯನ್ನು ಗಳಿಸಿದ್ದರು ಪ್ರಭಾಕರ್. ಹೀಗೆ ಒಬ್ಬ ಬಹುಭಾಷಾ ನಟನಾಗಿ ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಎನಿಸಿಕೊಂಡಿದ್ದ ಪ್ರಭಾಕರ್ ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ನಟನೆಯಲ್ಲಿ, ಅವರ ಚಿತ್ರಗಳಲ್ಲಿ ಅವರು ಸದಾ ಸದಾ ಕಾಲಕ್ಕೆ ಜೀವಂತ.

Comments are closed.