ಕೊನೆಗೂ ತೆರೆ ಹಿಂದೆ ನಡೆದ ವಿಚಾರವನ್ನು ಬಹಿರಂಗ ಪಡಿಸಿದ ಪ್ರಶಾಂತ್ ನೀಲ್, ಅನಂತ್ ನಾಗ್ ರವರ ಬದಲು ಪ್ರಕಾಶ ರಾಜ್ ಬಂದಿದ್ದೇಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ಚಿತ್ರವಾಗಿರುವ ಕೆಜಿಎಫ್ ಚಾಪ್ಟರ್ 2 ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ನಿರ್ಮಾಪಕರಿಗೆ ಹೇಳಿರುವಂತೆ ಕೆಜಿಎಫ್ ಚಾಪ್ಟರ್ 2 ಚಿತ್ರ ಬರೋಬ್ಬರಿ ಆರು ಸಾವಿರಕ್ಕೂ ಅಧಿಕ ಪರದೆಗಳ ಮೇಲೆ ಬಿಡುಗಡೆಯಾಗಲಿದೆ. ಇದು ನಿಜಕ್ಕೂ ಕೂಡ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅತ್ಯಧಿಕ ಹಾಗೂ ಇತ್ತೀಚಿನ ವರ್ಷಗಳಲ್ಲಿ ಕೂಡ ದೊಡ್ಡಮಟ್ಟದ ಬಿಡುಗಡೆ ಎಂದರೆ ತಪ್ಪಾಗಲಾರದು. ಕೆಜಿಎಫ್ ಚಾಪ್ಟರ್ 2 ಚಿತ್ರದ ಕ್ರಿಯೆಯ ಈಗಾಗಲೇ ಗಡಿದಾಟಿ ಭಾರತದ ಎಲ್ಲೆಡೆ ವ್ಯಾಪಿಸಿದೆ.

ಕೇವಲ ಕರ್ನಾಟಕ-ತಮಿಳುನಾಡು ತೆಲುಗು ರಾಜ್ಯಗಳು ಹಾಗೂ ಹಿಂದಿ ಪ್ರಾಂತಗಳಲ್ಲಿ ಮಾತ್ರವಲ್ಲದೆ ಅಮೆರಿಕದಂತಹ ವಿದೇಶಗಳಲ್ಲಿಯೂ ಕೂಡ ದಾಖಲೆ ಮಟ್ಟದ ಪ್ರದರ್ಶನಗಳು ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಾಗಿ ಸಿಕ್ಕಿದೆ. ವಿದೇಶಗಳಲ್ಲಿ ಯಾವ ಕನ್ನಡ ಚಿತ್ರಕ್ಕೆ ಕೂಡ ಸಿಗದಂತಹ ಓಪನಿಂಗ್ ಸಿಗುವಂತಹ ನಿರೀಕ್ಷೆ ಇದೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಟೀಸರ್ ಹಾಗೂ ಹಾಡುಗಳು ಸೇರಿದಂತೆ ಎಲ್ಲಾ ಕಂಟೆಂಟ್ ಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಚಿತ್ರದ ಕಲೆಕ್ಷನ್ ನಲ್ಲಿ ಕೂಡ ಇದು ದೊಡ್ಡ ಮಟ್ಟದ ಪಾಸಿಟಿವ್ ಪ್ರಭಾವವನ್ನು ಬೀರಲಿದೆ.

prashanth neel prakash raj ananth nag | ಕೊನೆಗೂ ತೆರೆ ಹಿಂದೆ ನಡೆದ ವಿಚಾರವನ್ನು ಬಹಿರಂಗ ಪಡಿಸಿದ ಪ್ರಶಾಂತ್ ನೀಲ್, ಅನಂತ್ ನಾಗ್ ರವರ ಬದಲು ಪ್ರಕಾಶ ರಾಜ್ ಬಂದಿದ್ದೇಕೆ ಗೊತ್ತೇ??
ಕೊನೆಗೂ ತೆರೆ ಹಿಂದೆ ನಡೆದ ವಿಚಾರವನ್ನು ಬಹಿರಂಗ ಪಡಿಸಿದ ಪ್ರಶಾಂತ್ ನೀಲ್, ಅನಂತ್ ನಾಗ್ ರವರ ಬದಲು ಪ್ರಕಾಶ ರಾಜ್ ಬಂದಿದ್ದೇಕೆ ಗೊತ್ತೇ?? 3

ಇನ್ನು ಚಿತ್ರದಲ್ಲಿ ಬಹುತಾರಾಗಣವೇ ಇದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಾಕಿಂಗ್ ಸ್ಟಾರ್ ಯಶ್ ಶ್ರೀನಿಧಿ ಶೆಟ್ಟಿ ಸಂಜಯ್ ದತ್ ರವೀನ ತಂಡನ್ ಅಚ್ಚುತ್ ಪ್ರಕಾಶ್ ರಾಜ್ ಮಾಳವಿಕಾ ಅವಿನಾಶ್ ನಾಗಾಭರಣ ಹೀಗೆ ಬಹುತೇಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ಈಗಾಗಲೇ ಬಹುತೇಕ ಎಲ್ಲಾ ಭಾಷೆಗಳಲ್ಲಿಯೂ ಚಿತ್ರದ ಜನಪ್ರಿಯತೆಯನ್ನು ವುದು ಆಕಾಶ ಮಟ್ಟವನ್ನು ಮುಟ್ಟಿದೆ ಎಂದರೆ ಖಂಡಿತವಾಗಿ ಅತಿಶಯೋಕ್ತಿಯಲ್ಲ.

ಇನ್ನು ಕೆಜಿಎಫ್ ಚಾಪ್ಟರ್ 2 ಪ್ರಾರಂಭವಾದ ದಿನದಿಂದಲೂ ಕೂಡ ಇಂದಿನವರೆಗೆ ಒಂದು ಅನುಮಾನ ಎಲ್ಲರನ್ನೂ ಕಾಡುತ್ತಿತ್ತು. ಯಾಕೆ ಅನಂತನಾಗ್ ರವರನ್ನು ಚಿತ್ರದಿಂದ ತೆಗೆದು ಪ್ರಕಾಶ್ ರಾಜ್ ರವರನ್ನು ಹಾಕಿದ್ದರು ಎನ್ನುವುದಾಗಿ. ಈ ಕುರಿತಂತೆ ಇತ್ತೀಚಿಗಷ್ಟೇ ಯಶ್ ಅವರನ್ನು ಕೇಳಿದಾಗ ಚಿತ್ರದ ನಿರ್ದೇಶಕರಾಗಿರುವ ಪ್ರಶಾಂತ್ ನೀಲ್ ಅವರನ್ನು ಕೇಳಿ ಎಂಬುದಾಗಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದ್ದರು. ನಿಜವಾಗಿ ಹೇಳಬೇಕೆಂದರೆ ಚಿತ್ರದ ಕಥೆ ಹಾಗೂ ಪಾತ್ರದ ಆಯ್ಕೆ ಪ್ರಶಾಂತ ನೀರವತೆ ಆಗಿರುವುದರಿಂದ ಆಗಿ ನ್ಯಾಯವಾಗಿ ಅವರೇ ಈ ಪ್ರಶ್ನೆಗೆ ಉತ್ತರವನ್ನು ನೀಡಬೇಕಾಗಿತ್ತು.

ಇತ್ತೀಚಿಗಷ್ಟೇ ಸಂದರ್ಶಕರು ಪ್ರಶಾಂತ್ ನೀಲ್ ಅವರನ್ನು ಇದೇ ಪ್ರಶ್ನೆ ಕುರಿತಂತೆ ಕೇಳಿದಾಗ ಅವರು ನೀಡಿದ ಉತ್ತರ ಹೀಗಿತ್ತು. ಹೌದು ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ನಟಿಸಿದೆ ಇರುವುದು ಅನಂತ್ ನಾಗ್ ರವರ ವೈಯಕ್ತಿಕ ಅಭಿಪ್ರಾಯವಾಗಿತ್ತು ಅದನ್ನು ನಾವು ಗೌರವಿಸಿದ್ದೇವೆ. ಹೀಗಾಗಿ ಈ ಪಾತ್ರಕ್ಕಾಗಿ ಪ್ರಕಾಶ ರಾಜ್ ಅವರನ್ನು ಕೇಳಿದಾಗ ಅವರು ಕೂಡಲೇ ಸಂತೋಷದಿಂದ ಒಪ್ಪಿ ನಟಿಸಲು ಒಪ್ಪಿಕೊಂಡಿದ್ದರು.

prashanth neel kgf | ಕೊನೆಗೂ ತೆರೆ ಹಿಂದೆ ನಡೆದ ವಿಚಾರವನ್ನು ಬಹಿರಂಗ ಪಡಿಸಿದ ಪ್ರಶಾಂತ್ ನೀಲ್, ಅನಂತ್ ನಾಗ್ ರವರ ಬದಲು ಪ್ರಕಾಶ ರಾಜ್ ಬಂದಿದ್ದೇಕೆ ಗೊತ್ತೇ??
ಕೊನೆಗೂ ತೆರೆ ಹಿಂದೆ ನಡೆದ ವಿಚಾರವನ್ನು ಬಹಿರಂಗ ಪಡಿಸಿದ ಪ್ರಶಾಂತ್ ನೀಲ್, ಅನಂತ್ ನಾಗ್ ರವರ ಬದಲು ಪ್ರಕಾಶ ರಾಜ್ ಬಂದಿದ್ದೇಕೆ ಗೊತ್ತೇ?? 4

ಅವರ ಬಳಿ ಕೇಳುವಾಗಲೂ ಕೂಡ ಅನಂತನಾಗ್ ರವರು ಸಿನಿಮಾದಿಂದ ಹೊರಹೋಗಿದ್ದರಿಂದಲೇ ಈ ಪಾತ್ರವನ್ನು ನಾವು ನಿಮಗೆ ನೀಡುತ್ತಿದ್ದೇವೆ ಎಂಬುದಾಗಿ ಹೇಳಿದ್ದೇವೆ. ಅದ್ಯಾವುದಕ್ಕೂ ಕೂಡ ಅವರು ತಲೆಕೆಡಿಸಿಕೊಳ್ಳದೆ ಪಾತ್ರದ ವಿವರಣೆ ಹಾಗೂ ಸಂಭಾಷಣೆಗಳನ್ನು ಕೇಳಿದ ನಂತರ ಅವರು ಪಾತ್ರವನ್ನು ಮಾಡಲು ಸಂತೋಷದಿಂದ ಒಪ್ಪಿಕೊಂಡರು. ಈ ಸಂದರ್ಭದಲ್ಲಿ ನಮ್ಮ ಕೋರಿಕೆಯನ್ನು ಒಪ್ಪಿಕೊಂಡು ನಮಗೆ ಬಹಳಷ್ಟು ದೊಡ್ಡಮಟ್ಟದ ಸಹಾಯವನ್ನು ಮಾಡಿದ್ದಾರೆ ಎಂಬುದಾಗಿ ಪ್ರಶಾಂತ್ ನೀಲ್ ರವರು ಪ್ರಕಾಶ್ ರಾಜ್ ರವರನ್ನು ಮನತುಂಬಿ ಹೊಗಳಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.