ಹನುಮ ಜಯಂತಿಯಂದು ನಿರ್ಮಾಣವಾಗುತ್ತದೆ ವಿಶೇಷ ಯೋಗ, ಶನಿಯ ವಕ್ರದೃಷ್ಟಿಯಿಂದ ಪಾರಾಗಲು ಹನುಮ ಜಯಂತಿಯ ದಿನದಂದು ಏನು ಮಾಡಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಂಜನಿ ದೇವಿ ಹಾಗೂ ವಾಯುಪುತ್ರನ ಮಗನಾಗಿರುವ ಆಂಜನೇಯನ ಹುಟ್ಟಿದ ದಿನವನ್ನು ಅಂದರೆ ಹನುಮಾನ್ ಜಯಂತಿಯನ್ನು ಇದೇ ಏಪ್ರಿಲ್ 16ರಂದು ಎಲ್ಲರೂ ಆಚರಿಸಲಿದ್ದಾರೆ. ಈ ಬಾರಿ ಶನಿವಾರದಂದು ಹನುಮಾನ್ ಜಯಂತಿಯನ್ನು ಆಚರಿಸುತ್ತಿದ್ದು ಇದು ಸಾಕಷ್ಟು ವಿಶೇಷವಾಗಿದ್ದು ಹಲವಾರು ವಿಶೇಷ ಯೋಗಗಳು ಕೂಡ ಮೂಡಿಬರಲಿವೆ ಎಂಬುದಾಗಿ ಕೇಳಿಬಂದಿದೆ. ಹಾಗಿದ್ದರೆ ಆ ವಿಶೇಷ ಯೋಗಗಳು ಏನು ಹಾಗೂ ಹನುಮಾನ್ ಜಯಂತಿ ಯಿಂದ ಏನೆಲ್ಲ ಕಷ್ಟಗಳು ಪರಿಹಾರವಾಗುತ್ತವೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

hanumaan shani deva 1 | ಹನುಮ ಜಯಂತಿಯಂದು ನಿರ್ಮಾಣವಾಗುತ್ತದೆ ವಿಶೇಷ ಯೋಗ, ಶನಿಯ ವಕ್ರದೃಷ್ಟಿಯಿಂದ ಪಾರಾಗಲು ಹನುಮ ಜಯಂತಿಯ ದಿನದಂದು ಏನು ಮಾಡಬೇಕು ಗೊತ್ತೇ??
ಹನುಮ ಜಯಂತಿಯಂದು ನಿರ್ಮಾಣವಾಗುತ್ತದೆ ವಿಶೇಷ ಯೋಗ, ಶನಿಯ ವಕ್ರದೃಷ್ಟಿಯಿಂದ ಪಾರಾಗಲು ಹನುಮ ಜಯಂತಿಯ ದಿನದಂದು ಏನು ಮಾಡಬೇಕು ಗೊತ್ತೇ?? 3

ಹನುಮ ಜಯಂತಿಯ ದಿನದಂದು ರವಿ ಹಾಗೂ ಹರ್ಷ ಯೋಗಗಳು ಏಪ್ರಿಲ್ 16ರ ಬೆಳಗ್ಗೆ 5.55 ರಿಂದ 8:40ಕ್ಕೆ ಇರಲಿದೆ. ಹರ್ಷ ಯೋಗ ರಾತ್ರಿ 2.45 ರಿಂದ ಆರಂಭವಾಗಿ ಏಪ್ರಿಲ್ 17 ರ ವರೆಗೆ ಇರಲಿದೆ. ಇನ್ನು ಶನಿದೋಷ ದಿಂದ ಬಳಲುತ್ತಿರುವವರಿಗೆ ಈ ಬಾರಿ ಹನುಮಜಯಂತಿ ಶುಭಕರವಾಗಿ ಪರಿಣಮಿಸಲಿದೆ ಎಂಬುದಾಗಿ ಉಲ್ಲೇಖವಿದೆ. ಶನಿದೇವರ ದಿನವಾಗಿರುವ ಶನಿವಾರದಿಂದ ಹನುಮಜಯಂತಿ ಕೂಡ ಇರುವುದರಿಂದಾಗಿ ಕೆಲವೊಂದು ಆಚರಣೆಗಳನ್ನು ಈ ದಿನದಂದು ಮಾಡಿದರೆ ಶನಿ ದೋಷದಿಂದ ಮುಕ್ತರಾಗಬಹುದು ಎನ್ನುವುದಾಗಿ ತಿಳಿದುಬಂದಿದೆ.

ಹನುಮ ಜಯಂತಿಯ ದಿನದಂದು ಶನಿದೇವನ ವಕ್ರದೃಷ್ಟಿಯಿಂದ ಪಾರಾಗಲು ಒಂದು ಚಿಟಿಕೆ ಕುಂಕುಮವನ್ನು ತುಪ್ಪದಲ್ಲಿ ಬೆರೆಸಿ ಹನುಮಂತ ದೇವನಿಗೆ ಹಚ್ಚಿದರೆ ಖಂಡಿತವಾಗಿ ಶನಿದೇವನ ವಕ್ರದೃಷ್ಟಿಯಿಂದ ಪಾರಾಗಲು ಅನುಗ್ರಹ ನೀಡುತ್ತಾನೆ. ಆಂಜನೇಯ ದೇವ ಸಂತುಷ್ಟನಾದರೆ ಖಂಡಿತವಾಗಿ ನೀವು ಶನಿದೇವನ ವಕ್ರದೃಷ್ಟಿಯಿಂದ ಪಾರಾಗುತ್ತೀರಿ. ಯಾಕೆಂದರೆ ಸಾಮಾನ್ಯವಾಗಿ ಶನಿದೇವ ಆಂಜನೇಯ ದೇವರ ಭಕ್ತರ ಮೇಲೆ ವಕ್ರದೃಷ್ಟಿ ಬೀರುವುದು ಕಡಿಮೆಯೇ.

ಚಿಟಿಕೆ ಸಿಂಧೂರವನ್ನು ತುಪ್ಪದಲ್ಲಿ ಬೆರೆಸಿ ಸ್ವಸ್ತಿಕ್ ಚಿನ್ಹೆಯನ್ನು ಮಾಡಿ ಆಂಜನೇಯ ದೇವನ ಎದೆಯ ಬಳಿ ತಾಗಿಸಿ ನಿಮ್ಮ ಬಳಿ ಅದನ್ನು ಸುರಕ್ಷಿತವಾಗಿ ಜೋಪಾನವಾಗಿ ಇಟ್ಟುಕೊಂಡರೆ ಅತಿಶೀಘ್ರದಲ್ಲೇ ಹಣದ ಪ್ರವಾಹವೆ ನಿಮಗೆ ಬರಲಿದೆ. ಹಾರ್ದಿಕವಾಗಿ ಇಷ್ಟೊಂದು ದಿನಗಳಲ್ಲಿ ನಷ್ಟವನ್ನು ಅನುಭವಿಸಿರುವುದು ಕೂಡ ಕಡಿಮೆಯಾಗುತ್ತದೆ.

ಇನ್ನು ಸಿಂಧೂರವನ್ನು ಸಾಸಿವೆ ಎಣ್ಣೆಯ ಜೊತೆಗೆ ಬೆರೆಸಿ ಆಂಜನೇಯನ ಪ್ರತಿಮೆಗೆ ಹಚ್ಚಿ ನಂತರ ಉಳಿದ ಸಿಂಧೂರವನ್ನು ಮನೆಯ ಮುಖ್ಯ ಬಾಗಿಲು ಸೇರಿದಂತೆ ಉಳಿದ ಎಲ್ಲಾ ಬಾಗಿಲುಗಳು ಕೂಡ ಹಚ್ಚಿದರೆ, ಖಂಡಿತವಾಗಿ ಬಾಹ್ಯ ದುಷ್ಟಶಕ್ತಿಗಳಿಂದ ನಿಮ್ಮ ಮನೆಯನ್ನು ಹಾಗೂ ನಿಮ್ಮ ಕುಟುಂಬಸ್ಥರನ್ನು ಕಾಪಾಡಬಹುದಾಗಿದೆ. ಯಾವುದೇ ದುಷ್ಟಶಕ್ತಿಗಳು ಕೂಡ ನಿಮ್ಮ ಜೀವನದಲ್ಲಿ ಕಾಲಿಡುವುದಕ್ಕೆ ಧೈರ್ಯ ಪಡುವುದಿಲ್ಲ. ಕೇವಲ ಇಷ್ಟೇ ಮಾತ್ರವಲ್ಲದೆ ನಿಮ್ಮ ಮನೆ ಸದಾಕಾಲ ಸಮೃದ್ಧಿಯಿಂದ ತುಂಬಿ ತುಳುಕಾಡಿ ಎಲ್ಲರೂ ಕೂಡ ಸಂತೋಷದಲ್ಲಿ ಇರುತ್ತೀರಿ.

ಹಲವಾರು ವರ್ಷಗಳಿಂದ ನೀವು ಇನ್ನೂ ಕೂಡ ಮದುವೆಯಾಗದೆ ಉಳಿದುಕೊಂಡಿದ್ದಾರೆ ಒಂದು ಚಿಟಿಕೆ ಸಿಂಧೂರವನ್ನು ಹನುಮಂತನ ಪಾದಕ್ಕೆ ಅರ್ಪಿಸಿ ಮನಸ್ಸಿನಲ್ಲಿ ಆತನನ್ನು ಸ್ಮರಿಸಿ ನಂತರ ಆ ಚಿಟಿಕೆ ಸಿಂಧೂರವನ್ನು ಹಣೆಗೆ ಹಚ್ಚಿಕೊಂಡು ಪ್ರಾರ್ಥಿಸಿದರೆ ಖಂಡಿತವಾಗಿ ಅತಿಶೀಘ್ರದಲ್ಲಿ ನೀವು ಕಂಕಣ ಭಾಗ್ಯಕ್ಕೆ ಅರ್ಹರಾಗಿ ಮದುವೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

hanumaan shani deva 2 | ಹನುಮ ಜಯಂತಿಯಂದು ನಿರ್ಮಾಣವಾಗುತ್ತದೆ ವಿಶೇಷ ಯೋಗ, ಶನಿಯ ವಕ್ರದೃಷ್ಟಿಯಿಂದ ಪಾರಾಗಲು ಹನುಮ ಜಯಂತಿಯ ದಿನದಂದು ಏನು ಮಾಡಬೇಕು ಗೊತ್ತೇ??
ಹನುಮ ಜಯಂತಿಯಂದು ನಿರ್ಮಾಣವಾಗುತ್ತದೆ ವಿಶೇಷ ಯೋಗ, ಶನಿಯ ವಕ್ರದೃಷ್ಟಿಯಿಂದ ಪಾರಾಗಲು ಹನುಮ ಜಯಂತಿಯ ದಿನದಂದು ಏನು ಮಾಡಬೇಕು ಗೊತ್ತೇ?? 4

ಹಣದ ಹಾಗೂ ಆರೋಗ್ಯದ ಸಮಸ್ಯೆಗಳಿಂದ ದೂರವಾಗಲು ಬೆಲ್ಲ ಹಾಗೂ ಕಾಳುಗಳನ್ನು ಹನುಮಂತ ದೇವರಿಗೆ ನೈವೇದ್ಯ ಮಾಡಿ ಅದನ್ನು ಬಡವರಿಗೆ ಹಂಚಿ. ಹಲವಾರು ದಿನಗಳಿಂದ ಸಾಲದ ಸುಳಿಯಲ್ಲಿ ಸಿಲುಕಿದ್ದರೆ ನಿಮ್ಮ ವಯಸ್ಸಿನ ಸಂಖ್ಯೆಯಷ್ಟು ಅರಳಿಮರದ ಎಲೆಗಳನ್ನು ತೆಗೆದುಕೊಂಡು ಪ್ರತಿ ಎಲೆಗಳನ್ನು ರಾಮ ಎಂದು ಬರೆದು ಹನುಮಂತ ದೇವರಿಗೆ ಅರ್ಪಿಸಿದರೆ ಖಂಡಿತವಾಗಿ ಅತಿಶೀಘ್ರದಲ್ಲಿ ನೀವು ಸಾಲದ ಪ್ರಕೋಪದಿಂದ ದೂರವಾಗಲಿ ಇದ್ದೀರಿ. ನಿಮ್ಮ ಜೀವನದಲ್ಲಿ ಈ ಎಲ್ಲಾ ಕಾರ್ಯಗಳನ್ನು ಮಾಡುವುದರಿಂದ ಸರ್ವತೋಮುಖ ಅಭಿವೃದ್ಧಿಯನ್ನು ಕಾಣಲಿದ್ದೀರಿ.

ಹೀಗಾಗಿ ತಪ್ಪದೇ ಈ ಬಾರಿ ಲೇಖನಿಯಲ್ಲಿ ಹೇಳಿರುವಂತಹ ಎಲ್ಲಾ ಕಾರ್ಯ ಗಳನ್ನು ಹನುಮಜಯಂತಿ ಸಂದರ್ಭದಲ್ಲಿ ಮಾಡಿ ಜೀವನದಲ್ಲಿ ಸಂತೋಷವನ್ನು ಕಾಣಲು ಪ್ರಯತ್ನಿಸಿ. ಖಂಡಿತವಾಗಿ ನೀವು ಹನುಮಂತನ ಕೃಪೆಗೆ ಪಾತ್ರರಾಗಲಿದ್ದೀರಿ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.