Project K: ಆದಿಪುರುಷ್ ಸೋತರು ಪ್ರಭಾಸ್ 150 ಕೋಟಿ ಕೊಡಲು ಸಿದ್ದ- ಆದರೆ ಅದೇ ಚಿತ್ರಕ್ಕೆ ದೀಪಿಕಾ, ಕಮಲ್ ಗೆ ಸಿಕ್ಕಿದೆಷ್ಟು ಗೊತ್ತೇ?
Project K: ನಟ ಪ್ರಭಾಸ್ ಅವರ ಆದಿಪುರುಷ್ (Adipurush) ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋಲುವ ಮೂಲಕ ಮತ್ತೊಂದು ಡಿಸಾಸ್ಟರ್ ಆಗಿದೆ. ಹೀಗಿರುವಾಗ ಪ್ರಭಾಸ್ (Prabhas) ಅವರ ಮುಂದಿನ ಸಿನಿಮಾ ಮೇಲೆ ಈಗ ಎಲ್ಲರ ಕಣ್ಣು ನಾಟಿದೆ. ಪ್ರಭಾಸ್ ಅವರ ಸಿನಿಮಾ ಸಲಾರ್ (Salaar) ಸೆಪ್ಟೆಂಬರ್ 28ರಂದು ಬಿಡುಗಡೆ ಆಗುವುದಕ್ಕೆ ಸಿದ್ಧವಾಗಿದೆ. ಅದರ ನಂತರದ ಸಿನಿಮಾ ಪ್ರಾಜೆಕ್ಟ್ ಕೆ (Project K). Project K ಸಿನಿಮಾ 2024ರ ಜನವರಿ ತಿಂಗಳಿನಲ್ಲಿ ಬಿಡುಗಡೆ ಆಗಬಹುದು ಎನ್ನಲಾಗಿದೆ.

ಪ್ರಾಜೆಕ್ಟ್ ಕೆ (Project K) ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ. ಈ ಸಿನಿಮಾವನ್ನು ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ನಿರ್ಮಾಣ ಮಾಡುತ್ತಿದೆ, ಈ ಸಂಸ್ಥೆಯ 50ನೇ ವರ್ಷದ ವಿಶೇಷವಾಗಿ ಈ ದೊಡ್ಡ ಪ್ರಾಜೆಕ್ಟ್ ಅನ್ನು ಶುರು ಮಾಡಲಾಗಿದೆ. ಮಹಾನಟಿ ಅಂಥ ಅದ್ಭುತ ಸಿನಿಮಾ ನಿರ್ದೇಶನ ಮಾಡಿದ್ದ ನಾಗ್ ಅಶ್ವಿನ್ (Nag Ashwin) ಅವರು ಪ್ರಾಜೆಕ್ಟ್ ಕೆ (Project K) ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದನ್ನು ಓದಿ..Tomato: ರಾತ್ರೋ ರಾತ್ರಿ ಜನರಿಗೆ ಮತ್ತೊಂದು ಶಾಕ್- ಟೊಮೊಟೊ ಬೆಲೆ ಕಂಡು ಊಟ ಮಾಡೋದೇ ಬಿಟ್ಟ ಜನ.
Project K ಸಿನಿಮಾದಲ್ಲಿ ದೊಡ್ಡ ಕಲಾವಿದರ ದಂಡೇ ಇದೆ. ನಟ ಪ್ರಭಾಸ್, ಹಿರಿಯ ನಟರಾದ ಕಮಲ್ ಹಾಸನ್ (Kamal Hassan) ಹಾಗೂ ಅಮಿತಾಭ್ ಬಚ್ಚನ್ (Amitabh Bacchan), ಬಾಲಿವುಡ್ ಬೆಡಗಿಯರಾದ ದೀಪಿಕಾ ಪಡುಕೋಣೆ (Deepika Padukone) ಹಾಗೂ ದಿಶಾ ಪಟಾಣಿ (Disha Patani) ಇವರೆಲ್ಲರು ಸಿನಿಮಾದಲ್ಲಿದ್ದು, ಇವರಿಗೆ ನೀಡುತ್ತಿರುವ ಸಂಭಾವನೆ ಬಗ್ಗೆ ಸುದ್ದಿಗಳು ಕೇಳಿಬರುತ್ತಿದೆ. ನಟ ಪ್ರಭಾಸ್ ಒಬ್ಬರಿಗೆ ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ. ಆದಿಪುರುಷ್ ಫ್ಲಾಪ್ ಆಗಿದ್ದರು ಸಹ ಪ್ರಭಾಸ್ ಅವರಿಗೆ..
ಭಾರಿ ಸಂಭಾವನೆಯೇ ಸಿಕ್ಕಿದೆ. ಇನ್ನು ನಟ ಕಮಲ್ ಹಾಸನ್ ಅವರು Project K ಸಿನಿಮಾದಲ್ಲಿ ನಟಿಸುತ್ತಿದ್ದು, ಇವರಿಗೆ ಬರೋಬ್ಬರಿ 20 ಕೋಟಿ ಸಂಭಾವನೆ ನೀಡಲಾಗಿದೆಯಂತೆ. ಹೀರೋಯಿನ್ ಆಗಿರುವ ದೀಪಿಕಾ ಪಡುಕೋಣೆ ಅವರಿಗೆ 10 ಕೋಟಿ ಸಂಭಾವನೆ, ಅಮಿತಾಭ್ ಬಚ್ಚನ್ ಅವರು ಹಾಗೂ ದಿಶಾ ಪಟಾಣಿ ಅವರೆಲ್ಲರಿಗೂ ಸೇರಿಸಿ 20 ಕೋಟಿ ಸಂಭಾವನೆ. ಒಟ್ಟಾರೆಯಾಗಿ ಕಲಾವಿದರ ಸಂಭಾವನೆಗೆ 200 ಕೋಟಿ ಆಗಿದೆ.. ಇದನ್ನು ಓದಿ..Indian Law: ಪೊಲೀಸರು ಇನ್ನು ಮುಂದೆ ಬಾಯಿಗೆ ಬಂದ ಹಾಗೆ ಮಾತನಾಡುವಂತೆ ಇಲ್ಲ. ಕಾನೂನಿನ ಹೊಸ ರೂಲ್ಸ್- ಪೊಲೀಸರಿಗೆ ಕಡಿವಾಣ.
Project K ಸಿನಿಮಾವನ್ನು 400 ಕೋಟಿ ವೆಚ್ಚದಲ್ಲಿ ತಯಾರಿಸಲಾಗುತ್ತಿದೆ. ಒಟ್ಟಾರೆಯಾಗಿ ಸಿನಿಮಾದ ಪೂರ್ತಿ ಬಜೆಟ್ 600 ಕೋಟಿ ರೂಪಾಯಿ ಆಗಿದ್ದು, ಈಗ ಚಿತ್ರೀಕರಣಕ್ಕೆ ಹೆಚ್ಚಿನ ಸಮಯ ಇಲ್ಲದ ಕಾರಣ, ಬಹಳ ಬೇಗ ಸಿನಿಮಾದ ಕೆಲಸಗಳನ್ನು ಮುಗಿಸಲಾಗುತ್ತಿದೆ. ಸಲಾರ್ ಹಾಗೂ ಪ್ರಾಜೆಕ್ಟ್ ಕೆ (Project K) ಸಿನಿಮಾಗಳು ಪ್ರಭಾಸ್ ಅವರಿಗೆ ಯಶಸ್ಸನ್ನು ವಾಪಸ್ ತಂದುಕೊಡುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Mutual Funds: ಯಾವುದೇ ಶೇರ್ ಮಾರುಕಟ್ಟೆ ಜ್ಞಾನವಿಲ್ಲದೆ ಇದ್ದರೂ ಉತ್ತಮ ಮ್ಯೂಚುಯಲ್ ಫಂಡ್ ಗಳನ್ನೂ ಆಯ್ಕೆ ಮಾಡುವುದು ಹೇಗೆ ಗೊತ್ತೇ?
Comments are closed.