Tomato: ರಾತ್ರೋ ರಾತ್ರಿ ಜನರಿಗೆ ಮತ್ತೊಂದು ಶಾಕ್- ಟೊಮೊಟೊ ಬೆಲೆ ಕಂಡು ಊಟ ಮಾಡೋದೇ ಬಿಟ್ಟ ಜನ.

tomato rate reaches new high

Tomato: ದಿನದಿಂದ ದಿನಕ್ಕೆ ಜನರ ಜೀವನ ಅಸ್ತವ್ಯಸ್ತವಾಗುತ್ತಿದೆ, ಬೆಲೆ ಏರಿಕೆಯ ಬಿಸಿ ಜನರನ್ನು ತಟ್ಟಿದೆ. ಇತ್ತ ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಪ್ರಯತ್ನ ಮಾಡುತ್ತಿದೆ, ಆದರೆ ಅದರಲ್ಲೂ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಿದೆ. ಅದರ ಜೊತೆಯಲ್ಲಿ ಈಗ ಮುಂಗಾರು ಮಳೆಯ ಸಮಸ್ಯೆ ಇಂದ ರಾಜ್ಯದಲ್ಲಿ ತರಕಾರಿಗಳ ಬೆಲೆ ಕೂಡ ಜಾಸ್ತಿಯಾಗಿದೆ, ಅದರಲ್ಲೂ ಟೊಮೊಟೊ (Tomato) ಬೆಲೆ ಏರಿಕೆ ಆಗುತ್ತಲೇ ಇದ್ದು, ಜನರಿಗೆ ಕಷ್ಟವಾಗಿದೆ.

tomato rate reaches new high | Tomato: ರಾತ್ರೋ ರಾತ್ರಿ ಜನರಿಗೆ ಮತ್ತೊಂದು ಶಾಕ್- ಟೊಮೊಟೊ ಬೆಲೆ ಕಂಡು ಊಟ ಮಾಡೋದೇ ಬಿಟ್ಟ ಜನ.
Tomato: ರಾತ್ರೋ ರಾತ್ರಿ ಜನರಿಗೆ ಮತ್ತೊಂದು ಶಾಕ್- ಟೊಮೊಟೊ ಬೆಲೆ ಕಂಡು ಊಟ ಮಾಡೋದೇ ಬಿಟ್ಟ ಜನ. 2

ಈಗ ಟೊಮೊಟೊ (Tomato) ಬೆಲೆ ಬರೋಬ್ಬರಿ 100 ರೂಪಾಯಿಗಿಂತ ಹೆಚ್ಚು ಏರಿಕೆಯಾಗಿದೆ. ಪ್ರತಿ ಮನೆಯಲ್ಲಿ ಅಡುಗೆಗೆ ಟೊಮೊಟೊ ಬಳಸುತ್ತಾರೆ, ಅದರ ಬೆಲೆಯೇ ಹೀಗೆ ಹೆಚ್ಚಾಗಿರುವುದು ಜನರಿಗೆ ಆರ್ಥಿಕವಾಗಿ ತೊಂದರೆ ಕೊಡುತ್ತಿದೆ. ರಾಜ್ಯದ ಬಹುತೇಕ ಎಲ್ಲಾ ಮಾರುಕಟ್ಟೆಗಳಲ್ಲಿ ಟೊಮೊಟೊ (Tomato) ಬೆಲೆಯಲ್ಲಿ ವಿಪರೀತ ಏರಿಕೆ ಕಂಡುಬಂದಿದೆ. ಧಾರವಾಡದ ಸಗಟು ಮಾರುಕಟ್ಟೆಯಲ್ಲಿ ಟೊಮೊಟೊ (Tomato) ಬೆಲೆ 110 ರೂಪಾಯಿ ತಲುಪಿದೆ. ಇನ್ನು ಕೆಲವು ಕಡೆಗಳಲ್ಲಿ 90, ಅಥವಾ 95 ರೂಪಾಯಿಗೆ ಮಾರಾಟವಾಗುತ್ತಿದೆ. ಇದನ್ನು ಓದಿ..BJP vs Siddu: ಬಿಜೆಪಿ ಗೆ ಶಾಕ್ ನೀಡಲು ಸಿದ್ದವಾದ ಸಿದ್ದರಾಮಯ್ಯ- ಆದರೆ ಬಿಜೆಪಿ ಫ್ಯಾನ್ಸ್ ಖುಷಿಯಿಂದ ಇದೆ ಬೇಕು ಎಂದಿದ್ದು ಯಾಕೆ ಗೊತ್ತೇ?

ರಾಜ್ಯದ ಕೆಲವು ಕಡೆ ಮಳೆಯೇ ಆಗಿಲ್ಲ, ಆದರೆ ಇನ್ನೂ ಕೆಲವು ಕಡೆಗಳಲ್ಲಿ ಅತಿಯಾಗಿ ಮಳೆಯಾಗಿದೆ. ಈ ಕಾರಣಕ್ಕೆ ಟೊಮೊಟೊ (Tomato) ಬೆಳೆಗೇ ವಿಪರೀತ ಹಾನಿ ಉಂಟಾಗಿದೆ. ಇನ್ನು ಕೆಲವು ಪ್ರದೇಶಗಳಲ್ಲಿ ಬಿಸಿಲು ಹೆಚ್ಚಾಗಿದ್ದು, ಸರಿಯಾದ ಇಳುವರಿ ಬಂದಿಲ್ಲ. ಟೊಮೊಟೊ ಬೆಳೆ ವಿಷಯದಲ್ಲಿ ಕಳೆದ ವರ್ಷ ರೈತರು ಹೆಚ್ಚು ಟೊಮೊಟೊ (Tomato) ಬೆಳೆದಿದ್ದರು, ಆದರೆ ಉತ್ತಮವಾದ ಬೆಲೆ ಸಿಗದೆ ರೈತರಿಗೆ ನಷ್ಟವಾಗಿತ್ತು.

ಈಗ ಮಾಲ್ ಹಾಗೂ ಸೂಪರ್ ಮಾರ್ಕೆಟ್ ಗಳಲ್ಲಿ ಟೊಮೊಟೊ (Tomato) ಬೆಲೆ ಎಷ್ಟಿದೆ ಎಂದರೆ, ಒಳ್ಳೆಯ ಕ್ವಾಲಿಟಿಯ ಟೊಮೊಟೊ, ಒಂದು ಕೆಜಿಗೆ 120 ರಿಂದ 150 ರೂಪಾಯಿ ಆಗಿದ್ದು, ಈ ಪರಿಯ ಬೆಲೆ ಏರಿಕೆಗೆ ಜನರು ಅಸಮಧಾನಗೊಂಡಿದ್ದಾರೆ. ಸೆಕೆಂಡ್ ಮತ್ತು ಥರ್ಡ್ ಕ್ವಾಲಿಟಿ ಟೊಮೊಟೊ (Tomato) ಬೆಲೆ ಕೆಜಿಗೆ 70 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಅಡುಗೆಗೆ ಬಳಸುವ ಟೊಮೊಟೊ ಬೆಲೆ ಗಗನಕ್ಕೆ ಏರಿದೆ.. ಇದನ್ನು ಓದಿ..Motorola Razr: ಹೊಸದಾಗಿ ಬಿಡುಗಡೆಯಾಗುತ್ತಿರುವ ಮೋಟೊರೋಲ ಫೋನ್ ಗಳ ವೈಶಿಷ್ಟತೆ, ಬೆಲೆ ಕೇಳಿದರೆ ಖರೀದಿ ಮಾಡಲು ಸಿದ್ಧವಾಗ್ತಿರ.

ಇನ್ನೇನು ಹಬ್ಬಗಳ ಸೀಸನ್ ಶುರುವಾಗುವ ಸಮಯ ಈ ವೇಳೆ, ಟೊಮ್ಯಾಟೋ (Tomato) ಬೆಲೆ ಇಷ್ಟು ಹೆಚ್ಚಾಗಿರುವುದು ಜನರಿಗೆ ಹಣಕಾಸಿನ ವಿಷಯದಲ್ಲಿ ಹೊಡೆತ ಕೊಡುತ್ತಿದೆ. ಇನ್ನು ಹುಬ್ಬಳ್ಳಿ, ಧಾರವಾಡ ಇನ್ನಿತರ ಕಡೆಗಳಲ್ಲಿ ಮುಂಗಾರು ಬರದ ಕಾರಣ ಮುಂದಿನ ದಿನಗಳಲ್ಲಿ ಟೊಮ್ಯಾಟೋ (Tomato) ಮಾತ್ರವಲ್ಲ, ಬೇರೆ ತರಕಾರಿಗಳ ಬೆಲೆ ಕೂಡ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Mutual Funds: ಯಾವುದೇ ಶೇರ್ ಮಾರುಕಟ್ಟೆ ಜ್ಞಾನವಿಲ್ಲದೆ ಇದ್ದರೂ ಉತ್ತಮ ಮ್ಯೂಚುಯಲ್ ಫಂಡ್ ಗಳನ್ನೂ ಆಯ್ಕೆ ಮಾಡುವುದು ಹೇಗೆ ಗೊತ್ತೇ?

Comments are closed.