Punyavathi: ಕೊನೆಗೂ ಬಯಲಾಯ್ತು ಸತ್ಯ- ನಂದನ್ ಗೆ ಗೊತ್ತಾಯ್ತು ಸತ್ಯ. ಇಷ್ಟೆಲ್ಲ ಆದ ಮೇಲೆ ಸಂಸಾರ ಯಾರ ಜೊತೆ? ಉಲ್ಟಾ ಹೊಡೆದು ಟ್ವಿಸ್ಟ್. ಏನಾಗುತ್ತಿದೆ ಗೊತ್ತೇ?
Punyavathi: ಕಲರ್ಸ್ ಕನ್ನಡ (Colors Kannada) ವಾಹಿನಿಯ ಪುಣ್ಯವತಿ (Punyavathi) ಧಾರವಾಹಿ ಈಗ ಹೊಸ ಟ್ವಿಸ್ಟ್ ಜೊತೆಗೆ ಪ್ರೇಕ್ಷಕರ ಎದುರು ಬರುತ್ತಿದೆ. ಈ ಬಿಗ್ ಟ್ವಿಸ್ಟ್ ಅನ್ನು ಜನರು ಊಹಿಸಿರಲಿಲ್ಲ. ಇದೊಂದು ಹಳ್ಳಿ ಹುಡುಗಿಯ ಕಥೆ ಆಗಿತ್ತು, ಪದ್ಮಿನಿ ಎನ್ನುವ ಹುಡುಗಿ, ಆಕೆಗೆ ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟ. ಆದರೆ ಆಕೆಯ ಅಪ್ಪನಿಗೆ ಡ್ಯಾನ್ಸ್ ಅಂದ್ರೆ ಇಷ್ಟವಿಲ್ಲ. ಮಗಳಿಗೆ ಮದುವೆ ಮಾಡಿಬಿಡಬೇಕು ಎಂದುಕೊಂಡಿದ್ದರು ಪದ್ಮಿನಿ ತಂದೆ, ಶ್ರೀಮಂತರ ಮನೆ ಹುಡುಗ ನಂದನ್ ಜೊತೆಗೆ ಮದುವೆ ಫಿಕ್ಸ್ ಆಯಿತು.
ನಂದನ್ ಗು ಪದ್ಮಿನಿ ಅಂದ್ರೆ ತುಂಬಾ ಇಷ್ಟ. ಪದ್ಮಿನಿಗೂ ಇಷ್ಟವಾಗಿದ್ದ ನಂದನ್, ಆದರೆ ಮದುವೆ ದಿನ ಒಂದು ಘಟನೆ ನಡೆದು ಹೋಗಿ, ಸಮಯಕ್ಕೆ ಸರಿಯಾಗಿ ಪದ್ಮಿನಿ ಮದುವೆಗೆ ಬರೋದಕ್ಕೆ ಆಗದೆ ಮದುವೆ ಪದ್ಮಿನಿಯ ತಂಗಿ ಪೂರ್ವಿ ಜೊತೆಗೆ ನಡೆದು ಹೋಗಿದೆ. ಇದು ಯಾರಿಗೂ ಗೊತ್ತಿರಲಿಲ್ಲ. ಪದ್ಮಿನಿ ಪೂರ್ವಿ ಯಾರಿಗೂ ಹೇಳದೆ, ಪದ್ಮಿನಿಯೇ ನಂದನ್ ಮದುವೆಯಾಗಿರುವ ಹುಡುಗಿಯ ಹಾಗೆ ಗಂಡನ ಮನೆಗೆ ಬಂದಿದ್ದಾಳೆ. ಜೊತೆಯಲ್ಲಿ ಪೂರ್ವಿ ಕೂಡ ಬಂದಿದ್ದಾಳೆ. ಇದನ್ನು ಓದಿ..Naga Chaitanya: ಎಲ್ಲವನ್ನು ಬಿಟ್ಟ ನಾಗ ಚೈತನ್ಯ- ಸಮಂತಾ ಳಲ್ಲಿ ನನಗೆ ಅದೊಂದು ತುಂಬಾ ಇಷ್ಟ ಎಂದ ನಾಗ ಚೈತನ್ಯ- ಅದಕ್ಕೆ ಇಷ್ಟ ಪಟ್ಟೆ ಎಂದು ಹೇಳಿದ್ದೇನು ಗೊತ್ತೇ??
ಪದ್ಮಿನಿ ಅತ್ತೆ ಅಮ್ಮಾಜಿ, ಪೂರ್ವಿ ಮನೆಗೆ ಹೊಂದಿಕೊಳ್ಳುವವರೆಗೂ ನೀನು ಈ ಮನೆಯಲ್ಲೇ ಇರು ಎಂದು ಹೇಳಿದ್ದರು. ಪದ್ಮಿನಿ ಪೂರ್ವಿಗೆ ನಂದನ್ ಮದುವೆಯಾಗಿದ್ದು ನಿನ್ನನ್ನ, ನೀನು ಅವರ ಹೆಂಡತಿ, ಅವರ ಜೊತೆಗೆ ನೀನು ಸಂಸಾರ ಮಾಡಬೇಕು ಎಂದು ಹೇಳಿದರೆ, ಪೂರ್ವಿ ಅದನ್ನು ಕೇಳುತ್ತಿಲ್ಲ. ನಾನು ಮದುವೆಯಾಗಿದ್ದು ಅಚಾನಕ್ ಆಗಿ ನನಗೆ ಅವರ ಮೇಲೆ ಯಾವುದೇ ರೀತಿಯ ಭಾವನೆ ಇಲ್ಲ ಎಂದು ಹೇಳುತ್ತಿದ್ದಾಳೆ. ಅಕ್ಕ ಬಲವಂತ ಮಾಡುತ್ತಿರುವುದಕ್ಕೆ ಪೂರ್ವಿ ಮನೆ ಬಿಟ್ಟು ಹೋಗಿದ್ದಾಳೆ.
ಅಕ್ಕ ತಂಗಿಯರಿಬ್ಬರು ದೇವಸ್ಥಾನಕ್ಕೆ ಬಂದಿದ್ದು, ನಂದನ್ ಕೂಡ ಅಲ್ಲಿಗೆ ಬಂದಿದ್ದಾನೆ. ನಂದನ್ ಗೆ ಒಂದು ಫೋಟೋದಲ್ಲಿ ಮುಖ ಮುಚ್ಚಿಕೊಂಡಿರುವ ವಧುವಿನ ಫೋಟೋ ಬಯಲಾಗಿದ್ದು, ಅವನಿಗೆ ನಿಜ ಗೊತ್ತಾಗಿ, ಅಕ್ಕ ತಂಗಿಯರು ಇದ್ದ ದೇವಸ್ಥಾನಕ್ಕೆ ಬಂದು, ತಾನು ಮದುವೆಯಾಗಿದ್ದು ಯಾರನ್ನ? ಪದ್ಮಿನಿಯನ್ನೋ ? ಪೂರ್ವಿಯನ್ನೋ? ಎಂದು ಜೋರಾಗಿ ಕೇಳಿದಾಗ ಪದ್ಮಿನಿ ಪೂರ್ವಿನನ್ನು ಎಂದು ನಿಜ ಹೇಳಿದ್ದಾಳೆ. ಇದನ್ನು ಕೇಳಿ ನಂದನ್ ಗೆ ಶಾಕ್ ಆಗಿದೆ. ನಿಂತಲ್ಲೇ ಕುಸಿದಿದ್ದಾನೆ ನಂದನ್. ಈಗ ನಂದನ್ ಯಾರ ಜೊತೆಗೆ ಇರುತ್ತಾನೆ? ಯಾರ ಜೊತೆಗೆ ಸಂಸಾರ ಮಾಡುತ್ತಾನೆ ಎನ್ನುವ ಕುತೂಹಲ ವೀಕ್ಷಕರಲ್ಲಿ ಶುರುವಾಗಿದೆ. ಇದನ್ನು ಓದಿ..Kannada News: ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ಚೀತಾ ನಿಜಕ್ಕೂ ಸಾವನ್ನಪ್ಪಿದ್ದು ಹೇಗೆ ಗೊತ್ತೇ?? ಹೀಗೆ ಹಾಗಲೂ ಅಸಲಿ ಕಾರಣವೇನು ಗೊತ್ತೆ??
Comments are closed.