Pushpa 2: ಸಮಂತಾಗಿಂತ ಒಂದು ಕೈ ಮೇಲೆ- ಪುಷ್ಪ 2 ಸಿನಿಮಾ ಐಟಂ ಸಾಂಗ್ ಯಾರ ಪಾಲು ಗೊತ್ತೇ?? ತಿಳಿದರೆ ಮೈ ರೋಮವೆಲ್ಲ ಎದ್ದು ನಿಲ್ಲುತ್ತದೆ.
Pushpa 2: ನಟ ಅಲ್ಲು ಅರ್ಜುನ್ (Allu Arjun) ಅವರಿಗೆ ಪುಷ್ಪ (Pushpa) ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದು ಕೊಟ್ಟಿದೆ. ಈ ಸಿನಿಮಾ ಮೂಲಕ ಅಲ್ಲು ಅರ್ಜುನ್ ಅವರು ಐಕಾನಿಕ್ ಸ್ಟಾರ್ ಎನ್ನಿಸಿಕೊಂಡಿದ್ದಾರೆ. ಪುಷ್ಪ ಸಿನಿಮಾ ಬಿಡುಗಡೆಯಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ಸದ್ದು ಮಾಡಿತ್ತು, ಕೇವಲ ಹಿಂದಿ ಭಾಷೆಯಲ್ಲಿ ಮಾತ್ರವೇ, 100 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿತ್ತು. ಹೀಗಿರುವಾಗ ಪುಷ್ಪ ಸಿನಿಮಾ ಬಗ್ಗೆ ಇದೀಗ ಹೊಸದೊಂದು ಚರ್ಚೆ ಶುರುವಾಗಿದೆ.
ಅದೇನೆಂದರೆ, ಪುಷ್ಪ1 ಸಿನಿಮಾದಲ್ಲಿ ಹೈಲೈಟ್ ಆಗಿದ್ದು ನಟಿ ಸಮಂತಾ (Samantha) ಅವತು ಕಾಣಿಸಿಕೊಂಡ ಐಟಂ ಸಾಂಗ್. ಈ ಹಾಡು ಎಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತು ಎಂದು ನಮಗೆಲ್ಲ ಗೊತ್ತೇ ಇದೆ. ಊ ಅಂಟಾವ ಹಾಡಿಗೆ ಎಲ್ಲರೂ ಫಿದಾ ಆಗಿದ್ದರು. ಪುಷ್ಪಾ2 ನಲ್ಲಿ ಇಂಥ ಹಾಡು ಇರಲಿದೆಯೇ ಎಂದು ವೀಕ್ಷಕರಲ್ಲಿ ಪ್ರಶ್ನೆ ಇತ್ತು, ಅದಕ್ಕೆ ಉತ್ತರ ಏನೆಂದರೆ, ಪುಷ್ಪ2 ನಲ್ಲಿ ಒಂದು ಐಟಂ ಸಾಂಗ್ ಖಂಡಿತ ಇರಲಿದೆ. ಇದನ್ನು ಓದಿ..Punyavathi: ಕೊನೆಗೂ ಬಯಲಾಯ್ತು ಸತ್ಯ- ನಂದನ್ ಗೆ ಗೊತ್ತಾಯ್ತು ಸತ್ಯ. ಇಷ್ಟೆಲ್ಲ ಆದ ಮೇಲೆ ಸಂಸಾರ ಯಾರ ಜೊತೆ? ಉಲ್ಟಾ ಹೊಡೆದು ಟ್ವಿಸ್ಟ್. ಏನಾಗುತ್ತಿದೆ ಗೊತ್ತೇ?
ಹಾಗೆಯೇ ಈ ಹಾಡಿನಲ್ಲಿ ಕಾಣಿಸಿಕೊಳ್ಳುವವರು ಯಾರು ಎನ್ನುವ ಕುತೂಹಲ ಕೂಡ ಶುರುವಾಗಿದ್ದು, ಅದಕ್ಕೀಗ ಒಂದು ಉತ್ತರ ಸಿಕ್ಕಿದೆ. ಈ ಹಾಡಿನಲ್ಲಿ ನಟ ಅಲ್ಲು ಅರ್ಜುನ್ ಅವರ ಜೊತೆಗೆ ನಟಿ ಸೀರತ್ ಕಪೂರ್ (Seerat Kapoor) ಹೆಜ್ಜೆ ಹಾಕುತ್ತಾರೆ ಎಂದು ಸುದ್ದಿಯಾಗುತ್ತಿದೆ. ಅದಕ್ಕೆ ಕಾರಣ ಸೀರತ್ ಕಪೂರ್ ಅವರು ಶೇರ್ ಮಾಡಿರುವ ಒಂದು ಪೋಸ್ಟ್ ಆಗಿದೆ, ಅಲ್ಲು ಅರ್ಜುನ್ ಅವರನ್ನು ಹಗ್ ಮಾಡುತ್ತಿರುವ ಫೋಟೋ ಶೇರ್ ಮಾಡಿ, ಡ್ಯಾನ್ ಮಾಡುವವರಿಗೆ ರೆಕ್ಕೆಯ ಅವಶ್ಯಕತೆ ಇಲ್ಲ..ಅವರ ಟ್ಯಾಲೆಂಟ್ ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ಬರೆದಿದ್ದಾರೆ..
ಈ ಪೋಸ್ಟ್ ಈಗ ವೈರಲ್ ಆಗಿದ್ದು, ಅಲ್ಲು ಅರ್ಜುನ್ ಅವರು ಈಗ ಪುಷ್ಪ2 ಬಿಟ್ಟು ಇನ್ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ, ಹಾಗಾಗಿ ಪುಷ್ಪ2 ಸಿನಿಮಾದಲ್ಲಿ ಇವರೇ ಹೆಜ್ಜೆ ಹಾಕಬಹುದು ಎಂದು ಹೇಳಲಾಗುತ್ತಿದೆ. ಮತ್ತೊಂದು ಕಡೆ, ಇದು ನಿಜವಲ್ಲ ಅಲ್ಲು ಅರ್ಜುನ್ ಅವರು ಎಲ್ಲರಿಗೂ ಪ್ರೋತ್ಸಾಹ ನೀಡುತ್ತಾರೆ, ಹಾಗೆಯೇ ಸೀರತ್ ಕಪೂರ್ ಅವರಿಗು ಪ್ರೋತ್ಸಾಹ ಕೊಟ್ಟಿರಬಹುದು ಎಂದು ಇನ್ನು ಕೆಲವರು ಹೇಳುತ್ತಿದ್ದು, ಯಾವುದೇ ನಿಜ ಎಂದು ತಿಳಿಯಲು ಇನ್ನು ಕೆಲ ಸಮಯ ಕಾಯಬೇಕಿದೆ. ಇದನ್ನು ಓದಿ..Health Tips: ಕಿಡ್ನಿ ಕಲ್ಲುಗಳನ್ನು ಕೂಡ ಮಂಜಿನಂತೆ ಕರಗಿಸುವುದು ಹೇಗೆ ಗೊತ್ತೇ?? ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು.
Comments are closed.