Pushpa 2: ಪುಷ್ಪ 2 ನಲ್ಲಿ ಅಲ್ಲೂ ಅರ್ಜುನ್ ಕಾಣಿಸಿಕೊಂಡಿರುವ ಗಂಗಮ್ಮ ತಾಯಿ ಹಿಂದಿರುವ ಜಾನಪದ ಕಥೆ ಏನು ಗೊತ್ತೇ?? ತಿಳಿದರೇ ಭಕ್ತಿಯಿಂದ ತಲೆ ಬಗ್ಗಿಸುತ್ತಿರಿ.
Pushpa 2: ಬಹುನಿರೀಕ್ಷಿತ ಪುಷ್ಪ2 (Pushpa 2) ಸಿನಿಮಾದ ಅಲ್ಲು ಅರ್ಜುನ್ (Allu Arjun) ಅವರ ಗಂಗಮ್ಮತಾಯಿ ಲುಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಈ ಲುಕ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದು, ಒಂದಷ್ಟು ಜನರು ಈ ಲುಕ್ ಹಿಂದಿನ ದೇವಿಯ ಕಥೆ ಬಗ್ಗೆ ತಿಳಿಯಲು ಕುತೂಹಲರಾಗಿದ್ದಾರೆ. ಹಾಗಿದ್ದರೆ, ಗಂಗಮ್ಮತಾಯಿ ಆಚರಣೆ ಏನು? ಅದು ಶುರುವಾಗಿದ್ದು ಯಾಕೆ? ತಿಳಿಸುತ್ತೇವೆ ನೋಡಿ..
ಈ ಆಚರಣೆ ತಿರುಪತಿಯ (Tirupati) ಸುತ್ತ ಮುತ್ತ ಇರುವ ಊರಿನಲ್ಲಿ ನಡೆಯುತ್ತದೆ. ಇದರಲ್ಲಿ ಊರಿನ ಗಂಡಸರು ದೇವಿಯ ಹಾಗೆ ವೇಷ ಭೂಷಣ ಧರಿಸಿ ಪೂಜೆ ಮಾಡುತ್ತಾರೆ. ಈ ಆಚರಣೆ ಬಗ್ಗೆ ಹೆಚ್ಚಾಗಿ ಹೇಳೋದಾದರೆ, ಆಗಿನ ಕಾಲದಲ್ಲಿ ತಿರುಪತಿಯಲ್ಲಿ ಪಾಳೆಗಾರರು ಆಳ್ವಿಕೆ ನಡೆಸುತ್ತಿದ್ದರು, ಒಂದು ಸಮಯದಲ್ಲಿ ಒಬ್ಬ ಪಾಳೆಗಾರ ಜನರ ಮೇಲೆ ಹೆಚ್ಚು ತೆರಿಗೆ ವಿಧಿಸೋದಕ್ಕೆ ಶುರು ಮಾಡಿದ.
ಜನರು ಇದಕ್ಕೆ ಒಪ್ಪದೆ ಇದ್ದಾಗ, ಅವರ ಮೇಲೆ ಕೆಟ್ಟದಾಗಿ ದಬ್ಬಾಳಿಕೆ ಮಾಡೋಕೆ ಶುರು ಮಾಡಿದ, ಅಲ್ಲಿನ ಹೆಣ್ಣುಮಕ್ಕಳಿಗೆ ಟೊಂದರೆ ಕೊಡುವುದು, ಯಾರೇ ಹೊಸದಾಗಿ ಮದುವೆಯಾದರು ಆ ಹೆಣ್ಣು ತನ್ನ ಹತ್ತಿರ ಮೊದಲು ಬರಬೇಕು ಎನ್ನುವುದು.. ಹೀಗೆಲ್ಲಾ ಮಾಡುವುದಕ್ಕೆ ಶುರು ಮಾಡಿದ. ಇದರಿಂದ ಊರಿನ ಜನರು ಬೇಸತ್ತು ಹೋಗಿದ್ದರು. ಅವನಿಗೆ ತಕ್ಕ ಶಾಸ್ತಿ ಆಗಬೇಕು ಎಂದು ಜನರು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಾಗ.. ಇದನ್ನು ಓದಿ..Kannada News: ಚಿರಂಜೀವಿ ಹೆಂಡತಿ ಎಂದು ನೋಡದೆ, ಅವಮಾನ ಮಾಡಿದ ಸ್ಟಾರ್ ಹೀರೊಯಿನ್: ತೆಲುಗು ಚಿತ್ರರಂಗ ಗಡ ಗಡ. ಏನಾಗಿದೆ ಗೊತ್ತೇ??
ಹೆಣ್ಣುಮಕ್ಳಳನ್ನು ರಕ್ಷಿಸಲು ತಿರುಪತಿಯಿಂದ 2ಕಿಮೀ ಆಚೆ ಇರುವ ಅವಿಲಾಲ ಎನ್ನುವ ಹಳ್ಳಿಯಲ್ಲಿ ಒಂದು ಮಗು ಜನಿಸಿತು, ತಾನು ದೈವದ ಸ್ವರೂಪ ಎಂದು ಸುಳಿವು ಕೊಡದೆ ಆ ಮಗು ಬೆಳೆದು ದೊಡ್ಡವಳಾಯಿತು, ಪಾಳೆಗಾರನ ಕಣ್ಣು ಮಗುವಿನ ಮೇಲೆ ಬಿದ್ದು, ಆಕೆಯ ಮೇಲು ಅದೇ ರೀತಿ ಮಾಡಲು ಹೋದಾಗ, ಆಕೆ ತನ್ನ ವಿಶ್ವಾರೂಪ ತೋರಿಸುತ್ತಾಳೆ.
ಅದರಿಂದ, ತನ್ನನ್ನು ಸಂಹಾರ ಮಾಡುವುದಕ್ಕೆ ಆಕೆ ಹುಟ್ಟಿರುವುದು ಎಂದು ಪಾಳೆಗಾರನಿಗೆ ಅರ್ಥವಾಗಿ, ಅಲ್ಲಿ ಬಚ್ಚಿಟ್ಟುಕೊಂಡ. ಅವನನ್ನು ಹೊರಗೆ ಕರೆತರಲು 7 ದಿನಗಳ ಜಾತ್ರೆ ಮಾಡಲಾಯಿತು. ಪಾಳೆಗಾರನನ್ನು ಹೊರಬರುವ ಹಾಗೆ ಮಾಡಲು, ದೇವಿ ಮೂರು ದಿನ ಮೂರು ಬೇರೆ ಬೇರೆ ವೇಷ ಧರಿಸಿದರು ಆದರೆ ಆತ ಹೊರಗೆ ಬರಲಿಲ್ಲ, 4ನೇ ದಿನ ದೊರೆಯ ವೇಷ ಧರಿಸಿ ಗಂಗಮ್ಮ ಬಂದಿದ್ದು, ಆಗ ಅವನು ಹೊರ ಬರುತ್ತಿದ್ದ ಹಾಗೆ ಗಂಗಮ್ಮ ದೇವಿ ಅವನ ತಲೆ ತೆಗೆದು ಸಂಹಾರ ಮಾಡಿದರು.
ಇದು ದುಷ್ಟರಿಗೆ ತಾಯಿ ಬುದ್ಧಿ ಕಲಿಸಿದ ಕಥೆ, ಗಂಗಮ್ಮತಾಯಿ ತಮ್ಮನ್ನು ನೆನೆದು ಕಾಪಾಡಲಿ ಎಂದು ಮಾಡುವ ಆಚರಣೆ ಇದಾಗಿದೆ. ತೆಲುಗು ರಾಜ್ಯದ ಬತುಕಮ್ಮ, ಬೊನಮ್ಮ ಆಚರಣೆಯ ರೀತಿ ಇದು ಕೂಡ ಆಗಿದೆ. 7 ದಿನಗಳ ಈ ಜಾತ್ರೆ ನಡೆಯುತ್ತದೆ. ಪುಷ್ಪ2 ಸಿನಿಮಾದ ಇಂಟರ್ವಲ್ ಸಮಯದಲ್ಲಿ ದೇವಿ ವೇಷದಲ್ಲಿ ಬರುವ ಈ ಫೈಟ್ ನ ಲುಕ್ ಈಗ ಜನರ ಗಮನ ಸೆಳೆಯುತ್ತಿದೆ. ಒಟ್ಟಿನಲ್ಲಿ ನಿರ್ದೇಶಕ ಸುಕುಮಾರ್ ಅವರು ಜನರಿಗೆ ಇಷ್ಟ ಆಗುವಂತಹ, ನೇಟಿವಿಟಿ ಎಲಿಮೆಂಟ್ ಒಂದನ್ನು ಪುಷ್ಪ2 ಸಿನಿಮಾದಲ್ಲಿ ತಂದಿದ್ದಾರೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?
Comments are closed.