ಮೊದಲ ಬಾರಿಗೆ ಆರ್ಸಿಬಿ ಬಗ್ಗೆ ಕನ್ನಡದಲ್ಲಿ ಮಾತನಾಡಿದ ಕನ್ನಡಿಗ ಕೆ ಎಲ್ ರಾಹುಲ್, ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸದ್ಯಕ್ಕೆ ಕರ್ನಾಟಕ ಮೂಲದ ಕೆ ಎಲ್ ರಾಹುಲ್ ರವರು ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಯಾವ ಮಟ್ಟಿಗೆ ಪರಿಣಾಮವನ್ನು ಪ್ರಭಾವವನ್ನು ಬೀರಿದ್ದಾರೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿದೆ. ಈಗಾಗಲೇ ತಂಡದ ಉಪನಾಯಕನಾಗಿ ಕೂಡ ಆಯ್ಕೆಯಾಗಿದ್ದಾರೆ ಎನ್ನುವುದು ಕನ್ನಡಿಗರೆಲ್ಲರೂ ನೆಚ್ಚಿಕೊಳ್ಳಬೇಕಾದಂತಹ ವಿಚಾರ. ಕರ್ನಾಟಕ ರಣಜಿ ತಂಡದಲ್ಲಿ ಆಡಿಕೊಂಡಿದ್ದ ಕೆಎಲ್ ರಾಹುಲ್ ರವರು ಭಾರತೀಯ ತಂಡದ ಪ್ರಮುಖ ಭಾಗವಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಯಾರು ಕೂಡ ಅಂದಾಜು ಮಾಡಿಕೊಂಡಿರಲು ಕೂಡ ಸಾಧ್ಯವಿಲ್ಲ.

ಆದರೆ ಇಂದಿನ ದಿನದಲ್ಲಿ ಓಪನಿಂಗ್ ಬ್ಯಾಟ್ಸ್ ಮನ್ ಆಗಿ ತಂಡದ ಹೊಸ ಉಪಕಪ್ತಾನನಾಗಿ ಭಾರತೀಯ ತಂಡದಲ್ಲಿ ಕೆ ಎಲ್ ರಾಹುಲ್ ಅವರು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಯಾವ ಸಂದರ್ಭದಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿದರೂ ಕೂಡ ಆಪದ್ಬಾಂಧವ ನಾಗಿ ಬಂದು ತಂಡವನ್ನು ಗೆಲ್ಲಿಸಿದ ಹಲವಾರು ಉದಾಹರಣೆಗಳಿವೆ. ಇನ್ನು ಈಗಾಗಲೇ ಪಂಜಾಬ್ ತಂಡದ ನಾಯಕತ್ವವನ್ನು ಕೂಡ ಮಾಡಿರುವ ಕೆಎಲ್ ರಾಹುಲ್ ರವರು 2 ವರ್ಷಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕೂಡ ಪ್ರಮುಖ ಆಟಗಾರನಾಗಿ ಕಾಣಿಸಿಕೊಂಡಿದ್ದರು.

klrahul kohli | ಮೊದಲ ಬಾರಿಗೆ ಆರ್ಸಿಬಿ ಬಗ್ಗೆ ಕನ್ನಡದಲ್ಲಿ ಮಾತನಾಡಿದ ಕನ್ನಡಿಗ ಕೆ ಎಲ್ ರಾಹುಲ್, ಹೇಳಿದ್ದೇನು ಗೊತ್ತೇ??
ಮೊದಲ ಬಾರಿಗೆ ಆರ್ಸಿಬಿ ಬಗ್ಗೆ ಕನ್ನಡದಲ್ಲಿ ಮಾತನಾಡಿದ ಕನ್ನಡಿಗ ಕೆ ಎಲ್ ರಾಹುಲ್, ಹೇಳಿದ್ದೇನು ಗೊತ್ತೇ?? 2

ಸದ್ಯಕ್ಕೆ ಈ ಬಾರಿಯ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ನಾಯಕನಾಗಿ ಬ್ಯಾಟ್ ಬೀಸಲಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ ಕೆಎಲ್ ರಾಹುಲ್ ಅವರು ಕೂಡ ಭಾಗವಹಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕುರಿತಂತೆ ಕೆಲವೊಂದು ವಿಚಾರವನ್ನು ಹೇಳಿದ್ದಾರೆ. ಹೌದು ತಾನು ಎಲ್ಲೇ ಹೋದರೂ ಕೂಡ ಕರ್ನಾಟಕದ ಹುಡುಗ, ನನ್ನ ಹೃದಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಿಶೇಷವಾದ ಸ್ಥಾನ ಖಂಡಿತವಾಗಿ ಸದಾಕಾಲ ಇರುತ್ತದೆ ಎಂಬುದಾಗಿ ಹೇಳಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಅಚ್ಚಕನ್ನಡದಲ್ಲಿ ರಾಹುಲ್ ರವರು ಮಾತನಾಡಿದ್ದು ಮತ್ತೊಂದು ವಿಶೇಷವಾಗಿತ್ತು. ಎಲ್ಲೇ ಹೋದರು ಕೂಡ ತನ್ನ ಕನ್ನಡತನವನ್ನು ಬಿಟ್ಟು ಕೊಡದೆ ಇರುವುದು ಕೆಎಲ್ ರಾಹುಲ್ ಅವರ ವ್ಯಕ್ತಿತ್ವಕ್ಕೆ ಮತ್ತೊಂದು ಗೌರವ ದಾಯಕ ವಿಚಾರ ಎಂದು ಹೇಳಬಹುದಾಗಿದೆ.

Comments are closed.