ಇಂಜುರಿ ಸಮಸ್ಯೆಯಿಂದ ಹೊರಗುಳಿದಿರುವ ರಾಹುಲ್ ಪ್ರಾಕ್ಟೀಸ್ ಮಾಡುತ್ತಿರುವುದು ಯಾವ ಮಹಿಳೆ ಜೊತೆ ಗೊತ್ತೇ?? ಈಕೆ ಸಾಮಾನ್ಯವಾದವಳಲ್ಲ.

ನಮಸ್ಕಾರ ಸ್ನೇಹಿತರೆ ನಿಮಗೆ ನೆನಪಿರಬಹುದು ಭಾರತದಲ್ಲಿ ನಡೆದಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಕೆಎಲ್ ರಾಹುಲ್ ರವರು ಕಾಣಿಸಿಕೊಳ್ಳಬೇಕಾಗಿತ್ತು. ಆದರೆ ಹಿಂದಿಯ ಸಮಸ್ಯೆಯಿಂದಾಗಿ ಕೇವಲ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮಾತ್ರವಲ್ಲದೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೂಡ ಕೆಎಲ್ ರಾಹುಲ್ ಅವರ ತಂಡದಿಂದ ಹೊರಗುಳಿಯಬೇಕಾಗಿ ಬಂದಿತ್ತು. ಸದ್ಯಕ್ಕೆ ಕೆಎಲ್ ರಾಹುಲ್ ರವರು ಇಂಜುರಿಯ ಸಮಸ್ಯೆಗೆ ಶಸ್ತ್ರಚಿಕಿತ್ಸೆಯನ್ನು ಮಾಡಿಕೊಂಡು ಮತ್ತೆ ಮೈದಾನದಲ್ಲಿ ಪ್ರಾಕ್ಟೀಸ್ ಮಾಡಲು ಆರಂಭಿಸಿದ್ದಾರೆ.

ವೆಸ್ಟ್ ಇಂಡೀಸ್ ಸರಣಿಗೆ ಕೆಎಲ್ ರಾಹುಲ್ ರವರು ಆಯ್ಕೆಯಾಗಿದ್ದಾರೆ ನಿಜ ಆದರೆ ಅವರು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ತಂಡದಲ್ಲಿ ಆಡಲು ಆಯ್ಕೆಯಾಗಲು ಸಾಧ್ಯವಿದೆ. ಸದ್ಯಕ್ಕೆ ಕೆಎಲ್ ರಾಹುಲ್ ರವರು ಬೆಂಗಳೂರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಇನ್ನು ಇವರಿಗೆ ಬೌಲಿಂಗ್ ಪ್ರಾಕ್ಟೀಸ್ ನೀಡುತ್ತಿರುವುದು ಯಾರು ಸಾಮಾನ್ಯದವರಲ್ಲ ಬದಲಾಗಿ ಒಬ್ಬ ಮಹಿಳಾ ಕ್ರಿಕೆಟರ್. ಹೌದು ಗೆಳೆಯರೇ ಭಾರತೀಯ ಕ್ರಿಕೆಟ್ ತಂಡದ ವಿಶ್ವದ ಅತ್ಯಂತ ವೇಗದ ಮಹಿಳಾ ಬೌಲರ್ ಆಗಿರುವ ಜೂಲನ್ ಗೋಸ್ವಾಮಿ ರವರು ಕೆ ಎಲ್ ರಾಹುಲ್ ರವರಿಗೆ ಅಭ್ಯಾಸವನ್ನು ನಡೆಸಲು ಬೌಲಿಂಗ್ ಮಾಡುತ್ತಿದ್ದಾರೆ.

Kl | ಇಂಜುರಿ ಸಮಸ್ಯೆಯಿಂದ ಹೊರಗುಳಿದಿರುವ ರಾಹುಲ್ ಪ್ರಾಕ್ಟೀಸ್ ಮಾಡುತ್ತಿರುವುದು ಯಾವ ಮಹಿಳೆ ಜೊತೆ ಗೊತ್ತೇ?? ಈಕೆ ಸಾಮಾನ್ಯವಾದವಳಲ್ಲ.
ಇಂಜುರಿ ಸಮಸ್ಯೆಯಿಂದ ಹೊರಗುಳಿದಿರುವ ರಾಹುಲ್ ಪ್ರಾಕ್ಟೀಸ್ ಮಾಡುತ್ತಿರುವುದು ಯಾವ ಮಹಿಳೆ ಜೊತೆ ಗೊತ್ತೇ?? ಈಕೆ ಸಾಮಾನ್ಯವಾದವಳಲ್ಲ. 2

ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿದೆ. ಜರ್ಮನಿಯಲ್ಲಿ ಹರ್ನಿಯಾಗೆ ಚಿಕಿತ್ಸೆಯನ್ನು ಪಡೆದು ಅಭ್ಯಾಸವನ್ನು ನಡೆಸುತ್ತಿರುವ ಕೆ ಎಲ್ ರಾಹುಲ್ ಈ ವಾರ ನಡೆಯಲಿರುವ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದರೆ ಜುಲೈ 29 ರಂದು ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧ ಟಿ-ಟ್ವೆಂಟಿ ಸರಣಿಗೆ ಆಯ್ಕೆಯಾಗಲಿದ್ದಾರೆ. ಇದರ ಕುರಿತಂತೆ ನಿಮ್ಮ ಆಯ್ಕೆಯನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.