ಕೆ ಎಲ್ ರಾಹುಲ್ ಇರುವುದು ಒಬ್ಬನೇ ದುಷ್ಮನ್. ಈತನಿಂದಲೇ ತಂಡದಿಂದ ಬಹುತೇಕ ದೂರ ಉಳಿದಿದ್ದು. ಈ ಬಾರಿ ಕೂಡ ಸೋಲು ಕಂಡ ರಾಹುಲ್

ಕೆ.ಎಲ್.ರಾಹುಲ್ ಅವರು ಪ್ರಸ್ತುತ ಭಾರತ ಕ್ರಿಕೆಟ್ ತಂಡದ ಅಪ್ರತಿಮ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರು. ಈಗಿರುವ ಶ್ರೇಷ್ಠ ಮೂವರು ಬ್ಯಾಟ್ಸ್ಮನ್ ಗಳಲ್ಲಿ ಕೆ.ಎಲ್.ರಾಹುಲ್ ಸಹ ಒಬ್ಬರು. ಇವರು ಎಷ್ಟು ಅದ್ಭುತವಾಗಿ ಬ್ಯಾಟಿಂಗ್ ಮಾಡಿ ರನ್ಸ್ ಗಳಿಸುತ್ತಾರೆ ಎಂದು ನಾವು ಐಪಿಎಲ್ ಪಂದ್ಯಗಳಲ್ಲಿ ಹಾಗೂ ಭಾರತದ ಪರವಾಗಿ ಆಡಿರುವ ಅನೇಕ ಪಂದ್ಯಗಳಲ್ಲಿ ನೋಡಿದ್ದೇವೆ. ಆದರೆ ಅವರು ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ಭಾರತ ವರ್ಸಸ್ ಸೌತ್ ಆಫ್ರಿಕಾ ತಂಡದ ಸರಣಿ ಪಂದ್ಯಗಳನ್ನು ಮುನ್ನಡೆಸಬೇಕಿತ್ತು. ಆದರೆ ಅದೊಂದು ದುಷ್ಮನ್ ಇಂದ ಕೆ.ಎಲ್.ರಾಹುಲ್ ಅವರು ಈ ಪಂದ್ಯಗಳಿಂದ ದೂರ ಉಳಿಯುವ ಹಾಗಿದೆ.

ರಾಹುಲ್ ಅವರ ದುಷ್ಮನ್ ಮತ್ಯಾರು ಅಲ್ಲ, ಅವರ ಆರೋಗ್ಯ ಸಮಸ್ಯೆಗಳು, ರಾಹುಲ್ ಅವರಿಗೆ ಇಂಜುರಿ ಆಗಿರುವ ಕಾರಣ ಸೌತ್ ಆಫ್ರಿಕಾ ಸರಣಿ ಪಂದ್ಯಗಳನ್ನು ಮಿಸ್ ಮಾಡಿಕೊಂಡಿರುವ ರಾಹುಲ್, ಈಗ ಇಂಗ್ಲೆಂಡ್ ಪ್ರವಾಸದ ಸರಣಿಯನ್ನು ಸಹ ಮಿಸ್ ಮಾಡಿಕೊಳ್ಳಬಹುದು ಎನ್ನಲಾಗುತ್ತಿದೆ. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ನಲ್ಲಿ ಫಿಟ್ನೆಸ್ ಟೆಸ್ಟ್ ಮಾಡಿಸಿದ್ದು, ಈ ಟೆಸ್ಟ್ ನಲ್ಲಿ ಪಾಸ್ ಆದರೆ ಮಾತ್ರ ರಾಹುಲ್ ಅವರು ಪಂದ್ಯಗಳಲ್ಲಿ ಪಾಲ್ಗೊಳ್ಳಬಹುದು ಎನ್ನಲಾಗುತ್ತಿದೆ. ಈ ರೀತಿ ಗಾಯಗಳ ಸಮಸ್ಯೆಗಳಿಂದ ಅನೇಕ ಪಂದ್ಯಗಳನ್ನು ರಾಹುಲ್ ಅವರು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಗಾಯದ ಸಮಸ್ಯೆಗಳಿಂದಲೇ ರಾಹುಲ್ ಅವರು 7 ವರ್ಷಗಳಿಂದ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. 2014ರಲ್ಲಿ ಕೆ.ಎಲ್.ರಾಹುಲ್ ಅವರು ಪಂದ್ಯಗಳನ್ನು ಆಡಲು ಶುರು ಮಾಡಿದರು.

Rahul | ಕೆ ಎಲ್ ರಾಹುಲ್ ಇರುವುದು ಒಬ್ಬನೇ ದುಷ್ಮನ್. ಈತನಿಂದಲೇ ತಂಡದಿಂದ ಬಹುತೇಕ ದೂರ ಉಳಿದಿದ್ದು. ಈ ಬಾರಿ ಕೂಡ ಸೋಲು ಕಂಡ ರಾಹುಲ್
ಕೆ ಎಲ್ ರಾಹುಲ್ ಇರುವುದು ಒಬ್ಬನೇ ದುಷ್ಮನ್. ಈತನಿಂದಲೇ ತಂಡದಿಂದ ಬಹುತೇಕ ದೂರ ಉಳಿದಿದ್ದು. ಈ ಬಾರಿ ಕೂಡ ಸೋಲು ಕಂಡ ರಾಹುಲ್ 2

ಆದರೆ 2015 ರಲ್ಲಿ ಕಾಲಿನ ಗಾಯದಿಂದ ಬಾಂಗ್ಲಾದೇಶದ ಟೆಸ್ಟ್ ಪಂದ್ಯಗಳಿಂದ ಹೊರಬಿದ್ದಿದ್ದರು, 2016ರಲ್ಲಿ ಸ್ನಾಯು ಸೆಳೆತದಿಂದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭಾಗವಹಿಸಲು ಆಗಿರಲಿಲ್ಲ. 2017ರಲ್ಲಿ ಭುಜದ ಶಾಸ್ತ್ರಚಿಕಿತ್ಸೆಗೆ ಒಳಗಾದ ಕಾರಣ ಐಪಿಎಲ್ ಇಂದ ಔಟ್ ಆಗಿದ್ದರು. 2017ರಲ್ಲೇ ಅನಾರೋಗ್ಯದಿಂದ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದರು. 2021ರಲ್ಲಿ ಆಸ್ಟೇಲಿಯಾ ವಿರುದ್ಧದ ಟೆಸ್ಟ್ ಸರಣಿ ಇಂದ ಹೊರಗಿದ್ದರು. 2021ರಲ್ಲಿ ಎಡ ತೊಡೆಯ ನೋವಿನ ಕಾರಣದಿಂದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. 2022ರಲ್ಲಿ ಸ್ನಾಯು ಸೆಳೆತದಿಂದ ನ್ಯೂಜಿಲೆಂಡ್ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. 2022ರಲ್ಲಿ ತೊಡೆ ಸಂಧು ಗಾಯದ ಕಾರಣದಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ಈ ರೀತಿ ಆರೋಗ್ಯದ ಕಾರಣದಿಂದ ರಾಹುಲ್ ಅವರು ಪಂದ್ಯಗಳಿಂದ ಹೊರಗುಳಿಯುತ್ತಿದ್ದಾರೆ.

Comments are closed.