ಕನ್ನಡದಲ್ಲಿ ಸಾಧನೆ ಮಾಡಿರುವ ಮೇರು ನಟರ ಹೆಸರುಗಳನ್ನು ರಸ್ತೆಗಳಿಗೆ, ಆದರೆ ಅತಿ ಉದ್ದದ ರಸ್ತೆಯನ್ನು ಹೊಂದಿರುವ ಟಾಪ್ ನಟ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳ ಹೆಸರನ್ನು ಹಲವಾರು ಸ್ಮಾರಕಗಳಿಗೆ ಹಾಗೂ ರಸ್ತೆಗಳಿಗೆ ಇಡಲಾಗುತ್ತದೆ. ಅವರ ಹೆಸರಿನಲ್ಲಿ ಮೂರ್ತಿಗಳನ್ನು ಕೂಡ ಸ್ಥಾಪನೆ ಮಾಡಲಾಗುತ್ತದೆ. ಇವತ್ತಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ನಮ್ಮ ರಾಜ್ಯದಲ್ಲಿರುವ ಹಲವಾರು ರಸ್ತೆಗಳಿಗೆ ನಮ್ಮ ಕನ್ನಡದ ಧೀಮಂತ ನಟರ ಹೆಸರನ್ನು ಇಡಲಾಗಿದೆ.

ಈ ಸಾಲಿನಲ್ಲಿ ಅಣ್ಣಾವ್ರು ವಿಷ್ಣುವರ್ಧನ್ ಅಂಬರೀಶ್ ಪುನೀತ್ ರಾಜಕುಮಾರ್ ಹೀಗೆ ಹಲವಾರು ನಟರ ಹೆಸರು ಸೇರಿದೆ. ಆದರೆ ಇವರಲ್ಲಿ ಯಾವ ನಟರ ಹೆಸರಿನಲ್ಲಿ ಅತ್ಯಂತ ಉದ್ದದ ರಸ್ತೆ ಇದೆ ಎನ್ನುವುದನ್ನು ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ. ಹಾಗಿದ್ದರೆ ಈ ಸಾಲಿನಲ್ಲಿ ಯಾವೆಲ್ಲ ನಟರು ಇದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

rajkumar | ಕನ್ನಡದಲ್ಲಿ ಸಾಧನೆ ಮಾಡಿರುವ ಮೇರು ನಟರ ಹೆಸರುಗಳನ್ನು ರಸ್ತೆಗಳಿಗೆ, ಆದರೆ ಅತಿ ಉದ್ದದ ರಸ್ತೆಯನ್ನು ಹೊಂದಿರುವ ಟಾಪ್ ನಟ ಯಾರು ಗೊತ್ತೇ??
ಕನ್ನಡದಲ್ಲಿ ಸಾಧನೆ ಮಾಡಿರುವ ಮೇರು ನಟರ ಹೆಸರುಗಳನ್ನು ರಸ್ತೆಗಳಿಗೆ, ಆದರೆ ಅತಿ ಉದ್ದದ ರಸ್ತೆಯನ್ನು ಹೊಂದಿರುವ ಟಾಪ್ ನಟ ಯಾರು ಗೊತ್ತೇ?? 3

ಮೊದಲಿಗೆ ನೋಡುವುದಾದರೆ ಕನ್ನಡ ಚಿತ್ರರಂಗದ ಮೇರು ನಟ ಡಾಕ್ಟರ್ ರಾಜಕುಮಾರ್ ರವರ ಹೆಸರಿನಲ್ಲಿ ಹಲವಾರು ರಸ್ತೆಗಳಿವೆ. ಅವರು ಕನ್ನಡ ಚಿತ್ರರಂಗಕ್ಕಾಗಿ ಮಾಡಿರುವ ಸಾಧನೆ ಒಂದೆರಡಲ್ಲ. ಕನ್ನಡ ಚಿತ್ರರಂಗದ ದೇವರು ಎನ್ನುವುದಾಗಿ ಅವರನ್ನು ನಾವು ಕರೆಯುತ್ತೇವೆ. ನಟಸಾರ್ವಭೌಮ ರಾಜಕುಮಾರ್ ರವರ ಹೆಸರಿನಲ್ಲಿ ಇರುವ ರಾಜಾಜಿನಗರದ ಬಳಿಯ ರಾಜಕುಮಾರ್ ರಸ್ತೆ ಆರು ಕಿಲೋಮೀಟರ್ ಉದ್ದ ಇದೆ. ಇದು ರಾಜಕುಮಾರರವರ ಹೆಸರಿನಲ್ಲಿರುವ ರಸ್ತೆಗಳ ಪೈಕಿ ಯಲ್ಲಿಯೇ ಅತ್ಯಂತ ಉದ್ದದ ರಸ್ತೆ ಎಂದು ಹೇಳಬಹುದಾಗಿದೆ.

ನಂತರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿರುವ ರಸ್ತೆ ಕಂಡುಬರುತ್ತದೆ. ಇತ್ತೀಚಿಗಷ್ಟೇ ಕರ್ನಾಟಕರತ್ನ ಪ್ರಶಸ್ತಿಗೂ ಕೂಡ ಮರಣೋತ್ತರವಾಗಿ ಭಾಜನರಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಅಕಾಲಿಕವಾಗಿ ಮರಣ ಹೊಂದಿರುವುದು ಇಡೀ ಕರ್ನಾಟಕ ಸೇರಿದಂತೆ ಭಾರತವೇ ಕಣ್ಣೀರಿಟ್ಟಿತು. ನಿಜಕ್ಕೂ ಕೂಡ ಒಬ್ಬ ಧೀಮಂತ ನಟ ಮಾತ್ರವಲ್ಲದೆ ಸಾಮಾಜಿಕ ಕಳಕಳಿ ಹೊಂದಿರುವ ಪ್ರಜ್ಞಾವಂತ ನಾಗರಿಕ ಕೂಡ ಆಗಿದ್ದರು.

ಅವರನ್ನು ಕಳೆದುಕೊಂಡಿರುವುದು ನಿಜಕ್ಕೂ ಕೂಡ ಕನ್ನಡ ಚಿತ್ರರಂಗಕ್ಕೆ ಸೇರಿದಂತೆ ಮನುಕುಲಕ್ಕೆ ತುಂಬಲಾರದ ನಷ್ಟವಾಗಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣಾನಂತರ ಮೈಸೂರ್ ರೋಡ್ ನ ನಾಯಂಡಳ್ಳಿ ಜಂಕ್ಷನ್ ನಿಂದ ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಮಾಲ್ ತನಕ ಇರುವ ರಸ್ತೆಯನ್ನು ಕರ್ನಾಟಕ ರತ್ನ ಡಾ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರಸ್ತೆ ಎಂಬುದಾಗಿ ನಾಮಕರಣ ಮಾಡಲಾಗಿದ್ದು ಇದರ ಉದ್ದ ಬರೋಬ್ಬರಿ 12 ಕಿಲೋಮೀಟರ್ ಇದೆ.

ಇನ್ನು ಯಾವುದಾದರೂ ನಟನ ಹೆಸರಿನಲ್ಲಿ ಅತ್ಯಂತ ಉದ್ದದ ರಸ್ತೆ ಇದೆ ಎಂದರೆ ಅದು ನಮ್ಮೆಲ್ಲರ ನೆಚ್ಚಿನ ಅಭಿನಯ ಭಾರ್ಗವ ಡಾ ಸಾಹಸಸಿಂಹ ವಿಷ್ಣುವರ್ಧನ್ ರವರ ಹೆಸರಿನಲ್ಲಿದೆ. ಇಡೀ ಏಷ್ಯಾ ಹಾಗೂ ದೇಶದಲ್ಲಿ ಅತ್ಯಂತ ಉದ್ದನೆಯ ರಸ್ತೆಗೆ ತನ್ನ ಹೆಸರನ್ನು ಹೊಂದಿರುವ ನಟರ ಪ್ರೀತಿಯಲ್ಲಿ ವಿಷ್ಣುವರ್ಧನ್ ರವರು ಮೊದಲನೇ ಸ್ಥಾನದಲ್ಲಿ ಕಂಡುಬರುತ್ತಾರೆ. 14.5 ಕಿಲೋಮೀಟರ್ ಉದ್ದನೆಯ ಬನಶಂಕರಿಯಿಂದ ಕೆಂಗೇರಿ ಗೆ ಹೋಗುವ ರೋಡ್ ಅನ್ನು ವಿಷ್ಣುವರ್ಧನ್ ರವರ ಹೆಸರಿನಲ್ಲಿ 2014 ರಲ್ಲಿ ಉದ್ಘಾಟನೆ ಮಾಡಲಾಯಿತು. ಇದು ನಿಜಕ್ಕೂ ಕೂಡ ಕನ್ನಡದ ಹೆಮ್ಮೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

vishnuvardhan 2 | ಕನ್ನಡದಲ್ಲಿ ಸಾಧನೆ ಮಾಡಿರುವ ಮೇರು ನಟರ ಹೆಸರುಗಳನ್ನು ರಸ್ತೆಗಳಿಗೆ, ಆದರೆ ಅತಿ ಉದ್ದದ ರಸ್ತೆಯನ್ನು ಹೊಂದಿರುವ ಟಾಪ್ ನಟ ಯಾರು ಗೊತ್ತೇ??
ಕನ್ನಡದಲ್ಲಿ ಸಾಧನೆ ಮಾಡಿರುವ ಮೇರು ನಟರ ಹೆಸರುಗಳನ್ನು ರಸ್ತೆಗಳಿಗೆ, ಆದರೆ ಅತಿ ಉದ್ದದ ರಸ್ತೆಯನ್ನು ಹೊಂದಿರುವ ಟಾಪ್ ನಟ ಯಾರು ಗೊತ್ತೇ?? 4

ಇನ್ನು ಮಾಧವ ರಾವ್ ಸರ್ಕಲ್ ನಿಂದ ನಾಗಸಂದ್ರದ ವರೆಗೆ ಇರುವ ರಸ್ತೆಯನ್ನು ಪಾರ್ವತಮ್ಮ ರಾಜಕುಮಾರ್ ಅವರ ಹೆಸರಿನಲ್ಲಿ ಕೂಡ ನಾಮಕರಣ ಮಾಡಲಾಗಿದೆ. ಹೀಗೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಇನ್ನೂ ಹಲವಾರು ಖ್ಯಾತನಾಮರು ಹೆಸರನ್ನು ರಸ್ತೆಗೆ ಅವರ ಗೌರವಪೂರ್ವಕವಾಗಿ ಇಡಲಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮರೆಯಬೇಡಿ.

Comments are closed.