RCB 2023: ರಾಜಸ್ತಾನ್ ವಿರುದ್ಧ ಏನೋ ಗೆದ್ದು ಬಿಟ್ರು- ಆದರೆ ಪ್ಲೇ ಆಫ್ ಗೆ ಹೋಗಬೇಕು ಎಂದರೆ ಏನು ಮಾಡಬೇಕು ಗೊತ್ತೇ? ಆರ್ಸಿಬಿ ಗೆ ಇರುವುದು ಒಂದೇ ದಾರಿ.
RCB 2023: ಐಪಿಎಲ್ (IPL) ಪಂದ್ಯಗಳು ರೋಚಕತೆಯಿಂದ ಸಾಗುತ್ತಿದ್ದು, ಪ್ರತಿ ಪಂದ್ಯವು ಕುತೂಹಲ ಕೆರಳಿಸುತ್ತಿದೆ. ಹಾಗೆಯೇ ಪ್ಲೇ ಆಫ್ಸ್ ತಲುಪುವ ತಂಡ ಯಾವುದು ಎಂದು ಕುತೂಹಲವನ್ನು ಮೂಡಿಸುತ್ತಿದೆ. ನಿನ್ನೆ ನಡೆದ ಆರ್ಸಿಬಿ ವರ್ಸಸ್ ಆರ್.ಆರ್ (RCB vs RR) ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಆರ್ಸಿಬಿ (RCB), 112 ರನ್ ಗಳ ಅದ್ಭುತವಾದ ಜಯ ದಾಖಲಿಸಿಕೊಂಡಿದ್ದು, 12 ಅಂಕಗಳ ಮೂಲಕ ಪಾಯಿಂಟ್ಸ್ ಟೇಬಲ್ ನಲ್ಲಿ 5ನೇ ಸ್ಥಾನದಲ್ಲಿದೆ.
ನಿನ್ನೆ ಸಿಕ್ಕ ದೊಡ್ಡ ಅಂತರದ ಜಯದಿಂದ ಆರ್ಸಿಬಿ ತಂಡದ ರನ್ ರೇಟ್ ಇಂಪ್ರೂವ್ ಆಗಿದ್ದು, ಇದರಿಂದ ಆರ್ಸಿಬಿ ತಂಡ ಪ್ಲೇ ಆಫ್ಸ್ ತಲುಪುವ ಕನಸು ಜೀವಂತವಾಗಿದೆ. ಆದರೆ ಇದಕ್ಕೆ ಇರುವುದು ಒಂದೇ ಒಂದು ದಾರಿ, ಪ್ಲೇಆಫ್ಸ್ ತಲುಪುವ ನಾಲ್ಕು ತಂಡಗಳ ಸ್ಥಾನಕ್ಕೆ ಭಾರಿ ಪೈಪೋಟಿ ಇದೆ. ಆರ್ಸಿಬಿ ತಂಡಕ್ಕೆ ಲೀಗ್ ಹಂತದಲ್ಲಿ ಉಳಿದಿರುವುದು ಇನ್ನು ಎರಡು ಪಂದ್ಯಗಳು. ಎಸ್.ಆರ್.ಹೆಚ್ ವಿರುದ್ಧ ಒಂದು ಪಂದ್ಯ, ಜಿಟಿ ವಿರುದ್ಧ ಒಂದು ಪಂದ್ಯ.. ಇದನ್ನು ಓದಿ..RCB 2023: ಮೊದಲು ಈತನೊಬ್ಬನನ್ನು ಹೊರಹಾಕಿದರೆ ಪಕ್ಕ ಆರ್ಸಿಬಿ ಗೆಲ್ಲುತ್ತಿದೆ: ಈತನೇ ಸೋಲಿಗೆ ನೇರ ಕಾರಣ ಎಂದ ಫ್ಯಾನ್ಸ್. ಯಾರಂತೆ ಗೊತ್ತೇ?
ಈ ಎರಡು ಪಂದ್ಯಗಳಲ್ಲು ಆರ್ಸಿಬಿ ತಂಡ ಗೆದ್ದರೆ 16 ಅಂಕಗಳು ಬರುತ್ತದೆ. ಆದರೆ ಅದು ಸಾಕಾಗುವುದಿಲ್ಲ. ಆರ್ಸಿಬಿ ತಂಡ ಉತ್ತಮವಾದ ಅಂತರದಲ್ಲಿ ಗೆಲ್ಲಬೇಕು. ಆಗ ಮಾತ್ರ ಪ್ಲೇಆಫ್ಸ್ ಗೆ ತಲುಪುವ ಸಾಧ್ಯತೆ ಇರುತ್ತದೆ. ಏಕೆಂದರೆ ಲೀಗ್ ಹಂತ ಮುಗಿಯುವ ವೇಳೆಗೆ ಆರ್ಸಿಬಿ, ಮುಂಬೈ ಇಂಡಿಯನ್ಸ್, ಪಂಜಾಬ್ ತಂಡಗಳು ಕೂಡ 16 ಅಂಕ ಪಡೆದುಕೊಂಡಿರುತ್ತದೆ ಎಂದು ಊಹಿಸಿದರೆ ಆಗ ನೆಟ್ ರನ್ ರೇಟ್ ಅನ್ನು ಪರಿಗಣಿಸುತ್ತಾರೆ.
ನಿನ್ನೆಯ ಅದ್ಭುತ ಗೆಲುವಿನ ಬಳಿಕ ಆರ್ಸಿಬಿ ತಂಡದ ನೆಟ್ ರನ್ ರೇಟ್ ಅದ್ಭುತವಾಗಿ ಇಂಪ್ರೂವ್ ಆಗಿದೆ. ಇದೇ ರೀತಿ ಒಳ್ಳೆಯ ಅಂತರಗಳಲ್ಲಿ ಇನ್ನುಳಿದ ಪಂದ್ಯಗಳನ್ನು ಗೆದ್ದರೆ ಮಾತ್ರ ಆರ್ಸಿಬಿ ತಂಡ ಪ್ಲೇಆಫ್ಸ್ ತಲುಪಬಹುದು. ನಿನ್ನೆಯ ಭರ್ಜರಿ ಯಶಸ್ಸಿನಿಂದ ಗೆಲುವಿನ ಲಯ ಕಂಡುಕೊಂಡಿರುವ ಆರ್ಸಿಬಿ ತಂಡ ಅದನ್ನೇ ಇನ್ನೆರಡು ಪಂದ್ಯಗಳಲ್ಲಿ ಮುಂದುವರೆಸುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Business Idea: ಇದೊಂದು ಕೆಲಸ ಮಾಡಿದರೆ ಸಾಕು, ತಿಂಗಳಿಗೆ ಕನಿಷ್ಠ 50 ಸಾವಿರ ಖಚಿತ. ನೀವೇ ಬಾಸ್ ಮೆರೆದಂತೆ ಮೆರೆಯಬಹುದು. ಹೇಗೆ ಗೊತ್ತೇ??
Comments are closed.