RCB: ಆರ್ಸಿಬಿ ತಂಡದ ಈ ಬೌಲರ್ ಐಪಿಎಲ್ ಆದಮೇಲೆ ನಿವೃತ್ತಿ ತೆಗೆದುಕೊಳ್ಳುವುದು ಬಹುತೇಕ ಖಚಿತ. ಯಾರು ಗೊತ್ತೇ?? ಆರ್ಸಿಬಿ ತಂಡ ಕೂಡ ಹೊರದಬ್ಬುವುದು ಖಚಿತ.
RCB: ನಮ್ಮ ಭಾರತ ತಂಡದ ಈ ಆಟಗಾರ ಈಗ ಕಳಪೆ ಫಾರ್ಮ್ ಇಂದ ಬಳಲುತ್ತಿದ್ದಾರೆ. ಎದುರಾಳಿ ತಂಡಕ್ಕೆ ಹೆಚ್ಚು ರನ್ಸ್ ಗಳನ್ನು ಬಿಟ್ಟುಕೊಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಇವರನ್ನು ಈಗಾಗಲೇ ಟೀಮ್ ಇಂಡಿಯಾದಿಂದ (Team India) ಕೈಬಿಡಲಾಗಿದೆ. ಇದೀಗ ಐಪಿಎಲ್ (IPL) ನಲ್ಲಿ ಕೂಡ ಇದೇ ಕಳಪೆ ಫಾರ್ಮ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ನಮ್ಮ ಆರ್ಸಿಬಿ ತಂಡದ ಈ ಆಟಗಾರನ ಸ್ಥಿತಿ ಸುಧಾರಿಸುತ್ತಿಲ್ಲ.
ನ್ಯಾಷನಲ್ ಟೀಮ್ ಕೈಬಿಟ್ಟಿರುವಾಗ ಐಪಿಎಲ್ ನಲ್ಲಿ ಸಿಗುತ್ತಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೆ, ಕಳಪೆ ಪ್ರದರ್ಶನವನ್ನೇ ಮುಂದುವರೆಸುತ್ತಾ, ಕೆರಿಯರ್ ಗೆ ಆಪತ್ತು ತಂದುಕೊಳ್ಳುತ್ತಿದ್ದಾರೆ. ಇದರಿಂದ ಆರ್ಸಿಬಿ ತಂಡಕ್ಕೆ ಇವರು ಮುಳುವಾಗಿ ಪರಿಣಮಿಸಬಹುದು ಎಂದು ಹೇಳಲಾಗುತ್ತಿದೆ. ಆ ಆಟಗಾರ ಮತ್ಯಾರು ಅಲ್ಲ, ನ್ಯಾಷನಲ್ ಟೀಮ್ ನಲ್ಲಿ ಹಾಗೂ ಆರ್ಸಿಬಿ ತಂಡದಲ್ಲಿ ವೇಗಿಯಾಗಿ ಹೆಸರು ಮಾಡಿದ್ದ ಹರ್ಷಲ್ ಪಟೇಲ್ (Harshal Patel) ಅವರು.
ಕಳೆದ ವರ್ಷದಿಂದಲು ಕಳಪೆ ಫಾರ್ಮ್ ನಲ್ಲಿರುವ ಇವರನ್ನು ಟೀಮ್ ಇಂಡಿಯಾದಿಂದ ಹೊರಾಗಿಡಲಾಗಿದೆ. ಆರ್ಸಿಬಿ ತಂಡ ಇವರ ಮೇಲೆ ನಂಬಿಕೆ ಇಟ್ಟು ರೀಟೇನ್ ಮಾಡಿಕೊಂಡಿತ್ತು. ಆದರೆ ಅದನ್ನು ಇವರು ಉಳಿಸಿಕೊಂಡಿಲ್ಲ. ಐಪಿಎಲ್ ನಲ್ಲಿ ಕಳೆದ 8 ಇನ್ನಿಂಗ್ಸ್ ಗಳಲ್ಲಿ 29.5ಪ್ ಸರಾಸರಿ, 9.94 ಎಕಾನಮಿಯಲ್ಲಿ ಬೌಲಿಂಗ್ ಮಾಡಿ, ಬರೋಬ್ಬರಿ 295 ರನ್ಸ್ ಗಳನ್ನು ಬಿಟ್ಟುಕೊಟ್ಟಿದ್ದಾರೆ. ಇದೇ ಪಂದ್ಯಗಳಲ್ಲಿ 10 ವಿಕೆಟ್ಸ್ ಪಡೆದಿದ್ದಾರೆ. ಆದರೆ ಇಷ್ಟು ರನ್ಸ್ ಕೊಟ್ಟು ದುಬಾರಿ ಆಗಿರುವುದನ್ನು ಸಹ ನೆನಪಿಡಬೇಕಿದೆ.
ಟೀಮ್ ಇಂಡಿಯಾದಲ್ಲಿ ಸಹ ಇದೇ ರೀತಿ ಆಗಿತ್ತು, ನ್ಯಾಶನಲ್ ಟೀಮ್ ಗಾಗಿ ಇದುವರೆಗೂ 25 ಟಿ20 ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ ಇವರು ಪಡೆದಿದ್ದು ಕೇವಲ 29 ವಿಕೆಟ್ಸ್ ಮಾತ್ರ ಆಗಿದೆ. ಹಿಂದಿನ 12 ಟಿ20 ಇಂಟರ್ನ್ಯಾಷನಲ್ ಪಂದ್ಯಗಳಲ್ಲಿ 5 ಕ್ಕಿಂತ ಹೆಚ್ಚು ಸಾರಿ 40ಕ್ಕಿಂತ ಜಾಸ್ತಿ ರನ್ಸ್ ಬಿಟ್ಟುಕೊಟ್ಟಿದ್ದಾರೆ. ಹೀಗೆ ಕಳಪೆ ಪ್ರದರ್ಶನ ನೀಡುತ್ತಾ, ಹರ್ಷಲ್ ಅವರು ಉತ್ತಮ ಫಾರ್ಮ್ ನಲ್ಲಿ ಇಲ್ಲದ ಕಾರಣ ಅವರು ಈ ಐಪಿಎಲ್ ನಂತರ ರಿಟೈರ್ ಆಗಬಹುದು ಎನ್ನಲಾಗುತ್ತಿದೆ.
Comments are closed.