Virat Kohli: ಮೊದಲ ಬಾರಿಗೆ ಸ್ವಂತ ತಂಡದ ಆಟಗಾರರ ಮೇಲೆ ತಾಳ್ಮೆ ಕಳೆದುಕೊಂಡ ವಿರಾಟ್ ಕೊಹ್ಲಿ: ಅಸಮಾಧಾನವಾಗಿ ಹೇಳಿದ್ದೇನು ಗೊತ್ತೇ??

Virat Kohli: ಐಪಿಎಲ್ (IPL) ನಲ್ಲಿ ನಮ್ಮ ಆರ್ಸಿಬಿ (RCB) ತಂಡದ ಮತ್ತೆ ಸೋತಿದೆ. ಎರಡು ಪಂದ್ಯಗಳನ್ನು ಗೆದ್ದು ಉತ್ತಮ ಫಾರ್ಮ್ ನಲ್ಲಿದ್ದ ಆರ್ಸಿಬಿ ತಂಡ ಮೊನ್ನೆ ಕೆಕೆಆರ್ (KKR) ವಿರುದ್ಧ ನಡೆದ ಪಂದ್ಯದಲ್ಲಿ ಹೀನಾಯವಾಗಿ ಸೋತಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರು ವಿಭಾಗದಲ್ಲಿ ಕೂಡ ಆರ್ಸಿಬಿ ತಂಡ ಕಳಪೆ ಪ್ರದರ್ಶನ ನೀಡಿದೆ. ಮಧ್ಯಮ ಕ್ರಮಾಂಕದಲ್ಲಿ ಬರುವ ಬ್ಯಾಟ್ಸ್ಮನ್ ಗಳು ಉತ್ತಮ ಪ್ರದರ್ಶನ ನೀಡದೆ ವಿಫಲರಾಗುತ್ತಿದ್ದಾರೆ.

virat kohli after kkr match | Virat Kohli: ಮೊದಲ ಬಾರಿಗೆ ಸ್ವಂತ ತಂಡದ ಆಟಗಾರರ ಮೇಲೆ ತಾಳ್ಮೆ ಕಳೆದುಕೊಂಡ ವಿರಾಟ್ ಕೊಹ್ಲಿ: ಅಸಮಾಧಾನವಾಗಿ ಹೇಳಿದ್ದೇನು ಗೊತ್ತೇ??
Virat Kohli: ಮೊದಲ ಬಾರಿಗೆ ಸ್ವಂತ ತಂಡದ ಆಟಗಾರರ ಮೇಲೆ ತಾಳ್ಮೆ ಕಳೆದುಕೊಂಡ ವಿರಾಟ್ ಕೊಹ್ಲಿ: ಅಸಮಾಧಾನವಾಗಿ ಹೇಳಿದ್ದೇನು ಗೊತ್ತೇ?? 2

ಬೌಲಿಂಗ್ ವಿಭಾಗದಲ್ಲಿ ವನಿಂದು ಹಸರಂಗ (Wanindu Hasaranga) ಹಾಗೂ ಮೊಹಮ್ಮದ್ ಸಿರಾಜ್ (Mohammad Siraj) ಉತ್ತಮ ಪ್ರದರ್ಶನ ನೀಡಿ, ವಿಕೆಟ್ಸ್ ಪಡೆದರು. ಆದರೆ ಫೀಲ್ಡಿಂಗ್ ನಲ್ಲಿ ಬಹಳಷ್ಟು ಕ್ಯಾಚ್ ಗಳನ್ನು ಬಿಡುವ ಹಾಗಾಯಿತು. ಬ್ಯಾಟಿಂಗ್ ನಲ್ಲಿ ಕೂಡ ಆರಂಭಿಕ ಹಾಗೂ ಮಧ್ಯಮ ಕ್ರಮಾಂಕದ ಎಲ್ಲಾ ಆಟಗಾರರು ಕೂಡ ವೈಫಲ್ಯ ಅನುಭವಿಸಿದರು. ಈ ಸೋಲಿನ ಬಳಿಕ ಪ್ರಸ್ತುತ ಕ್ಯಾಪ್ಟನ್ಸಿ ಜವಾಬ್ದಾರಿ ಹೊತ್ತು, ತಂಡವನ್ನು ಮುನ್ನಡೆಸುತ್ತಿರುವ ಕ್ಯಾಪ್ಟನ್ ವಿರಾಟ್ ಕೊಹ್ಲಿ (Virat Kohli) ಅವರು ತಂಡದ ಮೇಲೆ ಮೊದಲ ಬಾರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ..

ಇದನ್ನು ಓದಿ: Yuvaraj Singh: ಹಲವಾರು ವರ್ಷಗಳ ಬಳಿಕ ಯುವರಾಜ್ ಸಿಂಗ್ ಸ್ಥಾನವನ್ನು ತುಂಬುವ ಆಟಗಾರ ಸಿಕ್ಕೇಬಿಟ್ಟನೇ?? ಯಪ್ಪಾ ಈತನೇ ಮುಂದಿನ ಯುವರಾಜ್. ಯಾರು ಗೊತ್ತೇ?

ಫೀಲ್ಡರ್ ಗಳು ಉತ್ತಮ ಪ್ರದರ್ಶನ ನೀಡಲಿಲ್ಲ ಎಂದಿದ್ದಾರೆ ಕೊಹ್ಲಿ, ಪಂದ್ಯ ಮುಗಿದ ನಂತರ ವಿರಾಟ್ ಕೊಹ್ಲಿ ಅವರು ಹೇಳಿದ್ದು ಹೀಗೆ, “ನಿಜವಾಗಿಯೂ ಹೇಳಬೇಕು ಎಂದರೆ, ಈ ಪಂದ್ಯವನ್ನು ನಮ್ಮ ಕೈಯಾರೆ ನಾವೇ ಅವರಿಗೆ ಕೊಟ್ಟೆವು, ಈ ಸೋಲು ಕಾಣಲು ನಾವು ಅರ್ಹರು. ನಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಇದಾಗಿರಲಿಲ್ಲ, ನಮಗೆ ಸಿಕ್ಕ ಅವಕಾಶವನ್ನು ನಾವು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಕೆಲವು ಕ್ಯಾಚ್ ಗಳನ್ನು ಹಿಡಿಯದೆ ಬಿಟ್ಟಿದ್ದು. 25 ರಿಂದ 30 ರನ್ ಗಳನ್ನು ಹೆಚ್ಚುವರಿಯಾಗಿ ಕೊಟ್ಟಿದ್ದು ನಮಗೆ ತೊಂದರೆಯಾಯಿತು.

ಒಳ್ಳೆಯ ಫೌಂಡೇಶನ್ ಹಾಕಿದರು ಸಹ ಸೋಲುವ ಹಾಗೆ ಆಯಿತು. ಅವು ವಿಕೆಟ್ ಕೊಡುವಂಥ ಬಾಲ್ ಗಳಾಗಿರಲಿಲ್ಲ, ಹಾಗಿದ್ದರು ಫೀಲ್ಡರ್ ಗಳಿಗೆ ವಿಕೆಟ್ಸ್ ಕೊಟ್ಟೆವು. ಸ್ಕೋರ್ ಬೋರ್ಡ್ ರನ್ ಜಾಸ್ತಿ ಮಾಡುವುದು ಹೀಗಲ್ಲ, ವಿಕೆಟ್ಸ್ ಹೋಗುತ್ತಿದ್ದರು ಕೂಡ ಒಂದು ಜೊತೆಯಾಟ ಬರಬೇಕು, ಹಾಗೆ ಆಗಿದ್ದರೆ ಈ ಪಂದ್ಯ ನಮ್ಮದೇ ಆಗಿರುತ್ತಿತ್ತು, ನಮ್ಮ ಹೋಮ್ ಟೌನ್ ನಲ್ಲಿ ಗೆಲ್ಲಲು ಒಂದು ಪಾರ್ಟ್ನರ್ಶಿಪ್ ಬೇಕಾಗುತ್ತದೆ..” ಎಂದು ಹೇಳುವ ಮೂಲಕ ತಂಡದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ ಕ್ಯಾಪ್ಟನ್ ವಿರಾಟ್ ಕೊಹ್ಲಿ.

ಇದನ್ನು ಓದಿ: Business Idea: ನೀವು ಹೊಸ ವ್ಯಾಪಾರ ಮಾಡುವ ಆಲೋಚನೆ ಇದ್ದರೇ, ಕಡಿಮೆ ಬಂಡವಾಳದಲ್ಲಿ ಕನಿಷ್ಠ 40 ಸಾವಿರ ಗಳಿಸುವ ಉದ್ಯಮ ಯಾವುದು ಗೊತ್ತೇ?

Comments are closed.