Shani Remedies: ಯಾವುದಾದರೂ ಶನಿವಾರ ಇದೊಂದು ಚಿಕ್ಕ ಒಳ್ಳೆಯ ಕೆಲಸ ಮಾಡಿ ನೋಡಿ, ಶನಿ ದೇವನೇ ನಿಮ್ಮನ್ನು ಕಾಪಾಡಲಿದ್ದಾನೆ. ಏನು ಮಾಡಬೇಕು ಗೊತ್ತೇ?
Shani Remedies: ಶನಿದೇವನನ್ನು ಕರ್ಮಫಲದಾತ ಎನ್ನುತ್ತಾರೆ. ಪ್ರತಿ ವ್ಯಕ್ತಿ ಮಾಡುವ ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಮೇಲೆ ಶನಿದೇವರು ಪ್ರತಿ ವ್ಯಕ್ತಿಯ ಕರ್ಮಫಲ ನೀಡುತ್ತಾನೆ. ಕೆಲವು ರಾಶಿಗಳ ಮೇಲೆ ಶನಿದೇವರ ವಕ್ರದೃಷ್ಟಿ ಇದ್ದಾಗ ಅವರು ಬಹಳಷ್ಟು ಕಷ್ಟಗಳನ್ನು ಸಹ ಅನುಭವಿಸುತ್ತಾರೆ. ಒಂದು ವೇಳೆ ಆ ರೀತಿಯ ಕಷ್ಟ ಎದುರಾದರೆ, ಶನಿವಾರದ ದಿವಸ ನೀವು ಈ ಕೆಲವು ಸಣ್ಣ ಕೆಲಸಗಳನ್ನು ಮಾಡಿ, ಅದರಿಂದ ಶನಿದೇವರೇ ಎಲ್ಲಾ ಕಷ್ಟಗಳಿಂದ ನಿಮ್ಮನ್ನು ಕಾಪಾಡುತ್ತಾನೆ.
*ಶನಿವಾರದ ದಿನ ರಾತ್ರಿ ಪೆನ್ ಇಂದ ಭೂತಪತ್ರದ ಮೇಲೆ ಓಂ ಹ್ವೀನ್ ಮಂತ್ರ ಬರೆದು, ಪ್ರತಿದಿನ ತಪ್ಪದೇ ಮಂತ್ರವನ್ನು ಪೂಜೆ ಮಾಡಿ.. ಶನಿವಾರದ ದಿವಸ ಸೂರ್ಯಾಸ್ತ ಆಗುವ ಸಮಯದಲ್ಲಿ ಮಧ್ಯದ ಬೆರಳಿಗೆ ಉಂಗುರ ಧರಿಸಿ, ಹೀಗೆ ಮಾಡುವುದರಿಂದ ಶನಿದೇವರ ಕೋಪದ ದೃಷ್ಟಿಯಿಂದ ಪಾರಾಗಬಹುದು.
*ಶನಿವಾರದ ದಿನ ಶನಿದೇವರಿಗೆ ಪೂಜೆ ಮಾಡುವುದರಿಂದ, ಶನಿದೇವರ ಅಮಂಗಳಕರ ದೃಷ್ಟಿ ಸಹ ದೂರವಾಗುತ್ತದೆ. ಇದರಿಂದ ನಿಮಗೆ ಹೆಚ್ಚು ಜ್ಞಾನ ಮತ್ತು ಬುದ್ಧಿವಂತಿಕೆ ಎರಡನ್ನು ಕೂಡ ದೇವರು ಕರುಣಿಸುತ್ತಾನೆ. ಶನಿದೇವರನ್ನು ಭಕ್ತಿಯಿಂದ ಪೂಜೆ ಮಾಡಿದರೆ, ನಿಮಗೆ ಒಳ್ಳೆಯದಾಗುತ್ತದೆ.
*ಶನಿದೋಷಗಳು ನಿವಾರಣೆ ಆಗಬೇಕು ಎಂದರೆ, ರೊಟ್ಟಿಯನ್ನು ಶನಿವಾರದ ದಿನ ಕಪ್ಪು ನಾಯಿ ಮತ್ತು ಕಪ್ಪು ಹಸುವಿಗೆ ನೀಡಿ, ಹಾಗೂ ಹಕ್ಕಿಗಳಿಗೆ ಆಹಾರ ಹಾಕಿ. ಹಾಗೆಯೇ ನಿಮ್ಮ ಎಲ್ಲಾ ಕೆಟ್ಟ ಕೆಲಸಗಳಿಂದ ಮುಕ್ತಿ ಕೂಡ ಸಿಗುತ್ತದೆ.
*ನಿಮ್ಮ ಕೆಲಸದಲ್ಲಿ ಏಳಿಗೆ ಕಾಣಬೇಕು ಎಂದರೆ ಶನಿವಾರದ ದಿನ ಇರುವೆಗಳಿಗೆ ಹಿಟ್ಟು, ಹಾಗೂ ಮೀನುಗಳಿಗೆ ಧಾನ್ಯ ತಿನ್ನಿಸಿ, ಇದರಿಂದ ನಿಮಗೆ ಶನಿದೇವರ ಆಶೀರ್ವಾದ ಸಿಗುತ್ತದೆ.. ಹೀಗೆ ಮಾಡಿದರೆ ಕೆಲಸದಲ್ಲಿ ಏಳಿಗೆ ಕಾಣುತ್ತೀರಿ.
*ಶನಿವಾರದ ದಿವರ ಶನಿದೇವರು ಇಷ್ಟಪಡುವ ವಸ್ತುಗಳು, ಕಪ್ಪು ಎಳ್ಳು, ಕಪ್ಪು ಬಟ್ಟೆ, ಕಬ್ಬಿಣ ಇದನ್ನೆಲ್ಲ ದಾನ ಕೊಡಿ.. ಶನಿವಾರದ ದಿನ ಬೆಳಗ್ಗೆ ಸ್ನಾನ ಮಾಡಿದ ನಂತರ ಅರಳಿಮರಕ್ಕೆ ನೀರು ಹಾಕಿ, ಬಳಿಕ 7 ಸಾರಿ ಪ್ರದಕ್ಷಿಣೆ ಹಾಕಿ. ಸೂರ್ಯಾಸ್ತವಾದ ನಂತರ 7 ಸಾರಿ ಪ್ರದಕ್ಷಿಣೆ ಹಾಕಿ. ಸೂರ್ಯಾಸ್ತವಾದ ನಂತರ ಅರಳಿಮರದ ಹತ್ತಿರ ದೀಪ ಹಚ್ಚಬೇಕು.
Comments are closed.