Saving Schemes: ನಿಮ್ಮ ಕಥೆಗೆ ಹುಡುಕಿಕೊಂಡು 16 ಲಕ್ಷ ಬೀಳಬೇಕು ಎಂದರೆ, ಈ ಚಿಕ್ಕ ಮೊತ್ತವನ್ನು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿ. ಯಾವ ಯೋಜನೆ ಗೊತ್ತೇ?
Saving Schemes: ಹಣ ಉಳಿತಾಯ ಮಾಡುವ ಪ್ಲಾನ್ ಎಲ್ಲರಲ್ಲೂ ಇದೆ. ಆದರೆ ಸರಿಯಾಗಿ ತಿಳಿದುಕೊಳ್ಳದೆ ಎಲ್ಲಿಯೋ ಒಂದು ಕಡೆ ಹಣ ಉಳಿತಾಯ ಮಾಡಲು ಆಗುವುದಿಲ್ಲ. ನಿಮ್ಮ ಹಣ ಸುರಕ್ಷಿತವಾಗಿ ಇರುವ ಕಡೆ ಹಣ ಉಳಿತಾಯ ಮಾಡುವುದು ಉತ್ತಮ. ಅದಕ್ಕೆ ಒಳ್ಳೆಯ ಆಯ್ಕೆಗಳು ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಆಗಿರುತ್ತದೆ. ಇಲ್ಲಿ ನಿಮಗೆ ಹಣ ಉಳಿತಾಯ ಮಾಡಲು ಒಳ್ಳೆಯ ಯೋಜನೆಗಳಲ್ಲಿ ಒಂದು ಮರುಕಳಿಸುವ ಠೇವಣಿ ಯೋಜನೆ (Recurring Deposit) ಯೋಜನೆ ಆಗಿದೆ.
ಇದರಲ್ಲಿ ನೀವು ಪ್ರತಿ ತಿಂಗಳು ಇಂತಿಷ್ಟು ಎಂದು ಹಣ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ರಿಟರ್ನ್ಸ್ ಪಡೆಯಬಹುದು. ಒಂದು ತಿಂಗಳಿಗೆ ₹1000, ₹5000, ₹10,000 ಹೀಗೆ ಹೂಡಿಕೆ ಮಾಡಿದರೆ ನಿಮಗೆ ಎಷ್ಟು ಹಣ ಉಳಿತಾಯ ಆಗುತ್ತದೆ ಎಂದು ಇಂದು ನಿಮಗೆ ತಿಳಿಸುತ್ತೇವೆ.. ಈ ವರ್ಷ ಏಪ್ರಿಲ್ 1ರಿಂದ ಬಡ್ಡಿ ಹಣ ಕೂಡ ಏರಿಕೆ ಆಗಿದ್ದು, ಹೊಸ ಆದಾಯ ಹೇಗಿರುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಈ ಯೋಜನೆಯಲ್ಲಿ ನೀವು ಮಿನಿಮಮ್ ₹100 ರೂಪಾಯಿ ಹೂಡಿಕೆ ಮಾಡಬಹುದು, ಈ ಯೋಜನೆಗೆ ಮ್ಯಾಕ್ಸಿಮಮ್ ಎಂದು ಮಿತಿ ಇಲ್ಲ. ಪೋಸ್ಟ್ ಆಫೀಸ್ ನ ಈ ರಿಕರಿಂಗ್ ಡೆಪಾಸಿಟ್ ಯೋಜನೆಯ ಮೆಚ್ಯುರಿಟಿ ಅವಧಿ 5 ವರ್ಷಗಳು. ಒಂದು ವೇಳೆ ಐದು ವರ್ಷಗಳ ಸಮಯ ಮುಗಿದ ನಂತರ ಇನ್ನು ಈ ಯೋಜನೆಯನ್ನು ಮುಂದುವರಿಸಬೇಕು ಎಂದರೆ, ಇನ್ನು ಐದು ವರ್ಷಗಳ ಕಾಲ ಮುಂದುವರೆಸಬಹುದು.
ಹೀಗೆ ಇನ್ನು 5 ವರ್ಷಗಳ ಕಾಲ ಮುಂದುವರೆಸಲು ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಪೋಸ್ಟ್ ಆಫೀಸ್ ನ ಆರ್.ಡಿ (Post Office RD) ಯೋಜನೆಯಲ್ಲಿ ತಿಂಗಳಿಗೆ ₹10 ಸಾವಿರ ಪಾವತಿ ಮಾಡುತ್ತಾ ಹೋದರೆ, 5ವರ್ಷಗಳ ನಂತರ 7 ಲಕ್ಷ ಸಿಗುತ್ತದೆ. ಇನ್ನು ಐದು ವರ್ಷಕ್ಕೆ ಅವಧಿ ಹೆಚ್ಚಿಸಿದರೆ, ₹16.6ಲಕ್ಷ ನಿಮ್ಮ ಕೈಸೇರುತ್ತದೆ. ಇದು ದಿನಕ್ಕೆ ₹333 ರೂಪಾಯಿ ಉಳಿತಾಯ ಮಾಡಿದ ಹಾಗೆ ಆಗುತ್ತದೆ. ಆರ್.ಡಿ ಗಳಿಗೆ ಈಗ ಎಸ್.ಬಿ.ಐ ನಲ್ಲಿ 7.1% ಬಡ್ಡಿ ನೀಡಲಾಗುತ್ತದೆ, ಹಾಗೆ ಹೆಚ್.ಡಿ.ಎಫ್.ಸಿ ಬ್ಯಾಂಕ್ ನಲ್ಲಿ 7% ಬಡ್ಡಿ ಸಿಗುತ್ತದೆ.
Comments are closed.