Kannada News: ಸುಖವಾಗಿ ಸಾಗುತ್ತಿದ್ದ ಸಂಸಾರದಲ್ಲಿ ಗಂಡನಿಗೆ ಆಕ್ಸಿಡೆಂಟ್ ಆಗಿ, ಹಾಸಿಗೆಗೆ ಸೀಮಿತವಾದಾಗ 24 ವರ್ಷದ ಹೆಂಡತಿ ಮಾಡಿದ್ದೇನು ಗೊತ್ತೇ?
Kannada News: 24 ವರ್ಷದ ಈ ಹುಡುಗಿಯ ಹೆಸರು ಮಮತಾ, ಈಕೆಗೆ ಕೆಲ ವರ್ಷಗಳ ಹಿಂದೆ ಮದುವೆ ಆಗಿತ್ತು. ಈ ಗಂಡ ಹೆಂಡತಿಯ ದಾಂಪತ್ಯ ಜೀವನದಲ್ಲಿ ಯಾವುದೇ ತೊಂದರೆ ಇಲ್ಲದೆ ಬಹಳ ಸಂತೋಷವಾಗಿ ಜೀವನ ನಡೆಸುತ್ತಾ ಸಂಸಾರ ನಡೆಸುತ್ತಿದ್ದರು. ಆದರೆ ಇವರ ಸಂಸಾರದ ಮೇಲೆ ಯಾರ ಕಣ್ಣು ಬಿತ್ತೋ, ಇದ್ದಕ್ಕಿದ್ದ ಹಾಗೆ ಆಕೆಯ ಗಂಡ ಅನಾರೋಗ್ಯಕ್ಕೆ ಒಳಗಾದರು. ಮೇಲೆ ಏಳಲು ಆಗದೆ, ಹಾಸಿಗೆಗೆ ಸೀಮಿತವಾಗುವ ಸ್ಥಿತಿ ತಲುಪಿದರು.
ಕೊನೆಗೆ ಮನೆಯ ಜವಾಬ್ದಾರಿ ಮಮತಾ ಮೇಲೆ ಬಿದ್ದಾಗ, ಆಕೆ ಮಾಡಿದ್ದೇನು ಗೊತ್ತಾ? ಪೂರ್ತಿ ವಿಷಯ ನೋಡುವುದಾದರೆ.. ಸಿದ್ದಿಪೇಟೆ ಜಿಲ್ಲೆಯ ಗಜ್ವೇಲ್ ವ್ಯಾಪ್ತಿಯ ಚೌಧರಿಪಲ್ಲಿ ಗ್ರಾಮದಲ್ಲಿ ರಾಜು ಮಮತಾ ದಂಪತಿ ವಾಸವಾಗಿದ್ದರು. ಈ ಜೋಡಿಯ ಮದುವೆಯಾಗಿ ಸಂತೋಷವಾಗಿ, ಸಂಸಾರ ನಡೆಸುತ್ತಿದ್ದರು. ಇವರಿಗೆ ಒಬ್ಬ ಮಗಳು ಕೂಡ ಹುಟ್ಟಿದಳು. ಮಗುವನ್ನು ನೋಡಿಕೊಳ್ಳುತ್ತಾ ಗಂಡ ಹೆಂಡತಿ ಸಂತೋಷವಾಗಿದ್ದರು.
ಆದರೆ ಎಂಟು ತಿಂಗಳ ಹಿಂದೆ ರಾಜು ಅವರಿಗೆ ಅಪಘಾತ ಉಂಟಾಯಿತು. ಅದರಿಂದ ಅವರು ಕೆಲವು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಹಾಗೆ ಆಯಿತು. ನಂತರ ಮನೆಗೆ ಬಂದ ಬಳಿಕ ಕೆಲವು ದಿನಗಳಿಂದ ಅತ್ತೆ ಮತ್ತು ಗಂಡ ಮಮತಾ ಜೊತೆಗೆ ಜಗಳ ಆಡಿದ್ದಾರೆ. ಗುರುವಾರ ಕೂಡ ಆಕೆಯ ಜೊತೆಗೆ ಜಗಳ ಆಡಿದ್ದಾರೆ. ಇದರಿಂದ ಮಮತಾ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು.
ಅಂದು ಮಗುವನ್ನು ಮನೆಯಿಂದ ಕರೆದುಕೊಂಡು ಮನೆಯಿಂದ ಹೊರಹೋದ ಮಮತಾ ವಾಪಸ್ ಮನೆಗೆ ಬರಲಿಲ್ಲ. ಮಮತಾ ತಾಯಿಗೆ ವಿಷಯ ಗೊತ್ತಾಗಿ ಪೊಲೀಸರಿಗೆ ದೂರು ಕೊಟ್ಟಿದ್ದು, ಪೊಲೀಸರು ಹುಡುಕಾಟ ಶುರು ಮಾಡಿದರು. ಆಕೆ ಇಂಥ ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಮಮತಾ ಮನೆಯವರು ಕಣ್ಣೀರು ಹಾಕಿದ್ದಾರೆ. ಗಂಡ ಕೊಟ್ಟ ತೊಂದರೆ ಇಂದ ಈ ಹುಡುಗಿ ಮಗುವನ್ನೇ ಕರೆದುಕೊಂಡು ಹೋಗಿ ಈ ರೀತಿ ಮಾಡಿದ್ದಾಳೆ.
Comments are closed.