ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲನ್ನು ಕಾಣಲು ಕಾರಣ ಯಾರು ಗೊತ್ತೇ??ಇವರಿಂದಲೇ ತಂಡ ಸೋತಿದ್ದು

ನಮಸ್ಕಾರ ಸ್ನೇಹಿತರೆ ಎಡ್ಜ್ ಬಾಸ್ಟನ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಖಂಡಿತವಾಗಿ ಇಂಗ್ಲೆಂಡ್ ವಿರುದ್ಧ ವಿಜಯವನ್ನು ಸಾಧಿಸಿ ಟೆಸ್ಟ್ ಸರಣಿಯನ್ನು ಅನಾಯಾಸವಾಗಿ ಗೆಲ್ಲುತ್ತದೆ ಎಂಬುದಾಗಿ ಎಲ್ಲರೂ ಭಾವಿಸಿದ್ದರು. ಆದರೆ ಎರಡನೇ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡದ ಡೇರಿಂಗ್ ಪ್ರದರ್ಶನ ಭಾರತ ತಂಡವನ್ನು ಮಂಕಾಗಿಸುವಂತೆ ಮಾಡಿದೆ. ಇನ್ನು ತಂಡದ ಸೋಲಿಗೆ ಕಾರಣ ಯಾರು ಹಾಗೂ ಏನು ಎಂಬುದನ್ನು ನೋಡುವುದಾದರೆ ಅಲ್ಲಿ ಕೆಲವೊಂದು ಅಂಶಗಳು ಕಾಣಸಿಗುತ್ತವೆ ಅದೇನು ಯಾರು ಎಂಬುದನ್ನು ತಿಳಿಯೋಣ ಬನ್ನಿ. ಮೊದಲಿಗೆ ತಂಡದ ಆರಂಭಿಕ ಆಟಗಾರ ಆಗಿರುವ ಹನುಮ ವಿಹಾರಿ ಆರಂಭಿಕ ಆಟಗಾರನಾಗಿ ಕಳಸ ಪ್ರದರ್ಶನವನ್ನು ಎರಡು ಇನ್ನಿಂಗ್ಸ್ ಗಳಲ್ಲಿ ನೀಡಿದ್ದಾರೆ.

ಹೌದು ಗೆಳೆಯರೆ ಮೊದಲ ಇನಿಂಗ್ಸ್ನಲ್ಲಿ 20 ರನ್ನುಗಳನ್ನು ಬಾರಿಸಿದರೆ ಎರಡನೇ ಇನ್ನಿಂಗ್ಸ್ ನಲ್ಲಿ ಕೇವಲ 11 ರನ್ನುಗಳನ್ನು ಗಳಿಸಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ 14ರನ್ನು ಗಳಿಸಿದ್ದಾಗ ಬೇರ್ಸ್ಟೋ ರವರ ಕ್ಯಾಚನ್ನು ಕೈಚೆಲ್ಲಿದ್ದರು ನಂತರ ಅವರು 72 ರನ್ನುಗಳನ್ನು ಗಳಿಸಿ ತಂಡ ಗೆಲ್ಲುವಂತೆ ಮಾಡಿದ್ದರು. ಎರಡನೇದಾಗಿ ಮಯಾಂಕ್ ಅಗರ್ವಾಲ್ ಅವರಂತಹ ಅತ್ಯುತ್ತಮ ಆಟಗಾರರ ನಡುವೆಯೂ ಕೂಡ ಶ್ರೇಯಸ್ ಅಯ್ಯರ್ ರವರಿಗೆ ಟೆಸ್ಟ್ ಪಂದ್ಯದಲ್ಲಿ ಉತ್ತಮ ಅವಕಾಶವನ್ನು ನೀಡಿದ್ದರೂ ಕೂಡ ಟೆಸ್ಟ್ ಪಂದ್ಯದಲ್ಲಿ 15 ಹಾಗೂ 19 ರನ್ನುಗಳ ಕ್ರಮವಾಗಿ ಕಳಪೆ ಪ್ರದರ್ಶನವನ್ನು ನೀಡಿ ತಂಡ ಸೋಲುವಲ್ಲಿ ಮತ್ತೊಂದು ಕಳಪೆ ಕೊಂಡಿಯಾಗಿ ಕಾಣಿಸಿಕೊಂಡಿದ್ದರು. ತಂಡ ಸೋಲುವಂತಹ ಸನ್ನಿವೇಶದಲ್ಲಿ ಕೂಡ ತಂಡವನ್ನು ಆಧರಿಸಿ ಆಡುವಂತಹ ಆಟವನ್ನು ಈ ಸಂದರ್ಭದಲ್ಲಿ ಅವರು ಆಡಲಿಲ್ಲ.

ind test | ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲನ್ನು ಕಾಣಲು ಕಾರಣ ಯಾರು ಗೊತ್ತೇ??ಇವರಿಂದಲೇ ತಂಡ ಸೋತಿದ್ದು
ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲನ್ನು ಕಾಣಲು ಕಾರಣ ಯಾರು ಗೊತ್ತೇ??ಇವರಿಂದಲೇ ತಂಡ ಸೋತಿದ್ದು 2

ತಂಡದಲ್ಲಿ ಬಲಿಷ್ಟ ಆಲ್-ರೌಂಡರ್ ಮಾದರಿ ಆಟವನ್ನು ಪ್ರದರ್ಶಿಸುವ ಶಾರ್ದುಲ್ ಠಾಕೂರ್ ಅವರು ಕೂಡ ಕೊನೆಯಲ್ಲಿ ಬ್ಯಾಟಿಂಗ್ಗೆ ಬಂದರೂ ಕೂಡ ಅಗ್ರೆಸ್ಸಿವ್ ಆಗಿ ಆಟವಾಡಿ ದೊಡ್ಡಮಟ್ಟದ ರನ್ ಗಳಿಸುತ್ತಿದ್ದರು. ಆದರೆ ಈ ಬಾರಿ ಎರಡು ಇನಿಂಗ್ಸಲ್ಲಿ ಒಟ್ಟಾರೆಯಾಗಿ ಕೇವಲ ಐದು ರನ್ನುಗಳನ್ನು ಮಾತ್ರ ಬಾರಿಸಿದ್ದಾರೆ. ಇನ್ನು ಬೌಲಿಂಗ್ ವಿಚಾರದಲ್ಲಿ ಬಂದಿರುವುದು ಯಾವುದೇ ವಿಕೆಟ್ಗಳನ್ನು ಕಿತ್ತಿಲ್ಲ. ಈ ಮೂರು ಜನ ತಂಡದ ಸೋಲಿಗೆ ಕಾರಣವಾಗಿದ್ದಾರೆ ಎಂದರೆ ತಪ್ಪಾಗಲಾರದು.

Comments are closed.