ಸಾಯಿ ಪಲ್ಲವಿ ರವರು ಅದೊಂದು ಮಾತನ್ನು ಅಪ್ಪು ರವರಿಗೆ ಹೇಳಲು ಕಾಯುತ್ತಿದ್ದರಂತೆ, ಆದರೆ ಸಾಧ್ಯವಾಗಿಲ್ಲ. ಅಷ್ಟಕ್ಕೂ ಸಾಯಿ ಪಲ್ಲವಿ ಏನು ಹೇಳಬೇಕಿತ್ತಂತೆ ಗೊತ್ತೇ?

ನಮಸ್ಕಾರ ಸ್ನೇಹಿತರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಈಗಾಗಲೇ ಹಲವಾರು ತಿಂಗಳುಗಳು ಕಳೆದು ಹೋದರು ಕೂಡ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿಯೂ ಕೂಡ ಇಂದಿಗೂ ಅಪ್ಪು ಮತ್ತೆ ಎದ್ದು ಬರುತ್ತಾರೆ ಎನ್ನುವ ನಂಬಿಕೆಯನ್ನು ಉಳಿಸಿ ಹೋಗಿದ್ದಾರೆ. ನಿಜಕ್ಕೂ ಕೂಡ ಅಪ್ಪು ಕೇವಲ ತಮ್ಮ ಸಿನಿಮಾ ಇಮೇಜ್ ಮೂಲಕ ಮಾತ್ರವಲ್ಲದೆ ನೈಜ ಜೀವನದಲ್ಲಿ ತಮ್ಮ ಪಾರದರ್ಶಕ ವ್ಯಕ್ತಿತ್ವದ ಮೂಲಕ ಕೂಡ ಪ್ರತಿಯೊಬ್ಬರ ನೆಚ್ಚಿನ ವ್ಯಕ್ತಿಯಾಗಿದ್ದರು.

ಹೌದು ಗೆಳೆಯರೇ ಇನ್ನು ನಿಮಗೆಲ್ಲರಿಗೂ ತಿಳಿದಿರುವಂತೆ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯಾಗಿರುವ ಸಾಯಿ ಪಲ್ಲವಿ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಮಹಿಳಾ ಪ್ರಧಾನ ಚಿತ್ರವಾಗಿರುವ ಗಾರ್ಗಿ ಚಿತ್ರದ ಪ್ರಮೋಷನ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಗಾರ್ಗಿ ಚಿತ್ರ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು ಕನ್ನಡದಲ್ಲಿ ಕೂಡ ಬಿಡುಗಡೆಯಾಗುವ ಕಾರಣದಿಂದಾಗಿ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಕೂಡ ಅವರು ಅಪ್ಪು ಅವರನ್ನು ನೆನಸಿಕೊಂಡು ಅವಾರ್ಡ್ ಸಮಾರಂಭದಲ್ಲಿ ಅವರು ನಾನು ಹೋಗುತ್ತಿದ್ದ ಸಂದರ್ಭದಲ್ಲಿ ಕರೆದು ಮಾತನಾಡಿಸಿ ನನ್ನ ಕಾರ್ಯದ ಕುರಿತಂತೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಆಗ ಕೇವಲ ನಾನು ಒಂದು ಸಿನಿಮಾವನ್ನು ಮಾಡಿದ್ದರು ಕೂಡ ಕರೆದು ನನ್ನ ಪ್ರತಿಭೆಗೆ ಪ್ರೋತ್ಸಾಹ ನೀಡುವಂತಹ ಕಾರ್ಯ ಮಾಡಿದ್ದರು ಅದನ್ನು ನಾನು ಜೀವನಪೂರ್ತಿ ನೆನಪಿಟ್ಟುಕೊಳ್ಳುತ್ತೇನೆ ಎಂಬುದಾಗಿ ಹೇಳಿದ್ದಾರೆ.

sai pallavi appu | ಸಾಯಿ ಪಲ್ಲವಿ ರವರು ಅದೊಂದು ಮಾತನ್ನು ಅಪ್ಪು ರವರಿಗೆ ಹೇಳಲು ಕಾಯುತ್ತಿದ್ದರಂತೆ, ಆದರೆ ಸಾಧ್ಯವಾಗಿಲ್ಲ. ಅಷ್ಟಕ್ಕೂ ಸಾಯಿ ಪಲ್ಲವಿ ಏನು ಹೇಳಬೇಕಿತ್ತಂತೆ ಗೊತ್ತೇ?
ಸಾಯಿ ಪಲ್ಲವಿ ರವರು ಅದೊಂದು ಮಾತನ್ನು ಅಪ್ಪು ರವರಿಗೆ ಹೇಳಲು ಕಾಯುತ್ತಿದ್ದರಂತೆ, ಆದರೆ ಸಾಧ್ಯವಾಗಿಲ್ಲ. ಅಷ್ಟಕ್ಕೂ ಸಾಯಿ ಪಲ್ಲವಿ ಏನು ಹೇಳಬೇಕಿತ್ತಂತೆ ಗೊತ್ತೇ? 2

ಕೇವಲ ಇಷ್ಟು ಮಾತ್ರ ಅಲ್ಲದೆ ಅಪ್ಪು ಅವರಿಗೆ ಒಂದು ಮಾತನ್ನು ಹೇಳಬೇಕಾಗಿತ್ತು ಅದನ್ನು ಕೊನೆಗೂ ಕೂಡ ಹೇಳಲು ಸಾಧ್ಯವಾಗಿಲ್ಲ ಎಂಬುದನ್ನು ಕೂಡ ದುಃಖದಿಂದ ಸಾಯಿ ಪಲ್ಲವಿ ಒಪ್ಪಿಕೊಳ್ಳುತ್ತಾರೆ. ಹೌದು ಗೆಳೆಯರೇ ಪ್ರತಿಭೆಯನ್ನು ಗುರುತಿಸಿ ಅವರಿಗೆ ಅದನ್ನು ಮುಂದುವರಿಸಿಕೊಂಡು ಹೋಗುವಂತೆ ಪ್ರೋತ್ಸಾಹ ನೀಡುವ ಗುಣ ಅಪ್ಪು ಅವರದು ಅದು ನನಗೆ ಇಂದಿಗೂ ಕೂಡ ಸ್ಪೂರ್ತಿಯಾಗಿದೆ ಅದರ ಕುರಿತಂತೆ ನಾನು ಅವರಿಗೆ ಹೇಳಲು ಕಾತುರಳಾಗಿದ್ದೆ ಆದರೆ ಅಪ್ಪು ಅವರ ಮರಣದ ಸುದ್ದಿ ಕೇಳಿದ ನಂತರ ಅದನ್ನು ಕೊನೆಗೂ ಕೂಡ ಹೇಳಲು ಸಾಧ್ಯವಾಗಲಿಲ್ಲ ಎಂಬುದು ಬೇಸರದ ಸಂಗತಿಯಾಗಿತ್ತು ಎಂಬುದಾಗಿ ದುಃಖದಿಂದ ಸಾಯಿಪಲ್ಲವಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

Comments are closed.