ಎರಡನೇ ಪಂದ್ಯವನ್ನು ಹೀನಾಯವಾಗಿ ಸೋತ ಬಳಿಕ ಷಾಕಿಂಗ್ ಹೇಳಿಕೆ ನೀಡಿದ ರೋಹಿತ್ ಶರ್ಮ; ನಾಯಕನ ಮಾತು ಕೇಳಿ ಶಾಕ್ ಆದ ಕ್ರಿಕೆಟಿಗರು.
ನಮಸ್ಕಾರ ಸ್ನೇಹಿತರೆ ಗೆಲುವಿನ ಅಲೆಯಲ್ಲಿ ತೇಲಾಡು ಸಿದ್ದ ಭಾರತೀಯ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಸೋಲನ್ನು ಅನುಭವಿಸಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಹಲವಾರು ಸರಣಿಗಳಿಂದ ಸೋಲಿಲ್ಲದ ಸರದಾರನಂತೆ ಕಾಣಿಸಿಕೊಳ್ಳುತ್ತಿತ್ತು.
ಆದರೆ ಈಗ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಸೋಲನ್ನು ಅನುಭವಿಸಿರುವ ಹಿನ್ನೆಲೆಯಲ್ಲಿ ಪಂದ್ಯ ಮುಗಿದ ನಂತರ ನಾಯಕ ರೋಹಿತ್ ಶರ್ಮ ರವರು ತಂಡದ ಕುರಿತಂತೆ ಮಾತನಾಡಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತೀಯ ಕ್ರಿಕೆಟ್ ತಂಡ 138 ರನ್ನುಗಳಿಗೆ ಆಲ್ ಔಟ್ ಆಗಿತ್ತು. ಇದಕ್ಕಾಗಿ ಮೊದಲಿಗೆ ರೋಹಿತ್ ಶರ್ಮಾ ರವರು ಇದೊಂದು ಉತ್ತಮವಾದ ಪಿಚ್ ಹಾಗೂ ಪರಿಸ್ಥಿತಿ ಆಗಿತ್ತು ಆದರೆ ನಾವು ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಲು ವಿಫಲರಾಗಿದ್ದೇವೆ ಎಂಬುದಾಗಿ ಹೇಳಿದ್ದಾರೆ. ಅದರಲ್ಲೂ ಪ್ರಮುಖವಾಗಿ 139 ರನ್ನುಗಳ ಸುಲಭ ಗುರಿಯನ್ನು ಹೊಂದಿದ್ದರೂ ಕೂಡ ವೆಸ್ಟ್ ಇಂಡೀಸ್ ತಂಡದವರು ಕೊನೆಯ ಓವರ್ ವರೆಗೂ ಕೂಡ ಬ್ಯಾಟಿಂಗ್ ಮಾಡಿ ಕೊನೆಯಲ್ಲಿ ಗೆಲ್ಲ ಬೇಕಾಗಿ ಬಂದಿತ್ತು. ಕೊನೆಯ ಓವರ್ ನಲ್ಲಿ ಗೆಲ್ಲಲು 10 ರನ್ನುಗಳು ಬೇಕಾಗಿತ್ತು ಈ ಸಂದರ್ಭದಲ್ಲಿ ಬೌಲಿಂಗ್ ಮಾಡಿದ್ದ ಆವೇಶ ಖಾನ್ ನೋ ಬಾಲ್ ಪ್ರೀ ಹಿಟ್ ನೀಡಿ ತಂಡದ ಸೋಲಿಗೆ ಕಾರಣರಾಗಿದ್ದರು ಆದರೂ ಕೂಡ ಬೌಲರ್ಗಳ ಬೆಂಬಲಕ್ಕೆ ನಾಯಕ ರೋಹಿತ್ ಶರ್ಮ ನಿಂತಿದ್ದರು.
ಕೇವಲ 139 ರನುಗಳ ಗುರಿ ಇದ್ದರೂ ಕೂಡ ವೆಸ್ಟ್ ಇಂಡೀಸ್ ತಂಡದವರು ಕೊನೆಯವರೆಗೂ ಕೂಡ ಬ್ಯಾಟಿಂಗ್ ಮಾಡಬೇಕಾದ ಹಂತಕ್ಕೆ ನಮ್ಮ ಭಾರತೀಯ ಬೌಲರ್ ಗಳು ತಂದು ನಿಲ್ಲಿಸಿದ್ದರು ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಇಷ್ಟು ಮಾತ್ರವಲ್ಲದೆ ಭುವನೇಶ್ವರ್ ಕುಮಾರ್ ಹಲವಾರು ವರ್ಷಗಳಿಂದ ತಂಡಕ್ಕಾಗಿ ಏನು ಮಾಡುತ್ತಿದ್ದಾರೆ ಎಂಬುದಾಗಿ ನಮಗೆ ತಿಳಿದಿದೆ, ಅವರ ಅನುಭವ ತಂಡಕ್ಕೆ ಪ್ರಮುಖವಾದದ್ದು ಮಾತ್ರವಲ್ಲದೆ ಆವೇಷ್ ಖಾನ್ ಅರ್ಷದೀಪ್ ಸಿಂಗ್ ಸೇರಿದಂತೆ ಯುವ ಬೌಲರ್ಗಳ ಪ್ರತಿಭೆಯನ್ನು ಕೂಡ ನಾವು ಈಗಾಗಲೇ ಗುರುತಿಸಿದ್ದೇವೆ. ತಂಡಕ್ಕಾಗಿ ಈಗ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದೇವೆ ಹೀಗಾಗಿ ಸೋತೆವು ಎಂದ ಮಾತ್ರಕ್ಕೆ ನಾವು ಬೇಸರವನ್ನು ವ್ಯಕ್ತಪಡಿಸುವುದಿಲ್ಲ ಬದಲಾಗಿ ನಮ್ಮ ಕಾರ್ಯತಂತ್ರ ಕಾರ್ಯರೂಪಕ್ಕೆ ಬರುತ್ತಿದೆ ಎಂಬುದಾಗಿ ಹೇಳಿದ್ದಾರೆ.
Comments are closed.