ವಿಶ್ವಕಪ್ ಗೆ ಆಸ್ಟ್ರೇಲಿಯಾ ಗೆ ತೆರಳಿದ ಮೇಲು ನಿಲ್ಲದ ಸಂಕಷ್ಟ: ಈ ಬಾರಿ ತಲೆ ನೋವು ತಂದಿಟ್ಟ ರೋಹಿತ್. ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ನಮ್ಮ ಭಾರತೀಯ ಕ್ರಿಕೆಟ್ ತಂಡ ಈ ವರ್ಷ ಸಾಮಾನ್ಯ ಕ್ರಿಕೆಟ್ ಸರಣಿಗಳನ್ನು ಗೆದ್ದಿದ್ದರು ಕೂಡ ಪ್ರಮುಖ ಐಸಿಸಿ ಟೂರ್ನಮೆಂಟ್ ನಲ್ಲಿ ಹೀನಾಯವಾಗಿ ಎಡವಿರುವುದು ನಿಜಕ್ಕೂ ಕೂಡ ಈಗಾಗಲೇ ದೊಡ್ಡ ಮಟ್ಟದ ಸಮಸ್ಯೆ ಆಗಿ ತಂಡವನ್ನು ಕಾಡಿತ್ತು. ಈಗ ವಿಶ್ವಕಪ್ ಗೂ ಮುನ್ನ ಆಸ್ಟ್ರೇಲಿಯಾಗಿ ತೆರಳಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ ಇನ್ನೊಂದು ಸಮಸ್ಯೆ ಎದುರಾಗಿದೆ. ಈ ವರ್ಷದ ಆರಂಭದಿಂದಲೂ ಕೂಡ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ಬೌಲಿಂಗ್ ವಿಭಾಗದಲ್ಲಿ ದೊಡ್ಡ ಮಟ್ಟದ ಸಮಸ್ಯೆಯನ್ನು ಎದುರಿಸಿತ್ತು.

ಈ ಕಾರಣದಿಂದಾಗಿ ಗೆಲ್ಲ ಬೇಕಾಗಿದ್ದ ಏಷ್ಯಾ ಕಪ್ ಅನ್ನು ಸುಲಭವಾಗಿ ಭಾರತೀಯ ಕ್ರಿಕೆಟ್ ತಂಡ ಸೋತು ಹಿನ್ನಡೆಯನ್ನು ಅನುಭವಿಸಿತು. ಇದಾದ ನಂತರ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳ ವಿರುದ್ಧ ಟಿ 20 ಸರಣಿಯನ್ನು ಗೆದ್ದಿದ್ದರು ಕೂಡ ಇಲ್ಲಿ ಕೂಡ ಭಾರತೀಯ ಕ್ರಿಕೆಟ್ ತಂಡದ ಬೌಲಿಂಗ್ ಪರಾಕ್ರಮ ಸಂಪೂರ್ಣ ನಿಸ್ತೇಜವಾಗಿತ್ತು. ಈಗ ಆಸ್ಟ್ರೇಲಿಯಾ ಗೆ ತೆರಳಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ ತಂಡದ ನಾಯಕ ರೋಹಿತ್ ಶರ್ಮ ಅವರೇ ದೊಡ್ಡ ಮಟ್ಟದ ಸಮಸ್ಯೆಯಾಗಿ ಪರಿಣಮಿಸಿದ್ದಾರೆ. ವೆಸ್ಟರ್ನ್ ಆಸ್ಟ್ರೇಲಿಯ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಿದ ಭಾರತೀಯ ಕ್ರಿಕೆಟ್ ತಂಡದ ಓಪನರ್ ಆಗಿ ರೋಹಿತ್ ಶರ್ಮ ಕೇವಲ 3 ರನ್ನುಗಳಿಗೆ ಔಟ್ ಆಗುತ್ತಾರೆ.

rohit poor performance | ವಿಶ್ವಕಪ್ ಗೆ ಆಸ್ಟ್ರೇಲಿಯಾ ಗೆ ತೆರಳಿದ ಮೇಲು ನಿಲ್ಲದ ಸಂಕಷ್ಟ: ಈ ಬಾರಿ ತಲೆ ನೋವು ತಂದಿಟ್ಟ ರೋಹಿತ್. ಏನಾಗಿದೆ ಗೊತ್ತೇ??
ವಿಶ್ವಕಪ್ ಗೆ ಆಸ್ಟ್ರೇಲಿಯಾ ಗೆ ತೆರಳಿದ ಮೇಲು ನಿಲ್ಲದ ಸಂಕಷ್ಟ: ಈ ಬಾರಿ ತಲೆ ನೋವು ತಂದಿಟ್ಟ ರೋಹಿತ್. ಏನಾಗಿದೆ ಗೊತ್ತೇ?? 2

ಈ ವರ್ಷ ಟಿ 20 ಫಾರ್ಮ್ಯಾಟ್ ನಲ್ಲಿರೋಹಿತ್ ಶರ್ಮ ಅವರು ಓಪನರ್ ಆಗಿ ದೊಡ್ಡ ಮಟ್ಟದ ವೈಫಲ್ಯವನ್ನು ಅನುಭವಿಸಿದ್ದಾರೆ. ಈ ವರ್ಷ 23 ಟಿ20 ಪಂದ್ಯಗಳನ್ನು ಈಗಾಗಲೇ ಆಡಿರುವ ರೋಹಿತ್ ಶರ್ಮ ಅವರು ಗಳಿಸಿದ್ದು ಕೇವಲ 540 ರನ್ನುಗಳು ಮಾತ್ರ. ಅಂದರೆ ಕೇವಲ 25.71ರ ಸರಾಸರಿಯಂತೆ ರೋಹಿತ್ ಶರ್ಮ ಅವರ ಬ್ಯಾಟಿನಿಂದ ರನ್ನುಗಳು ಹರಿದು ಬಂದಿವೆ. ಈ ವರ್ಷ ಕೇವಲ ಎರಡು ಅರ್ಧ ಶತಕಗಳು ಮಾತ್ರ ರೋಹಿತ್ ಶರ್ಮ ಅವರಿಂದ ಕಂಡುಬಂದಿದೆ. ತಂಡದ ನಾಯಕನಾಗಿರುವ ಹಿನ್ನೆಲೆಯಲ್ಲಿ ರೋಹಿತ್ ಶರ್ಮ ಅವರ ಓಪನಿಂಗ್ ಸ್ಥಾನವನ್ನು ಬೇರೆ ಯಾರು ಕೂಡ ನಿರ್ವಹಿಸಲು ಸಾಧ್ಯವಿಲ್ಲ. ಹೀಗಾಗಿ ವಿಶ್ವಕಪ್ ಆರಂಭಕ್ಕೂ ಮುನ್ನವೇ ರೋಹಿತ್ ಶರ್ಮ ಅವರು ಓಪನಿಂಗ್ ಬ್ಯಾಟ್ಸ್ಮನ್ ಆಗಿ ತಮ್ಮ ನಿಜವಾದ ಲಯಕ್ಕೆ ಮರಳಿ ಬರುವುದು ತಂಡಕ್ಕೆ ಅತ್ಯಗತ್ಯವಾಗಿದೆ. ಇನ್ನು ಅಭ್ಯಾಸ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಹಾಗೂ ಅರ್ಷದೀಪ್ ಸಿಂಗ್ ಉತ್ತಮ ಬೌಲಿಂಗ್ ಪ್ರದರ್ಶನದ ಕಾರಣದಿಂದಾಗಿ ವೆಸ್ಟರ್ನ್ ಆಸ್ಟ್ರೇಲಿಯಾ ತಂಡದ ವಿರುದ್ಧ ಗೆದ್ದಿದೆ.

Comments are closed.