News from ಕನ್ನಡಿಗರು

ಒಬ್ಬರಲ್ಲ ಇಬ್ಬರಲ್ಲ ಮದುವೆಗೂ ಮುನ್ನ ಯುವರಾಜ್ ಪ್ರೀತಿ ಮಾಡಿದ ಟಾಪ್ 8 ನಟಿಯರು ಯಾರ್ಯಾರು ಗೊತ್ತೇ?? ಎಲ್ಲರೂ ಟಾಪ್ ಸುಂದರಿಯರೇ.

1,437

ನಮಸ್ಕಾರ ಸ್ನೇಹಿತರೇ ಇದುವರೆಗೂ ನಮ್ಮ ಭಾರತದೇಶ ಏಕದಿನದಲ್ಲಿ ಎರಡು ಬಾರಿ ವಿಶ್ವಕಪ್ ಗೆದ್ದಿದೆ. ಮೊದಲನೇ ಬಾರಿ ಕಪಿಲ್ ದೇವ್ ನಾಯಕತ್ವದಲ್ಲಿ ಹಾಗೂ ಎರಡನೇ ಬಾರಿ ಮಹೇಂದ್ರ ಸಿಂಗ್ ಧೋನಿ ರವರ ನಾಯಕತ್ವದಲ್ಲಿ. ಹೌದು 2011 ರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಭಾರತ ತಂಡ ಏಕದಿನ ವಿಶ್ವಕಪ್ ಅನ್ನು 28 ವರ್ಷಗಳ ನಂತರ ಗೆದ್ದಿದೆ. ಇದಕ್ಕೆ ಪ್ರಮುಖ ಕಾರಣವಾಗಿರುವುದು ಯುವರಾಜ್ ಸಿಂಗ್ ಎಂದರೆ ತಪ್ಪಾಗಲಾರದು. ಯುವರಾಜ್ ಸಿಂಗ್ ಭಾರತ ಕಂಡಂತಹ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಅವರ ವೈಯಕ್ತಿಕ ಜೀವನದ ಕುರಿತಂತೆ. ನಿಮಗೆ ಗೊತ್ತಾ ಗೆಳೆಯರೇ ಯುವರಾಜ್ ಸಿಂಗ್ ರವರು ಮದುವೆಯಾಗುವ ಮುನ್ನವೇ 8 ನಟಿಯರ ಪ್ರೀತಿಯಲ್ಲಿ ಬಿದ್ದಿದ್ದರು. ಹಾಗಾದ್ರೆ ಅವರು ಯಾರೆಲ್ಲಾ ಎಂಬುದನ್ನು ತಿಳಿಯೋಣ ಬನ್ನಿ.

ನೆಹ ಧೂಪಿಯ; 2014 ರ ಸಂದರ್ಭದಲ್ಲಿ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ನೆಹ ಧೂಪಿಯ ಹಾಗೂ ಯುವರಾಜ್ ಸಿಂಗ್ ಇಬ್ಬರು ಕೂಡ ಡೇಟ್ ಮಾಡುತ್ತಿದ್ದಾರೆ ಎಂಬುದಾಗಿ ಕೇಳಿಬಂದಿತ್ತು. ಈ ಕುರಿತಂತೆ ಮಾಧ್ಯಮದವರು ನೇಹಾ ಧೂಪಿಯಾ ರವರನ್ನು ಕೇಳಿದಾಗ ನಾವಿಬ್ಬರು ಡೇಟ್ ಮಾಡುತ್ತಿಲ್ಲ ಜನರು ಯಾಕೆ ಹೀಗೆ ಅಂದುಕೊಳ್ಳುತ್ತಿದ್ದಾರೆ ಎಂಬುದು ನನಗೆ ತಿಳಿಯುತ್ತಿಲ್ಲ ಎಂಬುದಾಗಿ ಪ್ರತಿಕ್ರಿಯಿಸಿದ್ದರು.

ಪ್ರೀತಿ ಜಾಂಗಿಯಾನಿ; ಸೂಪರ್ ಹಿಟ್ ಮೊಹಬ್ಬತ್ ಚಿತ್ರದ ನಟಿಯಾಗಿರುವ ಪ್ರೀತಿ ಜಾಂಗಿಯಾನಿ ರವರ ಹೆಸರು ಕೂಡ ಯುವರಾಜ್ ಸಿಂಗ್ ಅವರೊಂದಿಗೆ ಕೇಳಿಬಂದಿತ್ತು ಆದರೆ ಇಬ್ಬರೂ ಕೂಡ ಇದನ್ನು ಬಹಿರಂಗಪಡಿಸಿರಲಿಲ್ಲ.

ಪ್ರೀತಿ ಜಿಂಟಾ; ಪ್ರೀತಿ ಜಿಂಟಾ ಪಂಜಾಬ್ ತಂಡದ ಬಾಲಕಿಯಾಗಿದ್ದಾಗ ಯುವರಾಜ್ ಸಿಂಗ್ ಹಾಗೂ ಪ್ರೀತಿಜಿಂಟಾ ಇಬ್ಬರೂ ಕೂಡ ಹಲವಾರು ಬಾರಿ ತಬ್ಬಿಕೊಂಡಿರುವ ಹಾಗೂ ಮುತ್ತು ನೀಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಕುರಿತಂತೆ ಇಬ್ಬರೂ ಕೂಡ ಎಲ್ಲೂ ತುಟಿಪಿಟಕ್ ಎನ್ನಲಿಲ್ಲ.

ಕಿಮ್ ಶರ್ಮ; ಬಾಲಿವುಡ್ ಚಿತ್ರರಂಗದ ಉದಯೋನ್ಮುಖ ನಟಿಯರಲ್ಲಿ ಒಬ್ಬರಾದ ಕಿಮ್ ಶರ್ಮ ಹಾಗೂ ಯುವರಾಜ್ ಸಿಂಗ್ ನಾಲ್ಕು ವರ್ಷಗಳ ಕಾಲ ಪರಸ್ಪರ ಡೇಟ್ ಮಾಡಿದ್ದರು. ಆದರೆ ನಟಿ ಯುವರಾಜ್ ಸಿಂಗ್ ಅವರ ತಾಯಿಗೆ ಇಷ್ಟವಾಗದಿದ್ದ ಕಾರಣ ಇವರಿಬ್ಬರ ಸಂಬಂಧ ಎನ್ನುವುದು ಅರ್ಧದಲ್ಲಿಯೇ ನಿಂತಿತು.

ದೀಪಿಕಾ ಪಡುಕೋಣೆ; ಹಾಲಿವುಡ್ ಬಾಲಿವುಡ್ ಚಿತ್ರರಂಗಗಳಲ್ಲಿ ಧೂಳೆಬ್ಬಿಸಿರುವ ನಟಿ ದೀಪಿಕಾ ಪಡುಕೋಣೆ ಅವರು ಕೂಡ ಹಲವಾರು ಬಾರಿ ಯುವರಾಜ್ ಸಿಂಗ್ ರವರ ಜೊತೆಗೆ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದರು. ಇವರಿಬ್ಬರ ಪ್ರೀತಿಯ ಕುರಿತಂತೆ ಕೂಡ ಸುದ್ದಿಗಳು ಪ್ರಸಾರವಾಗಿದ್ದು ಆದರೆ ಅಷ್ಟೇ ವೇಗದಲ್ಲಿ ಇವರಿಬ್ಬರು ಒಬ್ಬರಿಂದೊಬ್ಬರು ದೂರವಾಗಿರುತ್ತಾರೆ.

ರಿಯಾ ಸೇನ್; ಯುವರಾಜ್ ಸಿಂಗ್ ಹಾಗೂ ನಟಿ ರಿಯಾ ಸೇನ್ ಇಬ್ಬರು ಕೂಡ ಹಲವಾರು ಪಾರ್ಟಿ ಹಾಗೂ ಫಂಕ್ಷನ್ ಗಳಲ್ಲಿ ಒಟ್ಟಾಗಿ ಕೈ ಕೈ ಹಿಡಿದುಕೊಂಡು ಕಾಣಿಸಿಕೊಂಡಿದ್ದರು ಆದರೆ ಇಬ್ಬರ ಪ್ರೀತಿ ಕುರಿತಂತೆಯೂ ಕೂಡ ಅಧಿಕೃತವಾಗಿ ಬಾಯಿಬಿಟ್ಟಿರಲಿಲ್ಲ.

ಅಂಚಲ್ ಕುಮಾರ್; ಅಂಚಲ್ ಕುಮಾರ್ರವರು ಕ್ರಿಕೆಟಿಗ ಯುವರಾಜ್ ಸಿಂಗ್ ರವರ ಬಾಲ್ಯದ ಗೆಳತಿಗೆ ಆಗಿದ್ದು ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಕುರಿತಂತೆ ನಾವಿಬ್ಬರೂ ಕೇವಲ ಒಳ್ಳೆಯ ಗೆಳೆಯರು ಮಾತ್ರ ಎಂಬುದಾಗಿ ಅಂಚಲ್ ಕುಮಾರ್ ರವರು ಹೇಳಿಕೊಂಡಿದ್ದರು.

ಮಿನಿಶ ಲಾಂಬ; ನಟಿ ಮಿನಿಶ ಲಾಂಬ ಹಾಗೂ ಕ್ರಿಕೆಟಿಗ ಯುವರಾಜ್ ಸಿಂಗ್ ರವರ ಚುಂಬನ ನೀಡುತ್ತಿರುವ ಫೋಟೋಗಳು ಮಾಧ್ಯಮಗಳಲ್ಲಿ ವೈರಲ್ ಆಗಿದ್ದು. ಇದರ ಕುರಿತಂತೆ ಮಿನಿಷಾ ಅದು ನಾನಲ್ಲ ನನ್ನ ಹಾಗೆ ಇರುವ ತದ್ರೂಪಿ ಮಾಡಲ್ ಎಂಬುದಾಗಿ ಹೇಳಿ ಜಾರಿಕೊಂಡಿದ್ದಾರೆ.

ಹೆಜಲ್ ಕೀಚ್; ಹೆಜಲ್ ಕೀಚ್ ಇಂಗ್ಲೆಂಡ್ ಮೂಲದ ಮಾಡಲ್ ಆಗಿದ್ದು ಬಾಲಿವುಡ್ ಚಿತ್ರರಂಗದಲ್ಲಿ ನಟಿಸಿದ್ದಾರೆ. ಹಲವಾರು ವರ್ಷಗಳ ಡೇಟಿಂಗ್ ನಂತರ ಇಬ್ಬರೂ ಕೂಡ 2016 ರಲ್ಲಿ ಮದುವೆಯಾಗಿ ಈಗ ಒಂದು ಮಗುವಿನ ಪೋಷಕರಾಗಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Leave A Reply

Your email address will not be published.