ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಡಿಕೆಶಿಗೆ ಮೊದಲ ಚುನಾವಣೆಯಲ್ಲಿಯೇ ಗು’ದ್ದು ಖಚಿತ ! ಬಿಜೆಪಿ ಭಕ್ತರು ಫುಲ್ ಖುಷ್ !

ಇದೀಗ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಉಪ ಚುನಾವಣೆಯಲ್ಲಿ ಗೆಲ್ಲಲು ತಮ್ಮದೇ ಆದ ಕಾರ್ಯ ತಂತ್ರವನ್ನು ರೂಪಿಸುವಲ್ಲಿ ನಿರತವಾಗಿವೆ. ಬಿಜೆಪಿ ಪಕ್ಷಕ್ಕೆ ರಾಜರಾಜೇಶ್ವರಿನಗರ ಕ್ಷೇತ್ರ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ, ಮತ್ತೊಂದೆಡೆ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿರುವ ಬಿಜೆಪಿ ಪಕ್ಷಕ್ಕೆ ಸೋಲನ್ನು ತೋರಿಸಿ ಮುಜುಗರಕ್ಕೆ ಒಳಗಾಗುವಂತೆ ಮಾಡಲು ಸಿದ್ಧತೆ ನಡೆಸುತ್ತಿದೆ. ಮತ್ತೊಂದೆಡೆ ಜೆಡಿಎಸ್ ಪಕ್ಷವು ಶಿರಾ ಕ್ಷೇತ್ರದ ಮೇಲೆ ಹೆಚ್ಚಿನ ಒಲವು ತೋರುತ್ತಿದ್ದರೂ ಕೂಡ ಗೆದ್ದರೆ ಒಂದು ಬೋನಸ್ ಅಂಕ ವಿದ್ದಂತೆ ಎಂದುಕೊಂಡು ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ. ಈ ಬಾರಿ ಈ ಮೂರು ಪಕ್ಷಗಳಿಗಿಂತಲೂ ವ್ಯಕ್ತಿಗತವಾಗಿ ರಾಜ ರಾಜೇಶ್ವರಿನಗರದ ಚುನಾವಣೆ ಬಾರಿ ಕಾವು ಏರಿಸುತ್ತಿದೆ. ಇಷ್ಟು ದಿವಸ ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿರುವ ಡಿಕೆ ಶಿವಕುಮಾರ್ ಅವರು ಇದೇ ಮೊಟ್ಟ ಮೊದಲ ಬಾರಿಗೆ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಉಪಚುನಾವಣೆಯನ್ನು ತಮ್ಮ ಅಧ್ಯಕ್ಷತೆಯಲ್ಲಿ ಎದುರಿಸುತ್ತಿದ್ದಾರೆ.

ಅದೇ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ರಾಜ ರಾಜೇಶ್ವರಿ ನಗರದಲ್ಲಿ ಗೆಲ್ಲಿಸುವ ಮೂಲಕ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ತಯಾರು ನಡೆಸುತ್ತಿದ್ದಾರೆ. ಹಲವಾರು ಕಾಂಗ್ರೆಸ್ ಪಕ್ಷದ ನಾಯಕರ ಮನವೊಲಿಸಿ ಜಾತಿಯ ಲೆಕ್ಕಾಚಾರದ ಮೇರೆಗೆ ರಾಜರಾಜೇಶ್ವರಿ ನಗರದಲ್ಲಿ ಮಾಜಿ ಐಪಿಎಸ್ ಅಧಿಕಾರಿ ದಿವಂಗತ ಡಿಕೆ ರವಿ ರವರ ಪತ್ನಿಯನ್ನು ಕಣಕ್ಕಿಳಿಸುವ ಮೂಲಕ ಜಾತಿ ಲೆಕ್ಕಾಚಾರವಷ್ಟೇ ಅಲ್ಲದೆ ಅನುಕಂಪದ ಆಧಾರದ ಮೇರೆಗೆ ಮತ ಕೇಳುವ ಸಿದ್ಧತೆಗಳು ನಡೆದಿವೆ.

ಹೌದು, ಕಾಂಗ್ರೆಸ್ ಪಕ್ಷಕ್ಕೆ ಅನುಕಂಪ ಬಹಳ ಮುಖ್ಯವೆನಿಸಲಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ ಯಾಕೆಂದರೆ ಈಗಾಗಲೇ ಬಿಜೆಪಿ ಪಕ್ಷದ ಅಭ್ಯರ್ಥಿ ಮುನಿರತ್ನ ರವರು ಕ್ಷೇತ್ರದಲ್ಲಿ ಬಹಳ ವರ್ಚಸ್ಸನ್ನು ಹೊಂದಿರುವ ನಾಯಕರಾಗಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ತನ್ನ ಕ್ಷೇತ್ರದ ಜನತೆಯಿಂದ ಹಿಡಿದು ಇತರ ಕ್ಷೇತ್ರಗಳ ಜನತೆಗೂ ಕೂಡ ಭಾರಿ ಪ್ರಮಾಣದಲ್ಲಿ ಸಹಾಯ ಹಸ್ತ ಚಾಚಿ ಮನೆಮನೆಗೆ ಆಹಾರ ಸಾಮಗ್ರಿಗಳನ್ನು ತಲುಪಿಸಿ ದಿನಕ್ಕೆ ಸಾವಿರಾರು ಜನರಿಗೆ ನೀಡುವ ಮೂಲಕ ಸದ್ದು ಮಾಡಿದ ಮುನಿರತ್ನ ರವರು ಈ ಬಾರಿಯ ಚುನಾವಣೆಯಲ್ಲಿ ಗೆದ್ದು, ತನ್ನನ್ನು ವಿಧಾನಸೌಧದಲ್ಲಿ ಏಕವಚನದಲ್ಲಿ ಮಾಧ್ಯಮಗಳ ಮುಂದೆ ನಿಂದಿಸಿದ ಡಿಕೆ ಶಿವಕುಮಾರ್ ರವರ ವಿರುದ್ಧ ತೊಡೆ ತಟ್ಟಲು ಇನ್ನಿಲ್ಲದ ತಯಾರಿ ನಡೆಸಿದ್ದಾರೆ.

ಮುನಿರತ್ನ ರವರು ಇಷ್ಟೆಲ್ಲಾ ಲಾಭದಾಯಕ ಸಂಗತಿಗಳನ್ನು ಹೊಂದಿರುವ ಕಾರಣ ಡಿಕೆ ಶಿವಕುಮಾರ್ ಅವರು ಬಹಳ ಅಳೆದು-ತೂಗಿ ಅನುಕಂಪ ಮತ್ತು ಜಾತಿಯ ಆಧಾರದ ಮೇರೆಗೆ ಮತ
ಕೇಳೋಣ ಎಂದು ಡಿಕೆ ರವಿ ರವರ ಪತ್ನಿಯನ್ನು ಕಣಕ್ಕಿಳಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಡಿಕೆ ಶಿವಕುಮಾರ್ ಅವರಿಗೆ ಶಾಕ್ ಗಳ ಮೇಲೆ ಶಾಕ್ ಗಳ ಎದುರಾಗಿದೆ. ಹೌದು ಸ್ನೇಹಿತರೇ, ಕೆಲವು ದಿನಗಳ ಹಿಂದೆ ಡಿಕೆ ರವಿ ರವರ ಹೆಸರು ಕೇಳಿಕೊಂಡು ಮತ ಕೇಳಿದರೆ ಯಾವ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಡಿಕೆ ರವಿ ರವರ ತಾಯಿ ಉತ್ತರ ನೀಡಿದ್ದಾರೆ. ಮತ್ತೊಂದೆಡೆ ಕುಸುಮ ರವರು, ಕಾಂಗ್ರೆಸ್ ಪಕ್ಷದ ಪರವಾಗಿ ಕಣಕ್ಕಿಳಿಯುತ್ತಿರುವುದು ಕ್ಷೇತ್ರದ ಜನತೆ ಹಾಗೂ ರಾಜ್ಯದ ಜನತೆಗೆ ಇಷ್ಟವಾಗಿಲ್ಲ ಎಂಬುದಂತೂ ಸಾಮಾಜಿಕ ಜಾಲತಾಣಗಳ ಅಭಿಪ್ರಾಯಗಳಲ್ಲಿ ಬಹಳ ಸ್ಪಷ್ಟವಾಗಿ ತಿಳಿಯುತ್ತಿದೆ. ಸ್ವತಹ ಕಾಂಗ್ರೆಸ್ ಪಕ್ಷದ ಫೇಸ್ಬುಕ್ ಪೇಜ್ ಗಳು ನಡೆಸುತ್ತಿರುವ ಸಮೀಕ್ಷೆಯಲ್ಲಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೂಡ ಯಾವುದೇ ಕಾರಣಕ್ಕೂ ಕುಸುಮಾ ರವರಿಗೆ ಟಿಕೆಟ್ ನೀಡಬಾರದು ಎಂದು ಒತ್ತಾಯ ಮಾಡಿದ್ದಾರೆ.

ಇನ್ನೂ ಇಷ್ಟೇ ಅಲ್ಲದೆ ಇಷ್ಟು ದಿವಸ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ರವರ ಪ್ರಭಾವವಿರುವ ಕ್ಷೇತ್ರದಲ್ಲಿ ನೇರವಾಗಿ ಎದುರು ಹೇಳಲು ಸಾಧ್ಯವಾಗದೇ ಸುಮ್ಮನೆ ತಲೆದೂಗಿಸಿ ಕುಸುಮಾ ರವರಿಗೆ ಟಿಕೆಟ್ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ಕಾರ್ಯಕರ್ತರು ಹಾಗೂ ನಾಯಕರಿಗೆ ಟಿಕೆಟ್ ನೀಡದೆ ಇತರ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕರೆತಂದಿರುವುದು ಆಂತರಿಕ ಕಾ’ಳಗಕ್ಕೆ ಕಾರಣವಾಗಿದೆ. ಎಲ್ಲವೂ ಕೇವಲ ಬೂದಿ ಮುಚ್ಚಿದ ಕೆಂಡದಂತಿದ್ದು ಬೆಂಕಿ ಯಾಗುವುದು ಚುನಾವಣೆ ಹತ್ತಿರ ಬಂದಾಗಲೇ. ಇನ್ನು ಮುನಿರತ್ನ ರವರ ಜೊತೆ ಕಾಂಗ್ರೆಸ್ ಪಕ್ಷದ ಕಾರ್ಪೋರೇಟರ್ ಗಳು ಕೂಡ ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದು ಇಡೀ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಪಾರುಪತ್ಯ ಹೆಚ್ಚಾಗಿದೆ. ಎಲ್ಲಾ ಸವಾಲುಗಳ ನಡುವೆ ಡಿಕೆ ಶಿವಕುಮಾರ್ ರವರು ಗೆಲ್ಲುವುದು ಅಸಾಧ್ಯದ ಮಾತು ಎನಿಸಿದೆ. ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಚುನಾವಣೆಯಲ್ಲಿ ಗೆ ಮುಜುಗರ ಅನುಭವಿಸುವ ಸಾಧ್ಯತೆಗಳು ಹೆಚ್ಚು ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಒಂದು ವೇಳೆ ಅದೇ ನಡೆದಲ್ಲಿ ಹೈಕಮಾಂಡ್ ಮುಂದೆ ಡಿಕೆ ಶಿವಕುಮಾರ್ ಅವರು ಭಾರಿ ಮುಜುಗರಕ್ಕೆ ಒಳಗಾಗುವುದೂ ಖಚಿತ.

Comments are closed.