ಬಿಗ್ ನ್ಯೂಸ್: ಎಲ್ಲಾ ನೋವನ್ನು ಹೊರಹಾಕಿದ ಬಳಿಕ ಸಮಂತಾ ಹಾಗೂ ಚೈತನ್ಯ ವಿಚಾರದಲ್ಲಿ ಬಿಗ್ ಟ್ವಿಸ್ಟ್: ಮತ್ತೆ ಸಿಹಿ ಸುದ್ದಿ ಕೊಡುತ್ತಾರ?

ನಮಸ್ಕಾರ ಸ್ನೇಹಿತರೆ ಬರೋಬ್ಬರಿ ಏಳು ವರ್ಷಗಳ ಕಾಲ ಪ್ರೀತಿಸಿ ನಂತರ ಮದುವೆಯಾಗಿ ನಾಲ್ಕು ವರ್ಷಗಳ ದಾಂಪತ್ಯ ಜೀವನದ ನಂತರ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ನಾಗಚೈತನ್ಯ ಹಾಗೂ ಸಮಂತ ಇಬ್ಬರು ಕೂಡ ವಿವಾಹ ವಿಚ್ಛೇದನವನ್ನು ನೀಡಿ ಬೇರೆಯಾಗಿದ್ದು ನಿಮಗೆಲ್ಲ ತಿಳಿದಿದೆ. ಇಬ್ಬರು ಜೊತೆಯಾಗಿ ಮಜೀಲಿ ಚಿತ್ರದಲ್ಲಿ ಒಟ್ಟಾಗಿ ನಟಿಸಿರುವ ಸೂಪರ್ ಹಿಟ್ ಆಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವಿವಾಹ ವಿಚ್ಛೇದನವನ್ನು ಪಡೆದು ಬೇರೆಯಾದ ನಂತರ ಇಬ್ಬರೂ ಕೂಡ ಪರಸ್ಪರ ಅಷ್ಟೊಂದು ಸರಿಯಾದ ಸಂಬಂಧವನ್ನು ಹೊಂದಿಲ್ಲ ಎಂದು ಹೇಳಬಹುದಾಗಿದೆ.

ಯಾಕೆಂದರೆ ಸಮಂತ ಇತ್ತೀಚಿಗಷ್ಟೇ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ನಾಗಚೈತನ್ಯ ಅವರ ಕುರಿತಂತೆ ಪ್ರಶ್ನೆ ಬಂದಾಗಲೆಲ್ಲ ಅಷ್ಟೊಂದು ಸಮಾಧಾನಕರ ಉತ್ತರವನ್ನು ನೀಡಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ನಾವಿಬ್ಬರೂ ಒಂದೇ ಕೋಣೆಯಲ್ಲಿ ಇದ್ದರೆ ಅಲ್ಲಿ ಯಾವುದೇ ಚೂಪಾದ ವಸ್ತುಗಳು ಇರಬಾರದು ಎಂಬುದಾಗಿ ಹೇಳಿ ನಾಗಚೈತನ್ಯ ರವರ ವಿರುದ್ಧ ಇರುವ ಕೋಪವನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ. ಹೀಗಾಗಿ ನಾಗಚೈತನ್ಯ ಕರಗಿ ನೀರಾದರೂ ಕೂಡ ಸಮಂತ ರವರ ಕೋಪ ಕರಗುವುದಿಲ್ಲ ಎಂದು ಹೇಳಬಹುದಾಗಿದೆ. ಆದರೆ ತೆಲುಗು ಚಿತ್ರರಂಗದಲ್ಲಿ ಈಗ ಮತ್ತೊಂದು ಸುದ್ದಿ ಕೇಳಿಬರುತ್ತಿದ್ದು ಇವರಿಬ್ಬರು ಮತ್ತೆ ಒಂದಾಗಬಹುದಾ ಎಂಬ ನಿರೀಕ್ಷೆಯನ್ನು ಮೂಡಿಸುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.

samchay | ಬಿಗ್ ನ್ಯೂಸ್: ಎಲ್ಲಾ ನೋವನ್ನು ಹೊರಹಾಕಿದ ಬಳಿಕ ಸಮಂತಾ ಹಾಗೂ ಚೈತನ್ಯ ವಿಚಾರದಲ್ಲಿ ಬಿಗ್ ಟ್ವಿಸ್ಟ್: ಮತ್ತೆ ಸಿಹಿ ಸುದ್ದಿ ಕೊಡುತ್ತಾರ?
ಬಿಗ್ ನ್ಯೂಸ್: ಎಲ್ಲಾ ನೋವನ್ನು ಹೊರಹಾಕಿದ ಬಳಿಕ ಸಮಂತಾ ಹಾಗೂ ಚೈತನ್ಯ ವಿಚಾರದಲ್ಲಿ ಬಿಗ್ ಟ್ವಿಸ್ಟ್: ಮತ್ತೆ ಸಿಹಿ ಸುದ್ದಿ ಕೊಡುತ್ತಾರ? 2

ಹೌದು ಗೆಳೆಯರೇ ನಾವು ಮಾತನಾಡುತ್ತಿರುವುದು ತೆಲುಗು ಚಿತ್ರರಂಗದ ದೊಡ್ಡ ನಿರ್ಮಾಪಕರಾಗಿರುವ ದಿಲ್ ರಾಜು ರವರು ಇವರಿಬ್ಬರನ್ನು ಇಟ್ಟುಕೊಂಡು ಹೊಸ ಸಿನಿಮಾ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬರುತ್ತಿದೆ. ಇವರಿಬ್ಬರ ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಇದನ್ನು ದಿಲ್ ರಾಜು ಯಾವ ರೀತಿ ಸಾಧ್ಯವಾಗಿಸುತ್ತಾರೆ ಎಂಬುದನ್ನು ಮೊದಲು ಕಾದುನೋಡಬೇಕಾಗಿದೆ.

Comments are closed.