ಅವರು ಪತಿ ಅಲ್ಲ, ಮಾಜಿ ಪತಿ. ಖಡಕ್ ಆಗಿಯೇ ಬೆಡ್ ರೂಮ್ ಸೀಕ್ರೆಟ್ ಅನ್ನು ತೆರೆದಿಟ್ಟ ಸಮಂತಾ. ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ತೆಲುಗು ಚಿತ್ರರಂಗದ ಸ್ಟಾರ್ ಜೋಡಿಗಳಾಗಿದ್ದ ಸಮಂತ ಹಾಗೂ ನಾಗಚೈತನ್ಯ ಇಬ್ಬರೂ ಕೂಡ ಪರಸ್ಪರ ವೈಮನಸ್ಸಿನ ಕಾರಣದಿಂದಾಗಿ ವೈಯಕ್ತಿಕ ಅಸಮತೋಲನದ ಕಾರಣದಿಂದಾಗಿ ವಿವಾಹ ವಿಚ್ಚೇದನ ನೀಡಿದ್ದು ತಿಳಿದಿದೆ. ಇದು ಭಾರತೀಯ ಚಿತ್ರರಂಗದಲ್ಲಿ ಕಳೆದ ವರ್ಷ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ವಿಚಾರ ಎಂದರೆ ತಪ್ಪಾಗಲಾರದು. ಇಲ್ಲಿ ನಾವು ಮಾತನಾಡಲು ಹೇಳುತ್ತಿರುವುದು ಇದೇ ಜೋಡಿಯ ವಿಚಾರದ ಕುರಿತಂತೆ. ವಿವಾಹ ವಿಚ್ಛೇದನದ ನಂತರ ಇಬ್ಬರೂ ಕೂಡ ಬೇರೆಬೇರೆಯಾಗಿ ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂಬುದನ್ನು ನಿಮಗೆ ಹೇಳಬೇಕಾಗಿಲ್ಲ.

ಅದರಲ್ಲೂ ವಿಶೇಷವಾಗಿ ಹೋಲಿಸಿದರೆ ಸಮಂತಾ ರವರ ಸಿನಿಮಾಗಳು ದೊಡ್ಡಮಟ್ಟದಲ್ಲಿ ಚಿತ್ರಮಂದಿರಗಳಲ್ಲಿ ಯಶಸ್ಸನ್ನು ಕಂಡಿದ್ದವು. ಕೈತುಂಬ ಅವಕಾಶಗಳು ಹಾಗೂ ವಿವಾಹ ವಿಚ್ಛೇದನದ ನಂತರ ವಿಭಿನ್ನ ಶೈಲಿಯ ಪಾತ್ರಗಳನ್ನು ಕೂಡ ಸಮಂತಾ ರವರು ಒಪ್ಪಿಕೊಳ್ಳುತ್ತಿದ್ದಾರೆ. ಇತ್ತಕಡೆ ನಾಗಚೈತನ್ಯ ಕೂಡ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು ಕೆಲವೊಂದು ಸಿನಿಮಾಗಳು ಅವರಿಗೆ ಗೆಲುವನ್ನು ತಂದು ಕೊಟ್ಟಿದೆ. ಕರಣ್ ಜೋಹರ್ ರವರು ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಸಮಂತಾ ಅವರು ನಟ ಅಕ್ಷಯ್ ಕುಮಾರ್ ಅವರ ಜೊತೆಗೆ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೂಡ ಕರಣ್ ಜೋಹರ್ ನಾಗಚೈತನ್ಯ ಅವರ ಕುರಿತಂತೆ ನಿಮ್ಮ ಪತಿ ಎಂಬುದಾಗಿ ಮಾತನಾಡಿದಾಗ ಅಲ್ಲಿ ಸಮಂತ ಕೆಲವೊಂದು ಮಾತನ್ನು ಆಡುತ್ತಾರೆ.

sam chay 1 | ಅವರು ಪತಿ ಅಲ್ಲ, ಮಾಜಿ ಪತಿ. ಖಡಕ್ ಆಗಿಯೇ ಬೆಡ್ ರೂಮ್ ಸೀಕ್ರೆಟ್ ಅನ್ನು ತೆರೆದಿಟ್ಟ ಸಮಂತಾ. ಹೇಳಿದ್ದೇನು ಗೊತ್ತೇ??
ಅವರು ಪತಿ ಅಲ್ಲ, ಮಾಜಿ ಪತಿ. ಖಡಕ್ ಆಗಿಯೇ ಬೆಡ್ ರೂಮ್ ಸೀಕ್ರೆಟ್ ಅನ್ನು ತೆರೆದಿಟ್ಟ ಸಮಂತಾ. ಹೇಳಿದ್ದೇನು ಗೊತ್ತೇ?? 2

ಕರಣ್ ಜೋಹರ್ ರವರು ನಾಗಚೈತನ್ಯ ರವರನ್ನು ಪತಿಯಂದು ಕರೆದಾಗ ಅವರು ಮಾಜಿ ಪತಿ ಎನ್ನುವುದಾಗಿ ಸಮಂತ ತಿದ್ದುತ್ತಾರೆ. ನಿಮ್ಮ ನಡುವಿನ ರಿಲೇಶನ್ ಹೇಗಿದೆ ಎಂದು ಕೇಳಿದಾಗ ಒಂದು ವೇಳೆ ನಮ್ಮನ್ನು ಒಂದೇ ರೂಮಿನಲ್ಲಿ ಕೂಡಿಟ್ಟರೆ ಅಲ್ಲಿ ಮೊನಚಾದ ವಸ್ತುಗಳನ್ನು ಮುಚ್ಚಿಡಬೇಕು ಅಂದಿದ್ದಾರೆ. ಅಂದರೆ ಖಂಡಿತವಾಗಿ ಅವರಿಬ್ಬರ ನಡುವೆ ಉತ್ತಮ ಬಾಂಧವ್ಯ ಈಗ ಇಲ್ಲ ಎಂದು ಹೇಳಬಹುದು. ಈ ಸಂದರ್ಭದಲ್ಲಿ ನಾವಿಬ್ಬರು ವಿವಾಹ ವಿಚ್ಛೇದನ ತೆಗೆದುಕೊಳ್ಳುವಾಗ ಸಂತೋಷದಿಂದ ತೆಗೆದುಕೊಂಡಿಲ್ಲ ದುಃಖ ಇತ್ತು ಆದರೆ ಈಗ ನಾನು ಹಿಂದೆಂದಿಗಿಂತ ಸ್ಟ್ರಾಂಗ್ ಆಗಿದ್ದೇನೆ ಎಂಬುದಾಗಿ ಸಮಂತ ಹೇಳಿದ್ದಾರೆ.

Comments are closed.